ಕ್ವಾರಂಟೈನ್ ಉಲ್ಲಂಘಿಸಿ ಕೊರೊನಾ ಹರಡಿದ್ದ ವ್ಯಕ್ತಿಗೆ 5 ವರ್ಷ ಜೈಲುಶಿಕ್ಷೆ..!

ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ ವ್ಯಕ್ತಿಯಿಂದ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು.

Written by - Puttaraj K Alur | Last Updated : Sep 7, 2021, 04:26 PM IST
  • ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹಲವರಿಗೆ ಕೊರೊನಾ ವೈರಸ್ ಹರಡಿದ್ದ ವ್ಯಕ್ತಿಗೆ 5 ವರ್ಷಗಳ ಜೈಲುಶಿಕ್ಷೆ
  • ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ ವ್ಯಕ್ತಿ
  • 8 ಜನರಿಗೆ ಮಾರಕ ಕೊರೊನಾ ಸೋಂಕು ಅಂಟಿಸಿದ್ದ ವ್ಯಕ್ತಿಗೆ ವಿಯೆಟ್ನಾಂ ನ್ಯಾಯಾಲಯ ಜೈಲುಶಿಕ್ಷೆ
ಕ್ವಾರಂಟೈನ್ ಉಲ್ಲಂಘಿಸಿ ಕೊರೊನಾ ಹರಡಿದ್ದ ವ್ಯಕ್ತಿಗೆ 5 ವರ್ಷ ಜೈಲುಶಿಕ್ಷೆ..! title=
ಅನೇಕರಿಗೆ ಸೋಂಕು ಅಂಟಿಸಿದ್ದ ವ್ಯಕ್ತಿಗೆ ಜೈಲುಶಿಕ್ಷೆ (Photo Courtesy: @Wion News)

ಹನೋಯಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹಲವರಿಗೆ ಕೊರೊನಾ ವೈರಸ್ ಹರಡಿದ್ದ ವ್ಯಕ್ತಿಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಘಟನೆ ವಿಯೆಟ್ನಾಂನಲ್ಲಿ ನಡೆದಿದ್ದು, ಸರ್ಕಾರದ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಅಪರಾಧಕ್ಕೆ ವಿಯೆಟ್ನಾಂ(Vietnam) ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.  

ಪ್ರಾಂತೀಯ ಪೀಪಲ್ಸ್ ಕೋರ್ಟ್‌ನ ವೆಬ್‌ಸೈಟ್‌ನ ವರದಿಯ ಪ್ರಕಾರ, ಲೆ ವಾನ್ ಟ್ರೈ(Le Van Tri) ಎಂಬಾತ ಜುಲೈನಲ್ಲಿ ಕೊರೊನಾವೈರಸ್ ಹಾಟ್‌ಸ್ಪಾಟ್ ಹೋ ಚಿ ಮಿನ್ಹ್ ನಗರ(Ho Chi Minh)ದಿಂದ ತನ್ನ ತವರು ಪ್ರಾಂತ್ಯವಾದ ಕಾ ಮೌ(Ca Mau)ಗೆ ಪ್ರಯಾಣಿಸಿದ್ದ. ಆ ಸಂದರ್ಭದಲ್ಲಿ ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಸರ್ಕಾರದ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ ಆತನಿಂದ ಹಲವರಿಗೆ ಮಾರಕ ಕೊರೊನಾ ಸೋಂಕು ತಗುಲಿತ್ತು. ಸೋಂಕಿತರ ಪೈಕಿ ಓರ್ವ ಆಗಸ್ಟ್ 7ರಂದು ಸಾವನ್ನಪ್ಪಿದ್ದ.

ಇದನ್ನೂ ಓದಿ: Nipah Virus: ನಿಫಾ ವೈರಸ್ Vs ಕರೋನಾ ವೈರಸ್, ಯಾವ ವೈರಸ್ ಹೆಚ್ಚು ಅಪಾಯಕಾರಿ ಎಂದು ತಿಳಿದಿದೆಯೇ?

28ರ ಹರೆಯದ ಲೆ ವಾನ್ ದಕ್ಷಿಣ ಪ್ರಾಂತ್ಯದಲ್ಲಿ 21 ದಿನಗಳ ಹೋಮ್ ಕ್ಯಾರೆಂಟೈನ್(Home Quarantine) ಆಗುವುದು ಬಿಟ್ಟು ಹೊರಗಡೆ ತಿರುಗಾಡುವ ಮೂಲಕ ಅನೇಕರಿಗೆ ವೈರಸ್ ಅಂಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಹೋ ಚಿ ಮಿನ್ಹ್ ನಗರಕ್ಕಿಂತಲೂ ಕಾ ಮೌನಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಜುಲೈ 7ರಂದು ಪರೀಕ್ಷೆ ಮಾಡಿಸಿದಾಗ ಲೆ ವಾನ್ ಗೆ ಕೊರೊನಾ ದೃಢಪಟ್ಟಿತ್ತು. ಆತನ ಹೋಮ್ ಮೆಡಿಕಲ್ ಕ್ಯಾರೆಂಟೈನ್ ರೆಗ್ಯುಲೇಶನ್‌ನ ಉಲ್ಲಂಘನೆಯಿಂದ ಸುಮಾರು 8 ಜನರಿಗೆ ಸೋಂಕು ತಗುಲಿತ್ತು. ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಇತರ ಜನರಿಗೆ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡಲು ಕಾರಣನಾದ ಲೆ ವಾನ್ ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ವಿಯೆಟ್ನಾಂ ನ್ಯಾಯಾಲಯ ಆದೇಶಿಸಿತು.

ಕಳೆದ ವರ್ಷಕ್ಕಿಂತಲೂ ಈಗ ಕೊರೊನಾ(CoronaVirus) ಸಾಂಕ್ರಾಮಿಕ ರೋಗವು ವಿಯೆಟ್ನಾಂನಲ್ಲಿ ಹೆಚ್ಚು ಜನರನ್ನು ಬಲಿಪಡೆಯುತ್ತಿದೆ. ಹೀಗಾಗಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಇದುವರೆಗೆ ಸುಮಾರು 5.40 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 13 ಸಾವಿರಕ್ಕೂ ಹೆಚ್ಚು ಜನರು ವೈರಸ್ ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಪಂಜ್‌ಶಿರ್ ಪಡೆಯ ನೇತೃತ್ವ ವಹಿಸಿದ ಅಮೃಲ್ಲಾ ಸಲೇಹ್, ಈ ವಿಶೇಷ ತಂತ್ರದಿಂದ ತಾಲಿಬಾನ್ ಮೇಲೆ ದಾಳಿ

ಏಪ್ರಿಲ್ ಅಂತ್ಯದ ವೇಳೆ ಬಹುಪಾಲು ಸೋಂಕುಗಳು ಮತ್ತು ಸಾವುಗಳು ವರದಿಯಾಗಿವೆ. ವಿಯೆಟ್ನಾಂನ ರಾಜಧಾನಿ ಹನೋಯಿ ಮತ್ತು ವಾಣಿಜ್ಯ ಕೇಂದ್ರ ಹೋ ಚಿ ಮಿನ್ಹ್ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಟ್ಟುನಿಟ್ಟಾದ ಲಾಕ್‌ಡೌನ್‌(COVID-19 Lockdown) ಹೇರಲಾಗಿದೆ. ಇತರರಿಗೆ ಕೊರೊನಾ ವೈರಸ್ ಹರಡಿದ್ದಕ್ಕಾಗಿ ವಿಯೆಟ್ನಾಂನಲ್ಲಿ ಹಲವು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಹೈ ಡುವಾಂಗ್‌ನಲ್ಲಿ 32 ವರ್ಷದ ವ್ಯಕ್ತಿಗೆ ಜುಲೈನಲ್ಲಿ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಯೆಟ್ನಾಂ ಏರ್‌ಲೈನ್ಸ್ ವಿಮಾನ ಸೇವಕರೊಬ್ಬರನ್ನು ಮಾರ್ಚ್‌ನಲ್ಲಿ 2 ವರ್ಷ ಅಮಾನತುಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News