ಬಂಗಾರಪೇಟೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಇಡೀ ವ್ಯವಸ್ಥೆಯನ್ನು ನಾಶ ಮಾಡಿದ್ದು, 6 ರೋಗಗಳಿಂದ ಬಳಲುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದ ಬಂಗಾರಪೇಟೆಯಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಸಂಸ್ಕೃತಿ, ಕೋಮುವಾದ, ಜಾತಿವಾದ, ಅಪರಾಧ, ಭ್ರಷ್ಟಾಚಾರ ಹಾಗೂ ಗುತ್ತಿಗೆದಾರಿಕೆ ಎಂಬ ಆರು ರೋಗಗಳಿಂದ ಬಳಲುತ್ತಿದೆ. ಈ ವೈರಸ್ ಅನ್ನು ಎಲ್ಲೆಡೆ ಹರಡುತ್ತಿದೆ. ಇದರಿಂದ ರಾಜ್ಯದ ವ್ಯವಸ್ಥೆ ಹದಗೆಡುತ್ತಿದೆ ಎಂದು ಹೇಳಿದರು.


ಕಾಂಗ್ರೆಸ್ ಪಕ್ಷ "ದಿಲ್ ವಾಲಿ" ಅಲ್ಲ "ಡೀಲ್ ವಾಲಿ" ಪಕ್ಷ. ಡೀಲ್ ಗಳಿಂದಲೇ ಪಕ್ಷ ನಡೆಯುತ್ತಿದೆ.ಕಾಂಗ್ರೆಸ್ ಪಕ್ಷದಲ್ಲಿ ಗುತ್ತಿಗೆದಾರಾರಿಗೆ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿದೆಯೆಂದು ಆ ಪಕ್ಷದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಈಕೆ, ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಹಿರಿಯ ನಾಯಕರಾಗಿದ್ದರೂ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡಿಲ್ಲ. ದಲಿತರನ್ನು ಕಡೆಗಣಿಸಿದೆ ಎಂದು ಮೋದಿ ಆರೋಪಿಸಿದರು. 


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಪ್ರಧಾನಿ ಆಗಲು ಸಿದ್ಧ ಎಂದು ನೀಡಿದ್ದ ಹೇಳಿಕೆ ಕುರಿತು ಮಾತನಾಡಿದ ಮೋದಿ, ರಾಹುಲ್ ಗಾಂಧಿ ತನ್ನನು ತಾನು ಪ್ರಧಾನಮಂತ್ರಿ ಎಂದು ಘೋಷಣೆ ಮಾಡಿಕೊಂಡಿರುವುದು ಅವರಲ್ಲಿರುವ ಅಹಂಕಾರವನ್ನು ತೋರಿಸುತ್ತದೆ. ಸುಳ್ಳನ್ನು ಹೇಳುವುದಷ್ಟೇ ಕಾಂಗ್ರೆಸ್ ನ ಅಧ್ಯಕ್ಷರ ಹೊಸ ಚಾಳಿಯಾಗಿದೆ. ಸುಳ್ಳಿನ ತಳಹದಿಯ ಮೇಲೆ, ಅಧೋಗತಿಗೆ ಇಳಿದಿರುವ ಪಕ್ಷವನ್ನು ಪುನಶ್ಚೇತನಗೊಳಿಸುವ ಕನಸನ್ನು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಕಾಂಗ್ರೆಸ್ ಪಕ್ಷ ವಂಶಪಾರಂಪರ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೊಸ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಅದು ಸುಳ್ಳು ಹೇಳುವುದು, ಪದೇ ಪದೇ ಸುಳ್ಳು ಹೇಳುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸುಳ್ಳು ಹೇಳುವುದು. ಕಾಂಗ್ರೆಸ್ ಪಕ್ಷ ಪಿಪಿಪಿ ಗಳಿಗೆ ಸೀಮಿತವಾಗಿದೆ. ಅವರ ಪ್ರಕಾರ ಪಿಪಿಪಿ ಎಂದರೆ ಪಂಜಾಬ್, ಪಾಂಡಿಚೇರಿ, ಪರಿವಾರ ಎಂದು ಎಂದು ತಿಳಿಸಿದರು.


ಕಾಂಗ್ರೆಸ್ ಪಕ್ಷ ಮೀಸಲಾತಿ ವಿಷಯದಲ್ಲಿ, ದಲಿತರನ್ನು ದಾರಿ ತಪ್ಪಿಸುವ ಘೋರ ಕೆಲಸಕ್ಕೆ 'ಕೈ' ಹಾಕಿದೆ. ಆದರೆ, ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿದಷ್ಟು ಕೊಡುಗೆಯನ್ನು ಬೇರಾವ ಪಕ್ಷವೂ ನೀಡಿಲ್ಲ.ಭಾರತದ ಜನತೆ ಸುಳ್ಳುಗಳನ್ನು ಹೇಳುವ ಪಕ್ಷಗಳಿಗೆ ಈಗಾಗಲೇ ಮುಕ್ತಿ ನೀಡಿ ಮನೆಗೆ ಕಳುಹಿಸಿದ್ದನ್ನು ಮರೆತಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಗೆ ಅವಕಾಶ ಸಿಗುತ್ತಿದೆಯೋ ಅಲ್ಲಿ ಕೆಟ್ಟ ಆಡಳಿತ ನೀಡುತ್ತಿದ್ದು, ನಾಮ್ ದಾರ್ ಗಳ ಪರ ಕೆಲಸ ಮಾಡುವ ಕಾಂಗ್ರೆಸ್, ಜನಸಾಮಾನ್ಯರ ಪರ ಏನು ಮಾಡಿದೆ?" ಪ್ರಶ್ನೆ ಪ್ರಶ್ನಿಸಿದರು. 


ಬಿಜೆಪಿಯ ನಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್ ಯೋಜನೆಗಳ ನಕಲಿ ಎದ್ನು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಕಾಂಗ್ರೆಸ್ ನ ತರಹ ಹುಸಿ ಕನಸನ್ನು ಬಿತ್ತಿದ 'ಮಹಾಕಾವ್ಯ'ದ ಥರ ಅಲ್ಲ ನಮ್ಮ ಪ್ರಣಾಳಿಕೆ. ನಮ್ಮದು 'ವಚನ'ಕೊಡುವ ಹಾಗೂ ಕೊಟ್ಟ ವಚನವನ್ನು ಪರಿಪೂರ್ಣವಾಗಿ ಪಾಲಿಸುವ ಪಕ್ಷ. ದೇಶದ ಜನತೆಯೇ ಹಿತ ಕಾಯುವುದೇ ಬಿಜೆಪಿ ಮೂಲ ಮಂತ್ರ ಎಂದು ಪ್ರಧಾನಿ ಹೇಳಿದರು.