ನವದೆಹಲಿ: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದಿಕ್ಕನ್ನೇ ಬದಲಿಸಿದಂತಿದೆ. 56 ವರ್ಷದ ಈ ವ್ಯಕ್ತಿ ಕೇವಲ 6 ವರ್ಷಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿ, ಸಂಸದರಾಗಿ ಮತ್ತು ಪ್ರಸ್ತುತ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ರೆಡ್ಡಿಯವರ ನಾಯಕತ್ವದ ಶೈಲಿಗೆ ಮೆಚ್ಚುಗೆ ಜೊತೆಗೆ ಟೀಕೆಯೂ ವ್ಯಕ್ತವಾಗಿದೆ. ತಮ್ಮದೇ ಪಕ್ಷದ ಸದಸ್ಯರನ್ನು ಟೀಕಿಸಲು ಸಹ ಅವರು ಹಿಂಜರಿಯುವುದಿಲ್ಲ. ರೇವಂತ್ ತಮ್ಮ ಮಾರ್ಗದರ್ಶಕರಾದ ಎನ್.ಚಂದ್ರಬಾಬು ನಾಯ್ಡು ಮತ್ತು ಅವರು ಒಮ್ಮೆ ಸದಸ್ಯ ಮತ್ತು 2 ಬಾರಿ ಟಿಡಿಪಿ ಶಾಸಕರಾಗಿದ್ದ ತೆಲುಗು ದೇಶಂ ಪಕ್ಷ (TDP)ವನ್ನು ಸಹ ಹಾಡಿ ಹೊಗಳಿದ್ದಾರೆ.
ಸದ್ಯ ಕಾಂಗ್ರೆಸ್‌ನ ಅಭೂತಪೂರ್ವ ಗೆಲುವಿನ ಹಿಂದೆ ಹೆಚ್ಚಾಗಿ ಕೇಳಿಬರುತ್ತಿರುವುದು ರೇವಂತ್ ರೆಡ್ಡಿ ಹೆಸರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ರೇವಂತ್ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರು ಈಗ ತೆಲಂಗಾಣ ಸಿಎಂ ರೇಸ್‌ನಲ್ಲಿದ್ದಾರೆ. 2009 ಮತ್ತು 2014ರ ನಡುವೆ ತೆಲುಗು ದೇಶಂ ಪಕ್ಷ (TDP)ದ ಶಾಸಕರಾಗಿ ಕೊಡಂಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ರೇವಂತ್, 2017ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಇದನ್ನೂ ಓದಿ: MP Election Results: ಏಕಾಏಕಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿಗೆ ಬಂದ ಜ್ಯೋತಿರಾದಿತ್ಯ ಸಿಂಧಿಯಾ, ರಹಸ್ಯವೇನು?
ರೇವಂತ್ ರೆಡ್ಡಿ ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಅವರ ಸೊಸೆ ಗೀತಾರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ರೇವಂತ್ 1969ರ ನವೆಂಬರ್ 8ರಂದು ಮಹಬೂಬ್ನಗರ ಜಿಲ್ಲೆಯ ಕೊಂಡರೆಡ್ಡಿ ಪಲ್ಲಿಯಲ್ಲಿ ಜನಿಸಿದರು. ಅವರು ಕಲಾ ಪದವೀಧರರಾಗಿದ್ದು, ಉಸ್ಮಾನಿಯಾ ವಿವಿಯ ಎವಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಅಧ್ಯಯನ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಬಲಪಂಥೀಯ ಎಬಿವಿಪಿ ಸದಸ್ಯರಾಗಿದ್ದರು. ಓದು ಮುಗಿದ ನಂತರ ರೇವಂತ್ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು.
ರೇವಂತ್ ಅವರು ಪ್ರಸ್ತುತ ಸಿಎಂ ಕೆ.ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷದ ಕಟು ಟೀಕಾಕಾರರಾಗಿದ್ದಾರೆ. ಅವರು ಜುಲೈ 2021ರಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾದರು. ಆಡಳಿತಾರೂಢ BRS ಸರ್ಕಾರದ ವಿರುದ್ಧ ಹಲವಾರು ಪ್ರತಿಭಟನೆ ನಡೆಸಿದರು. ಇತ್ತೀಚೆಗಷ್ಟೇ ಕೆಸಿಆರ್ ಪುತ್ರ ಕೆಟಿಆರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಾನು ಮೆರಿಟ್ ಕೋಟಾದಲ್ಲಿದ್ದೇನೆ. ಅವರು ಮ್ಯಾನೇಜ್‌ಮೆಂಟ್ ಕೋಟಾ/NRI ಕೋಟಾದಲ್ಲಿದ್ದಾರೆ. ಕೆಟಿಆರ್ ಅವರು ಕೆಸಿಆರ್ ಪುತ್ರ ಎಂದೇ ಎಲ್ಲರಿಗೂ ಗೊತ್ತು. ಕೆಟಿಆರ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ರಾಜಕೀಯ ಹೋರಾಟ ಕೆಸಿಆರ್ ಜೊತೆಗಿದೆ’ ಅಂತಾ ಕುಟುಕಿದ್ದರು.
ಇದನ್ನೂ ಓದಿ: ಕೆಸಿಆರ್ʼಗೆ ಶಾಕ್ ಕೊಟ್ಟ ಟ್ರಬಲ್ ಶೂಟರ್..! ತೆಲಂಗಾಣದಲ್ಲಿ ಮೋಡಿ ಮಾಡಿದ ʼಡಿಕೆಶಿʼ
ತೆಲಂಗಾಣ ರಚನೆಗೂ ಮುನ್ನ 2014ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇವಂತ್ ಮತ್ತೊಮ್ಮೆ ಈ ಬಾರಿ ಟಿಆರ್‌ಎಸ್ ಅಭ್ಯರ್ಥಿಯಾಗಿದ್ದ ಗುರುನಾಥರೆಡ್ಡಿ ಅವರನ್ನು ಸೋಲಿಸಿದ್ದರು. ಈ ಚುನಾವಣೆಯಲ್ಲಿ ಅವರ ಗೆಲುವಿನ ಅಂತರವೂ ದ್ವಿಗುಣಗೊಂಡಿದೆ. ಈ ಫಲಿತಾಂಶದ ನಂತರ ಟಿಡಿಪಿ ರೇವಂತ್ ಅವರನ್ನು ಸಭಾನಾಯಕನನ್ನಾಗಿ ಮಾಡಿತು. ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಅವರು ಕೆಸಿಆರ್ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. BRSಗೆ ಮಣ್ಣುಮುಕ್ಕಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರೇವಂತ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ತೆಲಂಗಾಣದ ನೂತನ ಸಿಎಂ ಆಗಿ ಅವರೇ ಆಯ್ಕೆಯಾಗುವುದು ಬಹುತೇಕ ಅಂತಿಮವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.