ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರೇ ಎಲ್ಲ ಪ್ರಶ್ನೆಗಳಿಗೆ  ಎಲ್ಲ ಉತ್ತರಗಳನ್ನು ಟ್ವಿಟ್ಟರ್ ನಲ್ಲಿಯೇ ನೀಡುವ ಮೂಲಕ ಟ್ವಿಟ್ಟರ್ ವಾರ್ ನ್ನು ಮುಂದೆವರೆಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ ತಮ್ಮ ಮುಂಬೈ ಪ್ರವಾಸದ ವೇಳೆ ಮಹಾದಾಯಿ ವಿಷಯ ಪ್ರಸ್ತಾವಿಸುತ್ತಾ ಕರ್ನಾಟಕವು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಬೇಕಿತ್ತು,  ಏಕೆಂದರೆ  2007 ರಲ್ಲಿ ಅವರು ಕರ್ನಾಟಕ ಮಹಾದಾಯಿ ನೀರಿನ ಮೇಲೆ ಹಕ್ಕು ಇಲ್ಲ ಇಂದು ಹೇಳಿದ್ದರು " ಎಂದು  ಮೋದಿ ಭಾಷಣ ಮಾಡಿದ್ದಾರೆ. 



ಈಗ ಇದಕ್ಕೆ ತಕ್ಷಣ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ "ನರೇಂದ್ರ ಮೋದಿಯವರೇ ,ಮಹಾದಾಯಿ ವಿಚಾರವಾಗಿ ಗೋವಾದ ಮುಖ್ಯಮಂತ್ರಿ ಒಪ್ಪದೇ ಇದ್ದಾಗ ಪ್ರಧಾನ ಮಂತ್ರಿಗಳು ಮಧ್ಯಸ್ತಿಕೆ ವಹಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ ಇನ್ನು  ಮುಂದುವರೆದು "ನೀವು ಬರೀ ಹಿಂದೆ ನೋಡ್ತಿರಿ. ಮುಂದೆ ನೋಡಿ ನೀವು ಏನ್ ಮಾಡ್ತೀರಾ ಹೇಳಿ ಸರ್" ಎಂದು ಮೋದಿ ಅವರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.