ನವದೆಹಲಿ: ಗೆಹ್ಲೋಟ್ ಸರ್ಕಾರ ರಾಜಸ್ಥಾನಕ್ಕೆ ಮರಳಲಿದೆಯೇ ಅಥವಾ ಬಿಜೆಪಿಯ ವನವಾಸ ಕೊನೆಗೊಳ್ಳಲಿದೆಯೇ ಎಂಬುದು ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾದ ನಂತರವಷ್ಟೇ ತಿಳಿಯಲಿದೆ. ಆದರೆ ಅದಕ್ಕೂ ಮುನ್ನ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ಸಾರ್ವಜನಿಕರ ನಾಡಿಮಿಡಿತವನ್ನು ಅಳೆಯಲು ಪ್ರಯತ್ನಿಸಿವೆ. ಇವು ಅಧಿಕೃತ ಫಲಿತಾಂಶಗಳಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್-ಬಿಜೆಪಿ ಎಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬುದನ್ನು ನಾವು ಇಲ್ಲಿ ವಿವರಿಸಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತೆಲಂಗಾಣ ರಾಜ್ಯದಲ್ಲಿ ಮತದಾನ ಆರಂಭ


ಆಕ್ಸಿಸ್ ಮೈ ಇಂಡಿಯಾದ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್ 86-106 ಸ್ಥಾನಗಳನ್ನು, ಬಿಜೆಪಿ 80-100 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಇತರರು 9-18 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. POLSTRAT ಪ್ರಕಾರ, ಬಿಜೆಪಿ 100-110 ಸ್ಥಾನಗಳನ್ನು ಪಡೆಯಬಹುದು, ಕಾಂಗ್ರೆಸ್ 90-100 ಮತ್ತು ಇತರರು 5-15 ಸ್ಥಾನಗಳನ್ನು ಪಡೆಯಬಹುದು.ಸಿ ವೋಟರ್ ಪ್ರಕಾರ, ಕಾಂಗ್ರೆಸ್ 71 ರಿಂದ 91 ಸ್ಥಾನಗಳನ್ನು, ಬಿಜೆಪಿ 94 ರಿಂದ 114, ಬಿಎಸ್ಪಿ 0 ರಿಂದ 5 ಮತ್ತು ಇತರರು 9 ರಿಂದ 19 ಸ್ಥಾನಗಳನ್ನು ಪಡೆಯಬಹುದು.


ಕಾಂತರಾಜು ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧ: ಸಚಿವ ಶಿವರಾಜ್ ತಂಗಡಗಿ


ರಾಜಸ್ಥಾನದಲ್ಲಿ 200 ವಿಧಾನಸಭಾ ಸ್ಥಾನಗಳಿದ್ದು, 51 ಸಾವಿರಕ್ಕೂ ಹೆಚ್ಚು ಮತ ಕೇಂದ್ರಗಳಲ್ಲಿ ಜನರು ಮತದಾನ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ನಿಧನರಾದ ಕಾರಣ ಶ್ರೀಗಂಗಾನಗರ ಜಿಲ್ಲೆಯ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.ರಾಜಸ್ಥಾನದಲ್ಲಿ 5 ವರ್ಷಗಳ ನಂತರ ಸರ್ಕಾರ ಬದಲಿಸುವ ಟ್ರೆಂಡ್ ಈ ಹಿಂದಿನಿಂದಲೂ ನಡೆದು ಬಂದಿದೆ, ಅಂದರೆ ಅಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಬೇರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದರೆ ಈ ಬಾರಿ ಈ ಇದಕ್ಕೆ ಬ್ರೇಕ್ ಬೀಳಲಿದೆಯೇ ಎಂಬುದನ್ನು ನಾವು ಅಂತಿಮ ಫಲಿತಾಂಶದವರೆಗೆ ಕಾಯಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.