'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ...

ಪಾಕಿಸ್ತಾನ ಭೇಟಿ ಸಂಬಂಧ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮುಂದೆಯೇ ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

Last Updated : Jan 22, 2020, 09:57 AM IST
'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ... title=

ದಾವೋಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ನಡುವಿನ ಸ್ನೇಹ ಪಾಕಿಸ್ತಾನದ ಹಾದಿಯಲ್ಲಿ ದೊಡ್ಡ ಅಡಚಣೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಭಾರತ ಭೇಟಿಯ ಸುದ್ದಿ ಪಾಕಿಸ್ತಾನ ಕೇಳಿದಾಗಿನಿಂದ, ಅವರ ಚಡಪಡಿಕೆ ಹೆಚ್ಚಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ತಾನಕ್ಕೂ ಭೇಟಿ ನೀಡುತ್ತಾರೆಯೇ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ  ಡೊನಾಲ್ಡ್ ಟ್ರಂಪ್ ಅವರ ಪ್ರತಿಕ್ರಿಯೆ ಕೇಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮುಖ ಬಾಡಿದಂತಾಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಿಂದ ಪಾಕಿಸ್ತಾನ ತೊಂದರೆಗೀಡಾಗಿದೆ. ಟ್ರಂಪ್ ಅವರನ್ನು ಪಾಕಿಸ್ತಾನಕ್ಕೂ ಭೇಟಿ ನೀಡುವಂತೆ ಮಾಡಲು ಇಮ್ರಾನ್ ಖಾನ್ ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿಯೇ ಇಮ್ರಾನ್ ಖಾನ್(Imran Khan) ಅವರು ಭಾರತಕ್ಕೆ ಭೇಟಿ ನೀಡುವಾಗ ಅಥವಾ ಹಿಂದಿರುಗುವಾಗ ಪಾಕಿಸ್ತಾನಕ್ಕೆ ಬಂದು ಹೋಗುವಂತೆ ಟ್ರಂಪ್ ಅವರನ್ನು ಕರೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷರು ಭಾರತ ಭೇಟಿ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಇಮ್ರಾನ್ ಎದುರಿನಲ್ಲೆಯೇ ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ದಾವೋಸ್‌ನಲ್ಲಿ ನಡೆಯುತ್ತಿದೆ. ಇಮ್ರಾನ್ ಖಾನ್ ಕೂಡ ಈ ಸಂದರ್ಭದಲ್ಲಿ ದಾವೋಸ್ ಪ್ರವಾಸದಲ್ಲಿದ್ದಾರೆ. ಸಭೆಯ ಹೊರತಾಗಿ, ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದರು.

ಹಣದುಬ್ಬರ, ಆರ್ಥಿಕತೆ, ನಿರುದ್ಯೋಗ ಮುಂತಾದ ವಿಷಯಗಳಲ್ಲಿ ಇಮ್ರಾನ್ ವಿಫಲರಾಗಿದ್ದಾರೆ. ಕಾಶ್ಮೀರ ವಿಷಯದಲ್ಲೂ ಅವರಿಗೆ ಚೀನಾ ಹೊರತುಪಡಿಸಿ ಜಗತ್ತಿನಲ್ಲಿ ಬೇರಾವ ದೇಶದ ಬೆಂಬಲವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್ ಭಾರತಕ್ಕೆ ಹೋಗುವುದು ಮತ್ತು ಪಾಕಿಸ್ತಾನಕ್ಕೆ ಹೋಗದಿರುವುದು ದೊಡ್ಡ ಹೊಡೆತ ಎಂದೇ ಭಾವಿಸಲಾಗುತ್ತಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿನ ಸಭೆ ಬಳಿಕ ಡೊನಾಲ್ಡ್ ಟ್ರಂಪ್ , ಮೊದಲಿಗಿಂತಲೂ ಈ ಸಮಯದಲ್ಲಿ ಅಮೆರಿಕ ಪಾಕಿಸ್ತಾನ(Pakistan)ಕ್ಕೆ ಹತ್ತಿರವಾಗಿದೆ ಸ್ಪಷ್ಟಪಡಿಸಿದರು. ನಾವು ಕೆಲವು ಗಡಿಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಅದನ್ನು ವೀಕ್ಷಿಸುತ್ತಿದ್ದೇವೆ ಮತ್ತು ಅದನ್ನು ಅನುಸರಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದರು. 

Trending News