ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷದಲ್ಲಿ ಯಾವುದೇ ಕಾಗದದ ಸಹಾಯವಿಲ್ಲದೆ ಮಾತನಾಡುವಂತೆ ಸವಾಲು ಹಾಕಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ನಿಮಿಷದ ಸವಾಲು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸವಾಲು ಹಾಕಿದ್ದಾರೆ.


ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ, ಆತ್ಮೀಯ ಪ್ರಧಾನಿ @ ನರೇಂದ್ರಮೋದಿ ಅವರೇ, ಈ ಚುನಾವಣೆಯಲ್ಲಿ ನೀವು ಭ್ರಷ್ಟಾಚಾರವನ್ನು ಮಾಡಿದ್ದೀರಿ ಎಂದು ನನಗೆ ಖುಷಿಯಾಗಿದೆ ಏಕೆಂದರೆ ಅದು ನಿಮ್ಮ ದುರ್ಬಲ ಅಂಶವಾಗಿದೆ.


ನಮ್ಮ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ.


ಚುನಾವಣೆಯಲ್ಲಿ ಜಯಗಳಿಸಲು ರೆಡ್ಡಿ ಬ್ರದರ್ಸ್ ಅನ್ನು ಬಳಸುವ ನೈತಿಕತೆಯ ಬಗ್ಗೆ ನೀವು 5 ನಿಮಿಷಗಳ ಕಾಲ ಮಾತನಾಡಬಹುದೇ? ಎಂದು ಸವಾಲು ಒಡ್ಡಿದ್ದಾರೆ.


ಇದರೊಂದಿಗೆ ವಿಡಿಯೋ ಒಂದನ್ನು ಲಗತ್ತಿಸಿರುವ ಸಿದ್ದರಾಮಯ್ಯ, ಭ್ರಷ್ಟಾಚಾರದ ಕೇಸ್ ಇರುವ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಮಾಡಿರುವ ಬಗ್ಗೆ ಹಾಗೂ ರೆಡ್ಡಿ ಪಾಳಯದವರಿಗೆ ಟಿಕೆಟ್ ನೀಡಿರುವ ಬಗ್ಗೆ ಪೇಪರ್ ನೋಡಿಯೇ 5 ನಿಮಿಷಗಳ ಮಾತನಾಡಬಹುದೆ @narendramodi ಎಂದು ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.