ವಿಜಯಪುರ : ಕಳೆದ 50 ವರ್ಷಗಳಿಂದ ದೇಶದ ಆಡಳಿತ ನಡೆಸಿದ ಕಾಂಗ್ರೆಸ್, ತನ್ನ ವಂಶಾಡಳಿತದ ಮೂಲಕ ದೇಶವನ್ನೇ ನಾಶ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ವಿಜಯಪುರದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 50 ವರ್ಷಗಳಿಂದ ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ವಂಶಾಡಳಿತದ ಮೂಲಕ ದೇಶವನ್ನೇ ನಾಶ ಮಾಡಿದೆ. ಇದೀಗ ಕರ್ನಾಟಕ ಚುನಾವಣೆಯಲ್ಲಿ  ರಾಹುಲ್ ಗಾಂಧಿಯಿಂದ ಏನೂ ಮಾಡಲಾಗುವುದಿಲ್ಲ ಎಂದು ಅರಿತ ಕಾಂಗ್ರೆಸ್ ನಾಯಕರು, ಇದೀಗ ಅವರ ತಾಯಿ ಸೋನಿಯಾ ಗಾಂಧಿ ಕರೆತರುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲುವ ಕನಸನ್ನು ಈಗಾಗಲೇ ಬದಿಗೆ ಸರಿಸಿದ್ದು ನಿಚ್ಚಳವಾಗಿದೆ. ಈಗ ಕೇವಲ ತಮ್ಮ ಪಕ್ಷದ ಠೇವಣಿ ಉಳಿದರೆ ಸಾಕು ಎಂಬ ಹಂತಕ್ಕೆ ಕಾಂಗ್ರೆಸ್ ತಲುಪಿದೆ ಎಂದು ಮೋದಿ ವ್ಯಂಗ್ಯವಾಡಿದರು. 


ಮುಧೋಳ ನಾಯಿಯನ್ನಾದರೂ ನೋಡಿ ಕಾಂಗ್ರೆಸ್ ದೇಶಭಕ್ತಿಯನ್ನು ಕಲಿಯಲಿ- ಪ್ರಧಾನಿ ಮೋದಿ


ಯಾವುದೇ ಜಾತಿ ಧರ್ಮದವರಾಗಲಿ ಅವರ ರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ಸರ್ಕಾರ ಅತ್ಯಾಚಾರಿಗಳಿಗೆ ನಮ್ಮ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಮರಣ ದಂಡನೆ ಕಾನೂನು ತರುವ ಮೂಲಕ ಮಹಿಳೆಯರ, ಮಕ್ಕಳ ಹಕ್ಕುಗಳ ರಕ್ಷಣೆಗೆ ಬಿಜೆಪಿ ಕಠಿಣ ಕ್ರಮ ಕೈಗೊಂಡಿದೆ. ತ್ರಿವಳಿ ತಲಾಖ್ ವಿರುದ್ಧ ನಾವು ಕಾನೂನು ಜಾರಿಗೆ ತಂದಿದ್ದೇವೆ. ಆದರೆ ಕಾಂಗ್ರೆಸ್ ಹೆಣ್ಣು ಮಕ್ಕಳ ರಕ್ಷಣೆ ವಿಚಾರದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಕಿಡಿಕಾರಿದರು. 


ಕಾಂಗ್ರೆಸ್ ಸರ್ಕಾರ ದಲಿತರನ್ನು ಕಡೆಗಣಿಸಿದೆ: ಮದಕರಿ ನಾಯಕನ ನಾಡಲ್ಲಿ ಮೋದಿ


ಕಾಂಗ್ರೆಸ್ ಪಕ್ಷ 50 ವರ್ಷಗಳವರೆಗೆ ದೇಶದಲ್ಲಿ ಅಧಿಕಾರದಲ್ಲಿ ಇತ್ತು. ಆದರೆ ಪ್ರಜಾಪ್ರಭುತ್ವದ ಸಂದೇಶವನ್ನು ಸಾರಿದ ಬಸವೇಶ್ವರರ ಪ್ರತಿಮೆಯನ್ನು ಸಂಸತ್ತಿನಲ್ಲಿ ಅನುಷ್ಠಾನಗೊಳಿಸುವ ಆಲೋಚನೆ ಮಾಡಲಿಲ್ಲ. ಬಸವೇಶ್ವರರ ಪ್ರತಿಮೆ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪಿಸಿದ್ದು ಅಟಲ್ ಜಿ ಯವರ ಸರ್ಕಾರ. ಬಸವೇಶ್ವರರನ್ನು ಅವಮಾನಿಸುವಂಥ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲರನ್ನು ಒಗ್ಗೂಡಿಸುವ ಮಂತ್ರವನ್ನು ಬಸವೇಶ್ವರರು ಹೇಳಿದರೆ, ಅದೇ ಬಸವಣ್ಣನವರ ಹೆಸರಿನಲ್ಲಿ ಧರ್ಮ ವಿಭಜಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದನ್ನು ರಾಜ್ಯದ ಜನತೆ ಖಂಡಿತಾ ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. 


ಬೆಂಗಳೂರಿನಲ್ಲಿ ನಿರ್ಮಿಸಲು ಹೊರಟಿದ್ದು Steel ಬ್ರಿಡ್ಜ್ ಅಲ್ಲ, Steal ಬ್ರಿಡ್ಜ್ : ನರೇಂದ್ರ ಮೋದಿ


ಮನೆಯಲ್ಲಿ ಎರಡು ಗಂಟೆ ಕರೆಂಟ್ ಹೋದರೂ ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ 4 ಕೋಟಿ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಇನ್ನಾದರೂ ನಿಮ್ಮ ಮನೆಯಲ್ಲಿ ಬೆಳಕು ಮೂಡಬೇಕೆಂದರೆ ಜನಪರ ಕಾಳಜಿ ಹೊಂದಿರುವ ಬಿಜೆಪಿಗೆ ಮತ ನೀಡಿ ಎಂದು ಮೋದಿ ಜನತೆಗೆ ಕರೆ ನೀಡಿದರು.