ಚೀನಾಕ್ಕೆ ಬಾಗಿಲು ಮುಚ್ಚುವುದಿಲ್ಲ ಎಂದ ತೈವಾನ್

ಚೀನಾಕ್ಕೆ ಬಾಗಿಲು ಮುಚ್ಚಲು ಬಯಸುವುದಿಲ್ಲ, ಆದರೆ ಅದರ ಜೊತೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವುದಾಗಿ ತೈವಾನ್ ದೇಶವು ಹೇಳಿದೆ.

Last Updated : Jun 12, 2022, 03:48 PM IST
  • ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಸು ತ್ಸೆಂಗ್-ಚಾಂಗ್ ಸಮಾನ ಆಧಾರದ ಮೇಲೆ ಯಾವುದೇ ರಾಜಕೀಯ ಪೂರ್ವಾಪೇಕ್ಷಿತಗಳಿಲ್ಲದೆ ಸಂಬಂಧವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಚೀನಾಕ್ಕೆ ಬಾಗಿಲು ಮುಚ್ಚುವುದಿಲ್ಲ ಎಂದ ತೈವಾನ್ title=

ನವದೆಹಲಿ: ಚೀನಾಕ್ಕೆ ಬಾಗಿಲು ಮುಚ್ಚಲು ಬಯಸುವುದಿಲ್ಲ, ಆದರೆ ಅದರ ಜೊತೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವುದಾಗಿ ತೈವಾನ್ ದೇಶವು ಹೇಳಿದೆ.

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಸು ತ್ಸೆಂಗ್-ಚಾಂಗ್ ಸಮಾನ ಆಧಾರದ ಮೇಲೆ ಯಾವುದೇ ರಾಜಕೀಯ ಪೂರ್ವಾಪೇಕ್ಷಿತಗಳಿಲ್ಲದೆ ಸಂಬಂಧವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್ ನಡುವೆ ಶ್ರೇಷ್ಠ ಆಟಗಾರ ಯಾರು ? ಆಫ್ರಿದಿ ಹೇಳಿದ್ದು ಹೀಗೆ..!

ಪ್ರಜಾಸತ್ತಾತ್ಮಕವಾಗಿ ಸಾರ್ವಭೌಮ ದೇಶ ಎಂದು ಹೇಳಿಕೊಳ್ಳುವ ತೈವಾನ್ ದೇಶವು, ಚೀನಾ ಜೊತೆಗೆ ಸ್ವಾಯತ್ತತೆ ವಿಚಾರದಲ್ಲಿ ಸಂಘರ್ಷವನ್ನು ಮುಂದುವರೆಸಿದೆ.ಇತ್ತೀಚಿನ ದಶಕಗಳಲ್ಲಿ ಅದು ಇನ್ನಷ್ಟು ತೀವ್ರಗೊಂಡಿದೆ.ಈಗ ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವ ಚೀನಾದ ರಕ್ಷಣಾ ಸಚಿವರು ಚೀನಾ ಸರ್ಕಾರವು ತೈವಾನ್‌ನೊಂದಿಗೆ 'ಶಾಂತಿಯುತ ಪುನರೇಕೀಕರಣವನ್ನು ಬಯಸಿದೆ, ಆದರೆ ಇತರ ಆಯ್ಕೆಗಳನ್ನು ಕಾಯ್ದಿರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಳಿ ಮಾತೆಯ ಈ ದೇವಾಲಯದಲ್ಲಿ ನೂಡಲ್ಸ್‌ನ್ನು ಪ್ರಸಾದವಾಗಿ ನೀಡ್ತಾರೆ!

ಸುರಕ್ಷತಾ ಕಾರಣದಿಂದ ತೈವಾನ್‌ನಿಂದ ಗ್ರೂಪರ್ ಮೀನಿನ ಆಮದನ್ನು ಚೀನಾ ನಿಷೇಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸು ತ್ಸೆಂಗ್-ಚಾಂಗ್ ಅವರು, ಚೀನಾದ ನಡೆಯನ್ನು ರಾಜಕೀಯ ಪ್ರೇರಿತ ನಡೆ ಎಂದು ಕರೆದರು, ಇನ್ನೂ ಮುಂದುವರೆದು ಮಾತನಾಡಿದ ಅವರು ತೈವಾನ್ ಯಾವಾಗಲೂ ಚೀನಾದ ಬಗ್ಗೆ ಸದ್ಭಾವನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

'ಸಮಾನತೆ, ಪರಸ್ಪರ ಸಂಬಂಧ ಮತ್ತು ಯಾವುದೇ ರಾಜಕೀಯ ಪೂರ್ವಾಪೇಕ್ಷಿತಗಳು ಇರುವವರೆಗೆ, ನಾವು ಚೀನಾದೊಂದಿಗೆ ಸದ್ಭಾವನೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿದ್ದೇವೆ. ತೈವಾನ್ ಯಾವತ್ತು ಚೀನಾಕ್ಕೆ ಬಾಗಿಲು ಮುಚ್ಚಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News