ಸ್ವಚ್ಛತೆಯ ನೆಪ ಹೇಳಿ ಹೆಂಡತಿಗೆ ಡೈವೋರ್ಸ್ ನೀಡಿದ ಭೂಪ!

    

Updated: Jan 13, 2018 , 03:53 PM IST
ಸ್ವಚ್ಛತೆಯ ನೆಪ ಹೇಳಿ ಹೆಂಡತಿಗೆ ಡೈವೋರ್ಸ್ ನೀಡಿದ ಭೂಪ!
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿಯೊಬ್ಬರ ಜೀವನದಲ್ಲಿ ನೈರ್ಮಲ್ಯ ಎನ್ನುವುದು ಗಮನಾರ್ಹವಾದ ಪಾತ್ರವಹಿಸುತ್ತದೆ.ಆದ್ದರಿಂದ ಇನ್ನು ಮುಂದೆ ಅದು ಸಂಬಂಧದಲ್ಲಿ ಸಹಿತ ಬಿರುಕನ್ನು ಉಂಟು ಮಾಡಬಹುದು. 

ಹೌದು, ಇದು ಅಚ್ಚರಿಯಾದರೂ ಸತ್ಯ. ತೈವಾನಿನ ತೈಪೆಯಲ್ಲಿ ವ್ಯಕ್ತಿಯೋರ್ವನು ತನ್ನ ಹೆಂಡತಿ ತನ್ನ ಹೆಂಡತಿ ತನ್ನ ದೇಹದ ಸ್ವಚ್ಚತೆಯನ್ನು ಕಾಪಾಡಲಿಲ್ಲ ಎನ್ನುವ ಕಾರಣಕ್ಕಾಗಿ ಖಿನ್ನತೆಗೆ ಒಳಗಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಅವನ ಹೆಂಡತಿ ಪ್ರತಿ ದಿನ ತನ್ನ ಹಲ್ಲನ್ನು ಸರಿಯಾಗಿ ಉಜ್ಜುತ್ತಿರಲಿಲ್ಲ ಅಲ್ಲದೆ ಕೂದಲುಗಳನ್ನು ಸ್ವಚ್ಚಗೊಲಿಸುತ್ತಿರಲಿಲ್ಲ ಎಂದು ಅವನು ದೂರಿದ್ದಾನೆ. ಮದುವೆ ಮಾಡಿಕೊಳ್ಳುವುದಕ್ಕೂ ಮೊದಲು ಅವಳು ಕನಿಷ್ಠ ವಾರಕ್ಕೆ ಒಮ್ಮೆಯಾದರು ಸ್ನಾನ ಮಾಡುತಿದ್ದಳು. ಆದರೆ ಮದುವೆಯಾದ ನಂತರ ಅವಳು ವರ್ಷಕ್ಕೊಂದು ಸಾರಿ ಮಾತ್ರ ಸ್ನಾನ ಮಾಡುತ್ತಿದ್ದಳು ಎಂದು ದೂರಿದ್ದಾನೆ. ಅಲ್ಲದೆ ಅವಳು ಅವನಿಗೆ ಉದ್ಯೋಗ ಮಾಡಲು ಸಹಿತ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಅವನು ಅವಳ ತಂದೆ ತಾಯಿಯವರೇ ಎಲ್ಲ ವನ ಖರ್ಚು ವೆಚ್ಚವನ್ನು ಭರಿಸುತ್ತಿದ್ದರು.

ಇದರಿಂದ ಅವನು ತನ್ನ ಹೆಂಡತಿಗೆ ಹೇಳದೆ 2015ರಲ್ಲಿ ಮನೆ ಬಿಟ್ಟು ಉದ್ಯೋಗಕ್ಕಾಗಿ  ಸಿಂಚುಗೆ ತೆರಳಿದನು ಆದರೆ ಒಂದು ತಿಂಗಳ ನಂತರ ಅವಳು ತನ್ನ ಗಂಡ ಉದ್ಯೋಗ ಮಾಡುವುದನ್ನು ಪತ್ತೆಹಚ್ಚಿ ಕೆಲಸ ಬಿಡುವಂತೆ  ಅವನಿಗೆ ಕಟ್ಟಪ್ಪಣೆ ವಿಧಿಸಿದಳು. ಆದರೆ ಇದಕ್ಕೆ ತಿರಸ್ಕರಿಸಿದ ಅವನು ಅವಳಿಗೆ ವಿಚ್ಚೇದನ ನೀಡಲು ಅರ್ಜಿಹಾಕಿದ್ದಾನೆ. ಆದರೆ ಇವನ ಎಲ್ಲ ಆರೋಪಗಳನ್ನು ಅವನ ಪತ್ನಿ ತಳ್ಳಿಹಾಕಿದ್ದಾಳೆ!