ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರ ನಾಯಕರು ಈಗಾಗಲೇ ರಾಜ್ಯದಲ್ಲಿ ತಮ್ಮ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಜಯ ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. 


COMMERCIAL BREAK
SCROLL TO CONTINUE READING

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ 10 ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ದಿನಕ್ಕೆ ಆರು ಕ್ಷೇತ್ರಗಳಂತೆ ಹತ್ತು ದಿನಗಳಲ್ಲಿ ಅರವತ್ತಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸಲಿದ್ದಾರೆ.


ಇಂದು ಬೆಳಿಗ್ಗೆ 11:30ಕ್ಕೆ ಬೆಳಗಾವಿಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ  ಆರಂಭವಾಗಲಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯರ ಪ್ರವಾಸದ ವೇಳಾಪಟ್ಟಿ


  • ಏಪ್ರಿಲ್ 28 : ಬೆಳಗಾವಿ

  • ಏಪ್ರಿಲ್ 29 : ಬಾಗಲಕೋಟೆ, ವಿಜಯಪುರ

  • ಏಪ್ರಿಲ್ 30 : ಕಲಬುರಗಿ, ಬೀದರ್, ರಾಯಚೂರು

  • ಮೇ 01   : ಗದಗ, ಧಾರವಾಡ

  • ಮೇ 02   : ಹಾವೇರಿ, ಬಳ್ಳಾರಿ

  • ಮೇ 03   : ಚಿತ್ರದುರ್ಗ, ದಾವಣಗೆರೆ

  • ಮೇ 04   : ಶಿವಮೊಗ್ಗ

  • ಮೇ 05   : ತುಮಕೂರು

  • ಮೇ 06   : ಚಾಮರಾಜನಗರ