ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ ಪಾಕಿಸ್ತಾನ ಪ್ರಾಂತೀಯ ಸಚಿವ

ಬಿಜಾರಾನಿ ಮತ್ತು ಅವರ ಪತ್ನಿ ಫರೀಹಾ ರಝಾಕ್ ಗುರುವಾರ ಕರಾಚಿಯ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದು, ಈ ಘಟನೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

Updated: Feb 3, 2018 , 11:23 AM IST
ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ ಪಾಕಿಸ್ತಾನ ಪ್ರಾಂತೀಯ ಸಚಿವ
ಫೋಟೋ : Facebook//Mir Hazar Khan Bijarani

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಾಂತೀಯ ಸಚಿವ ಮಿರ್ ಹಝರ್ ಖಾನ್ ಬಿಜಾರಾನಿ ತನ್ನ ಮನೆಯಲ್ಲಿ ತನ್ನ ಹೆಂಡತಿಯನ್ನು ಕೊಂದು ತಾನೂ ಅದೇ ಗನ್ ಇಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಬಿಜಾರಾನಿ ಮತ್ತು ಅವರ ಪತ್ನಿ ಫರೀಹಾ ರಝಾಕ್ ಗುರುವಾರ ಕರಾಚಿಯ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದು, ಈ ಘಟನೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಅಪರಾಧದ ದೃಶ್ಯದಿಂದ ಸಂಗ್ರಹಿಸಲ್ಪಟ್ಟ ಬುಲೆಟ್ ಕ್ಯಾಸಿಂಗ್ಗಳು ಒಂದೇ ಶಸ್ತ್ರಾಸ್ತ್ರದಿಂದ ಹಾರಿಸಿದವಾಗಿವೆ ಎಂದು ಪ್ರಥಮ ತನಿಖಾ ವರದಿ ಬಹಿರಂಗಪಡಿಸಿದೆ. 

ಮೃತ ಮಂತ್ರಿಯ ತಲೆ ಭಾಗದಲ್ಲಿ ಒಂದು ಬುಲೆಟ್ ಗುರುತಿದ್ದರೆ, ಆತನ ಪತ್ನಿಗೆ 3 ಬಾರಿ ಗುಂಡು ತಗುಲಿದೆ ಎಂದು ವರದಿ ತಿಳಿಸಿದೆ. 

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಹಿರಿಯ ಮುಖಂಡ ಬಿಜಾರಾನಿ ಅವರು  ಸಿಂಧ್ ಪ್ರಾಂತ್ಯದ ಯೋಜನಾ ಮತ್ತು ಅಭಿವೃದ್ಧಿ ಸಚಿವರಾಗಿದ್ದರು ಮತ್ತು ಅವರ ಪತ್ನಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

By continuing to use the site, you agree to the use of cookies. You can find out more by clicking this link

Close