ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಮತದಾನಕ್ಕೂ ಮುನ್ನವೇ ಸೃಷ್ಟಿಸಿದ ಎಮ್ಮೆ ಕಾಯುತ್ತಿದ್ದ ಹುಡುಗಿ ಕಾರ್ಣೆ ಶಿರೀಷಾ(Barrelakka or buffalo girl aka Karne Sirisha) ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದ್ದಳು. ಪಕ್ಷೇತರ ಅಭ್ಯರ್ಥಿಯಾಗಿ ಕೊಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈ ಯುವತಿ ಘಟಾನುಘಟಿಗಳ ಎದುರು ಮುನ್ನಡೆ ಗಳಿಸಿದ್ದಳು.


COMMERCIAL BREAK
SCROLL TO CONTINUE READING

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ ಮತ್ತು ಶಿರೀಷಾ ನಡುವೆ ನಿಕಟ ಪೈಪೋಟಿ ನಡೆದಿತ್ತು. ತೆಲಂಗಾಣದ ಘಟಾನುಘಟಿಗಳೆದರು ಎಮ್ಮೆ ಕಾಯುವ ಹುಡುಗಿ ಲೀಡಿಂಗ್‍ನಲ್ಲಿದ್ದಳು. ನಿರುದ್ಯೋಗಿಗಳ ಪರ ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದ ಶಿರೀಷಾ ಕೊಲ್ಲಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ದೇಶದ ಗಮನ ಸೆಳೆದಿದ್ದರು. ಎಮ್ಮೆ ಕಾಯುತ್ತಿದ್ದ ಈ ಯುವತಿಗೆ ಅನೇಕರು ಖ್ಯಾತ ವ್ಯಕ್ತಿಗಳ ಬೆಂಬಲ ದೊರೆತಿತ್ತು.


ಇದನ್ನೂ ಓದಿ: MP Election Results: ಏಕಾಏಕಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿಗೆ ಬಂದ ಜ್ಯೋತಿರಾದಿತ್ಯ ಸಿಂಧಿಯಾ, ರಹಸ್ಯವೇನು?


ನಾಮಪತ್ರ ವಾಪಸ್ ಪಡೆಯುವಂತೆ ಶಿರೀಷಾ ಸಾಕಷ್ಟು ಒತ್ತಡ ಸಹ ಬಂದಿತ್ತು. ಆದರೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದ ಶಿರೀಷಾ ಧೈರ್ಯವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಳು. ಇದೀಗ ಕೊಲ್ಲಾಪುರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ದೇಶದ ಗಮನ ಸೆಳೆದ ಈ ಯುವತಿ ಎಷ್ಟು ಮತಗಳನ್ನು ಪಡೆದಿದ್ದಾಳೆ ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲಿ ಮೂಡಿರುತ್ತದೆ.


ಕಾರ್ಣೆ ಶಿರೀಷಾ ಉತ್ತಮ ಸಾಧನೆ


ಕಾರ್ಣೆ ಶಿರೀಷಾ ಅಂಚೆ ಮತಗಳಲ್ಲಿ ಲೀಡ್‍ನಲ್ಲಿದ್ದರು. ಆದರೆ EVM ಮತ ಎಣಿಕೆಯಲ್ಲಿ ಅವರು ಹಿಂದೆ ಬಿದ್ದರು. 20 ಸುತ್ತುಗಳ ಮತ ಎಣಿಕೆ ಬಳಿಕ ಕೊಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ 93,609 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಭಾರತ್ ರಾಷ್ಟ್ರ ಸಮಿತಿ(BRS)ಯ ಬೀರಂ ಹರ್ಷವರ್ಧನ್ ರೆಡ್ಡಿ 63,678 ಮತಗಳನ್ನು ಗಳಿಸಿದರು. ಜುಪಲ್ಲಿ ಕೃಷ್ಣರಾವ್ ಮತ್ತು ಹರ್ಷವರ್ಧನ್ ರೆಡ್ಡಿ ನಡುವೆ 29,931 ಮತಗಳ ಗೆಲುವಿನ ಅಂತರವಿದೆ. ಇನ್ನೂ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನಕ್ಕೆ ಏಳ್ಳೆನಿ ಸುಧಾಕರ ರಾವ್ ತೃಪ್ತಿಪಟ್ಟುಕೊಂಡಿದ್ದು, 20,389 ಮತಗಳನ್ನು ಗಳಿಸಿದ್ದಾರೆ. ಕಾರ್ಣೆ ಶಿರೀಷಾ 5,754 ಮತಗಳನ್ನು ಪಡೆದು 4ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.  


ಇದನ್ನೂ ಓದಿ: ಕೆಸಿಆರ್‌ʼಗೆ ಶಾಕ್‌ ಕೊಟ್ಟ ಟ್ರಬಲ್‌ ಶೂಟರ್‌..! ತೆಲಂಗಾಣದಲ್ಲಿ ಮೋಡಿ ಮಾಡಿದ ʼಡಿಕೆಶಿʼ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.