ನವದೆಹಲಿ: ಈಗ ಎಲ್ಲರ ಚಿತ್ತ ಕರ್ನಾಟಕ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ. ಅಂತಿಮ ಚುನಾವಣಾ ಫಲಿತಾಂಶ ಮಂಗಳವಾರದಂದು ಹೊರಬರಲಿದೆ.


COMMERCIAL BREAK
SCROLL TO CONTINUE READING

ಮೇ 12 ರಂದು ಒಟ್ಟು 224 ಗಳಲ್ಲಿ 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ನಡೆದಿತ್ತು, ಅದರಲ್ಲಿ ಎರಡು ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿದೆ.  ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕಾಗಿ  ಸುಮಾರು 58,546 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ  154 ಸಾಮಾನ್ಯ ವೀಕ್ಷಕರು,136 ವೆಚ್ಚ ವೀಕ್ಷಕರು, 34 ಪೋಲಿಸ್ ವೀಕ್ಷಕರು 10,000 ಅತಿ ಸೂಕ್ಷ್ಮ ವೀಕ್ಷಕರು 3.2 ಲಕ್ಷ ಚುನಾವಣಾ ಸಿಬ್ಬಂಧಿಗಳು ಚುನಾವಣಾ ಯಶಸ್ಸಿಗೆ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ವಿವಿಪ್ಯಾಟ್ ನ್ನು ಚುನಾವಣೆಯಲ್ಲಿ ಬಳಸಲಾಗಿತ್ತು.


ಈ ಬಾರಿಯ ಚುನಾವಣೆಯಲ್ಲಿ 216 ಮಹಿಳಾ ಅಭ್ಯರ್ಥಿಗಳು ಸಹಿತ ಒಟ್ಟು  2,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನದ ನಂತರ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ ಮಾಧ್ಯಮಗಳು ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಅಲ್ಲದೆ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದವು. ಇಗ ಎಲ್ಲ ಪ್ರಶ್ನೆ ಗಳಿಗೆ ನಾಳಿನ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.