ಪಾಕಿಸ್ತಾನದಲ್ಲಿ ಜುಲೈ 25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಒಂದು ಅಧ್ಯಯನವು, ಕಳೆದ ಐದು ವರ್ಷಗಳಲ್ಲಿ ಮುಸ್ಲಿಮೇತರ ಮತದಾರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದೆ. ಪಾಕಿಸ್ತಾನದ ಪ್ರಸಿದ್ಧ ಪತ್ರಿಕೆ ಡಾನ್ ವರದಿ ಪ್ರಕಾರ, 2013 ರಲ್ಲಿ 27.70 ಲಕ್ಷ ಮುಸ್ಲಿಮೇತರ ಮತದಾರರಿದ್ದರು. ಈ ಅರ್ಥದಲ್ಲಿ, ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ 36.3 ಲಕ್ಷಕ್ಕೆ ಏರಿದೆ. ಈ ರೀತಿಯಾಗಿ ಮುಸ್ಲಿಮೇತರ ಮತದಾರ ಸಂಖ್ಯೆಯಲ್ಲಿ 30 ಪ್ರತಿಶತ ಹೆಚ್ಚಳ ಕಂಡುಬಂದಿದೆ.
ಹಿಂದೂ ಸಮುದಾಯ
ಹೆಚ್ಚಳವಾಗಿರುವ ಮುಸ್ಲಿಮೇತರ ಮತದಾರರಲ್ಲಿ ಅತಿದೊಡ್ಡ ಭಾಗವು ಹಿಂದೂ ಸಮುದಾಯಕ್ಕೆ ಸೇರಿದೆ. 2013 ರಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಹಿಂದೂಗಳ ಪಾಲು ಸುಮಾರು ಅರ್ಧ ಆಗಿತ್ತು. 2013 ರಲ್ಲಿ ಹಿಂದೂ ಮತದಾರರ ಸಂಖ್ಯೆ ಸುಮಾರು 14 ಲಕ್ಷವಾಗಿದ್ದು, ಐದು ವರ್ಷಗಳಲ್ಲಿ ಇದು 17.7 ಲಕ್ಷಕ್ಕೆ ಏರಿದೆ. ಆದರೆ ಹಿಂದುಯೇತರ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.
ಕ್ರಿಶ್ಚಿಯನ್ ಮತದಾರರು
ಈ ವರದಿಯ ಪ್ರಕಾರ, ಕ್ರೈಸ್ತರು ಎರಡನೇ ದೊಡ್ಡ ಅಲ್ಪ ಸಂಖ್ಯಾತ ಮತದಾರರಾಗಿದ್ದಾರೆ. ಈ ಅಧ್ಯಯನದ ಪ್ರಕಾರ, ಕ್ರಿಶ್ಚಿಯನ್ ಮತದಾರರ ಸಂಖ್ಯೆ 16.4 ಲಕ್ಷವಾಗಿದೆ. ಈ ರೀತಿಯಾಗಿ, ಕಳೆದ ಐದು ವರ್ಷಗಳಲ್ಲಿ ಮುಸ್ಲಿಂ ಅಲ್ಲದ ಮತದಾರರಲ್ಲಿ ಅತ್ಯಧಿಕ ಹೆಚ್ಚಳವು ಕ್ರಿಶ್ಚಿಯನ್ ಸಮುದಾಯದಲ್ಲಾಗಿದೆ. ಇದೇ ರೀತಿ ಪಾರ್ಸಿ ಮತದಾರರ ಸಂಖ್ಯೆಯಲ್ಲೂ ಕೂಡ ಏರಿಕೆ ಕಂಡುಬಂದಿದೆ.
ಜುಲೈ 25 ರಂದು ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದೆ
ಪಾಕಿಸ್ತಾನದ ಪ್ರಸ್ತುತ ಸರ್ಕಾರವು ಮೇ 31 ರಂದು ಪೂರ್ಣಗೊಳ್ಳಲಿದೆ. ಜೂನ್ 1 ರಿಂದ ಉಸ್ತುವಾರಿ ಸರ್ಕಾರವು ಹೊಸ ಸರಕಾರ ರಚನೆಗೆ ಅಧಿಕಾರ ವಹಿಸಲಿದೆ. ಆಡಳಿತಾತ್ಮಕ ಪಿಎಂಎಲ್-ಎನ್ ಮತ್ತು ಮಧ್ಯಂತರ ಪ್ರಧಾನಿ ಹೆಸರಿನ ವಿರೋಧದ ನಡುವಿನ ಬಿಕ್ಕಟ್ಟಿನ ಮಧ್ಯೆ, ಅಧ್ಯಕ್ಷರ ವಕ್ತಾರರು ಪಾಕಿಸ್ತಾನದಲ್ಲಿ ಜುಲೈ 25 ರಂದು ಸಾಮಾನ್ಯ ಚುನಾವಣೆ ನಡೆಯಲಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ ಮತ್ತು ವಿರೋಧ ಪಕ್ಷದ ಖುರ್ಷಿದ್ ಷಾ ನಡುವಿನ ಉಸ್ತುವಾರಿ ಪ್ರಧಾನ ಮಂತ್ರಿಯ ಹೆಸರಿನ ಭಿನ್ನಾಭಿಪ್ರಾಯ ಇನ್ನೂ ಬಗೆಹರಿದಿಲ್ಲ.