ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧಕ್ಕೆ ಕಡಿವಾಣ ಹಾಕಬೇಕು- ಪ್ರಧಾನಿ ಮೋದಿ

 ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧಗಳು ಇಂದು ವಿಶ್ವದ ಎದುರಿಸುತ್ತಿರುವ ಸವಾಲುಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Updated: Nov 30, 2018 , 08:57 PM IST
ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧಕ್ಕೆ ಕಡಿವಾಣ ಹಾಕಬೇಕು- ಪ್ರಧಾನಿ ಮೋದಿ

ನವದೆಹಲಿ: ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧಗಳು ಇಂದು ವಿಶ್ವದ ಎದುರಿಸುತ್ತಿರುವ ಸವಾಲುಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬೋನಸ್ ಐರಿಸ್ ನಲ್ಲಿ ಬ್ನಡೆದ ಜಿ-20 ಶೃಂಗ ಸಭೆಯಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ" ಭಯೋತ್ಪಾದನೆ ಮತ್ತು ತೀವ್ರಗಾಮಿತ್ವವು ಜಗತ್ತಿಗೆ ಒಡ್ಡಿರುವ ಪ್ರಮುಖ ಸವಾಲುಗಳು ಇದರಲ್ಲಿ ಹಣಕಾಸಿನ ಅಪರಾಧವು ಸಹ ಸೇರಿದೆ ಆದ್ದರಿಂದ ನಾವು ಕಪ್ಪು ಹಣದ ವಿರುದ್ಧ ಒಟ್ಟಿಗೆ ಕೆಲಸ ಮಾಡಬೇಕು" ಎಂದು ಅವರು ಹೇಳಿದರು.

ಇದೇ ವೇಳೆ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳು ಸಹ ಸಾಮಾನ್ಯ ಹಿತಾಸಕ್ತಿಗಳಿಗಾಗಿ ಒಂದುಗೂಡಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಆಸಕ್ತಿಯನ್ನು ನಾವು ಒಂದೇ ಧ್ವನಿಯಲ್ಲಿ ವ್ಯಕ್ತಪಡಿಸಬೇಕು ಎಂದು ತಿಳಿಸಿದರು .

By continuing to use the site, you agree to the use of cookies. You can find out more by clicking this link

Close