Viral: ಕುದುರೆ ಜೊತೆ ರೈಲು ಹತ್ತಿದ ಭೂಪ!

ಭೂಪನೊಬ್ಬ ಕುದುರೆಯನ್ನು ರೈಲಿನಲ್ಲಿ ಕರೆದೊಯ್ದಿದ್ದಾನೆ. ಇದೀಗ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.  

Last Updated : Aug 24, 2018, 11:37 AM IST
Viral: ಕುದುರೆ ಜೊತೆ ರೈಲು ಹತ್ತಿದ ಭೂಪ! title=

ರೈಲಿನಲ್ಲಿ ಇತ್ತೀಚೆಗೆ ಕೋಳಿಗಳನ್ನು, ಕುರಿಗಳನ್ನು ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದ್ದ ಘಟನೆಗಳು ಭಾರತದಲ್ಲಿ ಬೆಳಕಿಗೆ ಬಂದಿದ್ದವು. ಆದರೆ ಇದೀಗ ಆಸ್ಟ್ರೇಲಿಯಾದ ಭೂಪನೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುದುರೆಯನ್ನು ರೈಲಿನಲ್ಲಿ ಕರೆದೊಯ್ದಿದ್ದಾನೆ. ಇದೀಗ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಸ್ಟೈರಿಯಾ ರಾಜ್ಯದ ವ್ಯಕ್ತಿಯೊಬ್ಬ ತನ್ನ ಕುದುರೆ ಫ್ರಿಡಾ ಜೊತೆ ಎರಡು ರೈಲು ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ರೈಲು ನಿರ್ವಾಹಕರು ಆತನನ್ನು ಕುದುರೆಯೊಂದಿಗೆ ಪ್ರಯಾಣಿಸಲು ತಡೆದಿದ್ದಾರೆ. ಈ ಸನ್ನಿವೇಶ ಅಲ್ಲಿದ್ದ ಇತರ ಪ್ರಯಾಣಿಕರನ್ನು ನಗೆಗಡಲಲ್ಲಿ ಮುಳುಗುಸಿತು. 

ಈ ಫೋಟೋವನ್ನು ಅಲ್ಲಿನ ಒಬಿಬಿ ಸೋಷಿಯಲ್ ಮೀಡಿಯಾ ಟೀಂ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Trending News