ಇಂಡೋನೇಷ್ಯಾದ ಸುಮಾತ್ರಾದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ ಸೋಮವಾರ ಮುಂಜಾನೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.

Written by - Yashaswini V | Last Updated : Jan 16, 2023, 12:38 PM IST
  • ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ ಇಂದು ಮುಂಜಾನೆ ಸ್ಥಳೀಯ ಸಮಯ ಸುಮಾರು 6:30ರ (2330 GMT) ಸುಮಾರಿಗೆ ಈ ಪ್ರಬಲ ಭೂಕಂಪ ಸಂಭವಿಸಿದೆ.
  • ಭೂಕಂಪದ ಕೇಂದ್ರಬಿಂದುವು ಆಚೆಹ್ ಪ್ರಾಂತ್ಯದ ಸಿಂಗಿಲ್ ನಗರದ ದಕ್ಷಿಣ-ಆಗ್ನೇಯಕ್ಕೆ 48 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿ 48 ಕಿಲೋಮೀಟರ್ ಆಳದಲ್ಲಿದೆ ಎಂದು USGS ತಿಳಿಸಿದೆ.
  • ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG)ಯ ಪ್ರಕಾರ, ಇಂದು ಮುಂಜಾನೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ರಷ್ಟಿತ್ತು ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ಸುಮಾತ್ರಾದಲ್ಲಿ 6.0 ತೀವ್ರತೆಯ  ಪ್ರಬಲ ಭೂಕಂಪ  title=
Indonesia earthquake

ಜಕಾರ್ತ: ಇಂದು (ಸೋಮವಾರ) ಮುಂಜಾನೆ ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ  6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದುವು ಆಚೆಹ್ ಪ್ರಾಂತ್ಯದ ಸಿಂಗಿಲ್ ನಗರದ ದಕ್ಷಿಣ-ಆಗ್ನೇಯಕ್ಕೆ 48 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿ 48 ಕಿಲೋಮೀಟರ್ ಆಳದಲ್ಲಿದೆ ಎಂದು USGS ತಿಳಿಸಿದೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ ಇಂದು ಮುಂಜಾನೆ ಸ್ಥಳೀಯ ಸಮಯ ಸುಮಾರು 6:30ರ (2330 GMT) ಸುಮಾರಿಗೆ ಈ ಪ್ರಬಲ ಭೂಕಂಪ ಸಂಭವಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪ್ರಬಲ ಭೂಕಂಪದಲ್ಲಿ ಇದುವರೆಗೂ ಯಾವುದೇ ಸಾವುನೋವುಗಳು ಅಥವಾ ಹೆಚ್ಚಿನ ಹಾನಿಯ ಬಗ್ಗೆ ವರದಿ ಆಗಿಲ್ಲ.

ಇದನ್ನೂ ಓದಿ- Nepal plane crash : ನೇಪಾಳ ವಿಮಾನ ದುರಂತ : 4 ಜನ ಸಿಬ್ಬಂದಿ, 68 ಪ್ರಯಾಣಿಕರ ದರ್ಮರಣ...!

ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG)ಯ ಪ್ರಕಾರ, ಇಂದು ಮುಂಜಾನೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ರಷ್ಟಿತ್ತು ಎಂದು ತಿಳಿದುಬಂದಿದೆ.  

ಇಂಡೋನೇಷ್ಯಾ ಪೆಸಿಫಿಕ್ "ರಿಂಗ್ ಆಫ್ ಫೈರ್" ನಲ್ಲಿನ ಸ್ಥಾನದಿಂದಾಗಿ ಆಗಾಗ್ಗೆ ಭೂಕಂಪನ ಮತ್ತು ಜ್ವಾಲಾಮುಖಿ ಚಟುವಟಿಕೆಯನ್ನು ಅನುಭವಿಸುತ್ತದೆ, ಅಲ್ಲಿ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಗೊಳ್ಳುತ್ತವೆ. 

ಇದನ್ನೂ ಓದಿ- Watch Video: ನೇಪಾಳ ವಿಮಾನ ದುರಂತ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಇದಕ್ಕೂ ಮೊದಲು 2022ರ ನವೆಂಬರ್ 21 ರಂದು, ಜಾವಾ ಮುಖ್ಯ ದ್ವೀಪದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸುಮಾರು 602 ಜನರು ಸಾವನ್ನಪ್ಪಿದ್ದರು.

ಸುಮಾತ್ರಾ ದ್ವೀಪದಲ್ಲಿ ಡಿಸೆಂಬರ್ 26, 2004 ರಂದು ಅತ್ಯಂತ ಭೀಕರವಾದ ಭೂಕಂಪ ಸಂಭವಿಸಿತ್ತು. ಈ ಕಾರಣದಿಂದಾಗಿ ಹಿಂದೂ ಮಹಾಸಾಗರದಲ್ಲಿ ಸುನಾಮಿ ಸೃಷ್ಟಿಯಾಗಿ ಇದು ಶ್ರೀಲಂಕಾ, ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಸುಮಾರು  230,000 ಜನರನ್ನು ಬಲಿತೆಗೆದುಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News