ಬೆಂಗಳೂರು: ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಏ.27 ರಿಂದ ಏ. 30ರವರೆಗೆ ನಾಲ್ಕು ದಿನಗಳ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ಕರುನಾಡು ಜಾಗೃತಿ ಯಾತ್ರೆ ಅಂಗವಾಗಿ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಶಾ ಬಳ್ಳಾರಿ, ಕೊಪ್ಪಳ, ಗಂಗಾವತಿ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಏಳು ಕಡೆ ಸಾರ್ವಜನಿಕ ಸಭೆಗಳು, ಅನೇಕ ಕಡೆ ರೋಡ್ ಶೋ ಹಾಗೂ ಮಠ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ.


ಅಮಿತ್ ಶಾ ರಾಜ್ಯ ಪ್ರವಾಸದ ವಿವರ ಇಂತಿದೆ;
ಏಪ್ರಿಲ್ 26, 2018 


  • ರಾತ್ರಿ ಬೆಂಗಳೂರಿಗೆ ಆಗಮನ. ಬೆಂಗಳೂರಿನಲ್ಲೇ ವಾಸ್ತವ್ಯ


ಏಪ್ರಿಲ್ 27, 2018 


  • ಬೆಳಿಗ್ಗೆ 10:10ಕ್ಕೆ ಬಳ್ಳಾರಿಗೆ ಪ್ರಯಾಣ

  • ಬೆಳಿಗ್ಗೆ 10:30ಕ್ಕೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ

  • ಬೆಳಿಗ್ಗೆ 10:50ಕ್ಕೆ ಕನಕ ದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆವರೆಗೆ ರೋಡ ಶೋ

  • ಮಧ್ಯಾಹ್ನ 12:00ಕ್ಕೆ ಹೋಟೆಲ್ ರಾಯಲ್ ಫೋರ್ಟ್ ನಲ್ಲಿ ಸಂಘಟನಾತ್ಮಕ ಸಭೆ

  • ಮಧ್ಯಾಹ್ನ 03:00ಕ್ಕೆ ಶಾರದಾ ಟಾಕೀಸ್ ನಲ್ಲಿ ಮತ್ತೊಂದು ಸಂಘಟನಾತ್ಮಕ ಸಭೆ

  • ಸಂಜೆ 04:00ಕ್ಕೆ ಗವಿ ಮಠಕ್ಕೆ ಭೇಟಿ

  • ಸಂಜೆ 05:20ಕ್ಕೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ

  • ಸಂಜೆ 06:50ಕ್ಕೆ ಗಂಗಾವತಿಯಲ್ಲಿ ಸಾರ್ವಜನಿಕ ಸಭೆ


ಏಪ್ರಿಲ್ 28, 2018 


  • ಬೆಳಿಗ್ಗೆ  10:40ಕ್ಕೆ ಬಸವೇಶ್ವರ ಐಕ್ಯ ಸ್ಥಳ ಕೂಡಲ ಸಂಗಮಕ್ಕೆ ಭೇಟಿ

  • ಮಧ್ಯಾಹ್ನ 12:30ಕ್ಕೆ ಬೀಳಗಿಯಲ್ಲಿ ಸಾರ್ವಜನಿಕ ಸಭೆ

  • ಮಧ್ಯಾಹ್ನ 01:30ಕ್ಕೆ ಬಾಗಲಕೋಟೆಯ ಬಿ.ವಿ.ಎಸ್. ಕ್ಯಾಂಪಸ್ ನಲ್ಲಿ ಸಂಘಟನಾತ್ಮಕ ಸಭೆ

  • ಮಧ್ಯಾಹ್ನ 03:30ಕ್ಕೆ ತಿಕೋಟದಲ್ಲಿ ಸಾರ್ವಜನಿಕ ಸಭೆ

  • ಸಂಜೆ 04:45ಕ್ಕೆ ವಿಜಯಪುರದಲ್ಲಿ ರೋಡ್ ಶೋ

  • ಸಂಜೆ 06:15ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ

  • ರಾತ್ರಿ 07:00ಕ್ಕೆ ಸಂಘಟನಾತ್ಮಕ ಸಭೆ


ಏಪ್ರಿಲ್ 29, 2018 


  • ಬೆಳಿಗ್ಗೆ 10:45 ಕ್ಕೆ ದಾವಣಗೆರೆ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ

  • ಬೆಳಿಗ್ಗೆ 11:20ಕ್ಕೆ ದಾವಣಗೆರೆಯಲ್ಲಿ ರೋಡ್ ಶೋ

  • ಮಧ್ಯಾಹ್ನ 12:30ಕ್ಕೆ ದಾವಣಗೆರೆಯ ಜಿ.ಎಂ.ಐ.ಟಿ ಕಾಲೇಜ್ ನಲ್ಲಿ ಸಂಘಟನಾತ್ಮಕ ಸಭೆ 

  • ಮಧ್ಯಾಹ್ನ 02:30ಕ್ಕೆ ಚಿತ್ರದುರ್ಗದಲ್ಲಿ ಸಂಘಟನಾತ್ಮಕ ಸಭೆ.

  • ಸಂಜೆ 04:00ಕ್ಕೆ ಹಿರಿಯೂರಿನಲ್ಲಿ ಸಾರ್ವಜನಿಕ ಸಭೆ

  • ಸಂಜೆ 05:40ಕ್ಕೆ ತುಮಕೂರಿನಲ್ಲಿ ರೋಡ್ ಶೋ

  • ರಾತ್ರಿ 07:00ಕ್ಕೆ ಸಂಘಟನಾತ್ಮಕ ಸಭೆ 


ಏಪ್ರಿಲ್ 30, 2018 


  • ಏಪ್ರಿಲ್ 30 ರಂದು ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಸಂಘಟನಾತ್ಮಕ ಸಭೆಗಳಲ್ಲಿ ಶಾ ಭಾಗಿಯಾಗಲಿದ್ದು 

  • ಮಧ್ಯಾಹ್ನ 02:45ಕ್ಕೆ ಕೋಲಾರದಲ್ಲಿ ಸಂಘಟನಾತ್ಮಕ ಸಭೆ

  • ಸಂಜೆ 04:30ಕ್ಕೆ ಕೆ.ಜಿ.ಎಫ್ ನಲ್ಲಿ ಸಾರ್ವಜನಿಕ ಸಭೆ

  • ಸಂಜೆ 07:00ಕ್ಕೆ ಗೌರಿಬಿದರೂರಿನಲ್ಲಿ ಸಾರ್ವಜನಿಕ ಸಭೆ

  • ರಾತ್ರಿ 08:00ಕ್ಕೆ ದೇವನಹಳ್ಳಿಯಲ್ಲಿ  ಸಂಘಟನಾತ್ಮಕ ಸಭೆ‌ ನಡೆಸಲಿರೋ ಅಮಿತ್ ಶಾ 

  • ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು ಅಲ್ಲಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ.