Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?

ಜಗತ್ತನ್ನು ಹೊಸ ಬಿಕ್ಕಟ್ಟಿನತ್ತ ತಳ್ಳಲು ಚೀನಾ ತಯಾರಿ ನಡೆಸುತ್ತಿದೆ. ತೈವಾನ್ ಬಗ್ಗೆ ತನ್ನ ನಿಲುವನ್ನು ಬದಲಾಯಿಸದಿದ್ದರೆ ಬೀಜಿಂಗ್ ಜಪಾನ್ ವಿರುದ್ಧ ಪರಮಾಣು ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದೆ. ಈ ವೀಡಿಯೊವನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿ ಚಾನೆಲ್‌ನಲ್ಲಿ ಪ್ಲೇ ಮಾಡಲಾಗಿದ್ದು ಸ್ವಲ್ಪ ಸಮಯದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ.  

Written by - Yashaswini V | Last Updated : Jul 21, 2021, 08:33 AM IST
  • ಜಗತ್ತನ್ನು ಹೊಸ ಬಿಕ್ಕಟ್ಟಿನತ್ತ ತಳ್ಳಲು ಚೀನಾ ತಯಾರಿ
  • ಜಪಾನ್‌ಗೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ ಚೀನಾ
  • ತೈವಾನ್ ವಿಷಯದಲ್ಲಿ ಏನನ್ನೂ ಕೇಳಲು ಬಯಸುವುದಿಲ್ಲ ಎಂದ ಚೀನಾ
Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?  title=
ತೈವಾನ್ ವಿಷಯದಲ್ಲಿ ಜಪಾನ್‌ಗೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ ಚೀನಾ

ಬೀಜಿಂಗ್: ಇಡೀ ವಿಶ್ವವನ್ನೇ ಕರೋನವೈರಸ್ (Coronavirus) ಸಾಂಕ್ರಾಮಿಕಕ್ಕೆ ತಳ್ಳಿರುವ ಚೀನಾ (China), ಇದೀಗ ಜಗತ್ತನ್ನು ಪರಮಾಣು ಬಿಕ್ಕಟ್ಟಿಗೆ ತಳ್ಳುವ ಸಾಧ್ಯತೆಯಿದೆ? ತೈವಾನ್ (Taiwan) ವಿಷಯಕ್ಕೆ ಸಂಬಂಧಿಸಿದಂತೆ ಚೀನಾ ಜಪಾನ್ ಮೇಲೆ ಪರಮಾಣು ದಾಳಿ (Nuclear Attack) ನಡೆಸುವ ಬೆದರಿಕೆ ಹಾಕಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ, ಇದು ಜಪಾನ್ ತೈವಾನ್‌ಗೆ ಸಹಾಯ ಮಾಡುವ ತಪ್ಪನ್ನು ಮಾಡಿದರೆ, ಅದರ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಲಾಗುವುದು ಎಂದು ಹೇಳಲಾಗಿದೆ. ಬೀಜಿಂಗ್ ಯಾವಾಗಲೂ ತೈವಾನ್ ವಿಷಯದಲ್ಲಿ ಆಕ್ರಮಣವನ್ನು ಎದುರಿಸುತ್ತಿದ್ದರೂ, ಈ ರೀತಿಯಾಗಿ ಪರಮಾಣು ದಾಳಿಯ ಬೆದರಿಕೆ ಬಹುಶಃ ಇದೇ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದೆ.

'ಫಾಕ್ಸ್ ನ್ಯೂಸ್' ವರದಿಯ ಪ್ರಕಾರ, ಈ ವೀಡಿಯೊವನ್ನು ಸಿಪಿಸಿಯ ಅನುಮತಿಯೊಂದಿಗೆ ಚಾನೆಲ್‌ನಲ್ಲಿ ಪ್ಲೇ ಮಾಡಲಾಗಿದೆ. 'ನಾವು ಮೊದಲು ಪರಮಾಣು ಬಾಂಬ್ ಬಳಸುತ್ತೇವೆ' ಎಂದು ವಿಡಿಯೋದಲ್ಲಿ ಹೇಳಲಾಗಿದೆ. ನಾವು ಪರಮಾಣು ಬಾಂಬುಗಳನ್ನು  (Nuclear Attack) ಬಳಸುವುದನ್ನು ಮುಂದುವರಿಸುತ್ತೇವೆ ಮತ್ತು ಜಪಾನ್ ಬೇಷರತ್ತಾಗಿ ಶರಣಾಗುವವರೆಗೂ ಅದನ್ನು ಮುಂದುವರಿಸುತ್ತೇವೆ ಎಂದು ಇದರಲ್ಲಿ ತಿಳಿಸಲಾಗಿದೆ. ಚೀನಾದ ಪ್ಲಾಟ್‌ಫಾರ್ಮ್ ಕ್ಸಿಗುವಾದಲ್ಲಿ 2 ಮಿಲಿಯನ್ ವೀಕ್ಷಣೆಗಳನ್ನು ಪಡೆದ ನಂತರ ವೀಡಿಯೊವನ್ನು ಅಳಿಸಲಾಗಿದೆ ಎಂದು ತೈವಾನ್ ನ್ಯೂಸ್ ತಿಳಿಸಿದೆ. ಆದರೆ ವೀಡಿಯೊದ ನಕಲನ್ನು ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ- ಪಾಕ್ ಉಗ್ರ ಸಂಘಟನೆಗಳ ಜೊತೆಗಿನ ಹೊಂದಾಣಿಕೆಯನ್ನು ನಿರಾಕರಿಸಿದ ತಾಲಿಬಾನ್

ಟ್ಯಾರೊ ಅಸೊ (Taro Aso) ಅವರ ಹೇಳಿಕೆ:
ಸುಮಾರು ಎರಡು ವಾರಗಳ ಹಿಂದೆ ಜಪಾನ್ ತೈವಾನ್‌ನ (Taiwan) ಸಾರ್ವಭೌಮತ್ವವನ್ನು ರಕ್ಷಿಸುವ ಬಗ್ಗೆ ಮಾತನಾಡಿದ ಸಮಯದಲ್ಲಿ ಚೀನಾದಿಂದ ಈ ಬೆದರಿಕೆ ಬಂದಿದೆ. ಜಪಾನ್ ತೈವಾನ್ ಅನ್ನು ರಕ್ಷಿಸಬೇಕು ಎಂದು ಜಪಾನ್ ಉಪ ಪ್ರಧಾನ ಮಂತ್ರಿ ಟಾರೊ ಅಸೊ (Taro Aso) ಹೇಳಿದರು. ತೈವಾನ್‌ನಲ್ಲಿ ಯಾವುದೇ ದೊಡ್ಡ ಘಟನೆ ನಡೆದರೆ ಜಪಾನ್‌ನ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಅವರು ಹೇಳಿದರು. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ತೈವಾನ್ ಅನ್ನು ರಕ್ಷಿಸಲು ಜಪಾನ್ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದವರು ಆಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ- ವಿಶ್ವಾಸಮತವನ್ನು ಗೆದ್ದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ

ತೈವಾನ್ ವಿಷಯದ ಬಗ್ಗೆ ಜಪಾನ್ ತನ್ನ ಆಲೋಚನೆಯನ್ನು ಬದಲಾಯಿಸಬೇಕು- ಲಿಜಿಯಾನ್ 
ಮತ್ತೊಂದೆಡೆ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ (Zhao Lijian) ಕೂಡ ಹೇಳಿಕೆ ನೀಡಿದ್ದಾರೆ. ಸ್ಕೈ ನ್ಯೂಸ್ ಆಸ್ಟ್ರೇಲಿಯಾದ ವರದಿಯ ಪ್ರಕಾರ, ತೈವಾನ್ ವಿಷಯದ ಬಗ್ಗೆ ಜಪಾನ್ ತನ್ನ ಆಲೋಚನೆಯನ್ನು ಬದಲಾಯಿಸಬೇಕು ಎಂದು ಲಿಜಿಯಾನ್ ಹೇಳಿದ್ದಾರೆ. ಚೀನಾದ ವಕ್ತಾರರು, 'ತೈವಾನ್ ವಿಷಯದಲ್ಲಿ ಜಪಾನ್ ತನ್ನ ಆಲೋಚನೆಯನ್ನು ಬದಲಾಯಿಸುವಂತೆ ನಾವು ಮತ್ತೊಮ್ಮೆ ಒತ್ತಾಯಿಸುತ್ತೇವೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇದು ಅವಶ್ಯಕವಾಗಿದೆ. ಜಪಾನ್ ಚೀನಾದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಗೌರವ ತೋರಿಸಬೇಕು. ತೈವಾನ್ ನಮ್ಮ ಭಾಗವಾಗಿದೆ ಮತ್ತು ಇದು ಸಂಪೂರ್ಣವಾಗಿ ಚೀನಾದ ಆಂತರಿಕ ವಿಷಯವಾಗಿದೆ ಎಂದು ಕೂಡ  ಜಾವೋ ಲಿಜಿಯಾನ್ ಉಲ್ಲೇಖಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News