ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗವು ಮಿಥಿಕ್ ಸೊಸೈಟಿ ಧನಸಹಾಯ ಪಡೆದು ಕಬ್ಬಿಣ ಯುಗದ ಸಮಾಧಿಗಳ ಉತ್ಖನನ ಆರಂಭಿಸಿದೆ.
ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಈ ಕಬ್ಬಿಣ ಯುಗದ ಸಮಾಧಿಗಳಿದ್ದು 2000-2500 ವರ್ಷಗಳಾದ್ದಾಗಿದೆ. ಸ್ಥಳೀಯಯವಾಗಿ ಇದನ್ನು ಪಾಂಡವರ ಮನೆ ಎಂದು ಕರೆಯಲಾಗುತ್ತಿದ್ದು ಬಂಡೆಕಲ್ಲಗಳನ್ನು ಸುತ್ತಲೂ ಜೋಡಿಸಿ ಮಧ್ಯದಲ್ಲಿ ಕಲ್ಲಿನ ರಾಶಿಗಳನ್ನು ಗುಪ್ಪೆ ಥರಾ ಮಾಡಲಾಗಿದೆ. ಇಂದಿನಿಂದ ಈ ಸಮಾಧಿಗಳ ಉತ್ಖನನ ಕಾರ್ಯ ಆರಂಭಗೊಂಡಿದೆ.
ಮೈವಿವಿಯ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ ಶೋಭಾ ನೇತೃತ್ವದಲ್ಲಿ 20 ಕ್ಕೂ ಅಧಿಕ ಸಂಶೋಧಕರು, ವಿದ್ಯಾರ್ಥಿಗಳು ಈ ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.
1961 ರಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ವತಿಯಿಂದ ಈ ಸಮಾಧಿಗಳನ್ನು ಕೃಷ್ಣಮೂರ್ತಿ ಎಂಬವರು ಗುರುತು ಮಾಡಿದ್ದರು. ಆದಾದ ಬಳಿಕ ಸಂಶೋಧನಾ ಕಾರ್ಯ ನಡೆದಿರಲಿಲ್ಲ. ಈಗ , ಉತ್ಖನನ ಆರಂಭಿಸಿದ್ದು ಕಬ್ಬಿಣ ಯುಗದ ಜನರ ನಂಬಿಕೆ ಏನಾಗಿತ್ತು, ಸಮಾಧಿಯಲ್ಲಿ ಅವರು ಯಾವ ವಸ್ತುಗಳನ್ನು ಇಡುತ್ತಿದ್ದರು, ಅವರ ದೃಷ್ಟಿಯಲ್ಲಿ ಸಮಾಧಿ ಅಂದರೆ ಏನಾಗಿತ್ತು, ಸಮಾಧಿ ಒಳಗಡೆ ಎಷ್ಟೆಲ್ಲಾ ವಸ್ತುಗಳನ್ನು ಇಡುತ್ತಿದ್ದರು ಎಂಬ ವಿಚಾರ ಈ ಉತ್ಖನನದಲ್ಲಿ ತಿಳಿಯುವ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.