ನವದೆಹಲಿ: ಯಡಿಯೂರಪ್ಪನವರು ಬಹುಮತಕ್ಕೆ ಮುಂದಾಗದೆ ರಾಜಿನಾಮೇ ನೀಡಿದ ಕ್ರಮಕ್ಕೆ ಪ್ರತಿಕ್ರಯಿಸಿದ ರಾಹುಲ್ ಗಾಂಧಿ ಈ ಬಾರಿ ಪ್ರತಿಪಕ್ಷಗಳು  ಒಂದಾಗಿ ಬಿಜೆಪಿಯನ್ನು ಸೋಲಿಸಿರುವುದು  ಹೆಮ್ಮೆ ವಿಷಯ ಎಂದು  ತಿಳಿಸಿದ್ದಾರೆ.  


COMMERCIAL BREAK
SCROLL TO CONTINUE READING

ಇಂದಿನ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ವಿಶ್ವಾಸಮತಕ್ಕೆ ಮುಂದಾಗದೆ ರಾಜಿನಾಮೆ ನೀಡಿದ ನಂತರ ಮಾತನಾಡಿದ ರಾಹುಲ್  ‘ಬಿಜೆಪಿಯಾ  ಶಾಸಕರು ಹಾಗೂ ಸ್ಪೀಕರ್‌ ರಾಷ್ಟ್ರಗೀತೆ ಮುಗಿಯುವುದಕ್ಕೂ ಮೊದಲೇ ವಿಧಾನಸೌಧದಿಂದ ಹೊರ ನಡೆದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಎಲ್ಲ ಜನರಿಗೆ ಅಗೌರವ ಬರುವ ಹಾಗೆ ನಡೆದುಕೊಂಡಿದ್ದಾರೆ’ ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು. 


ಯಾವ ಸಂಸ್ಥೆಯೂ ಆರ್‌ಎಸ್‌ಎಸ್ ಪ್ರಭಾವದಿಂದ ಹೊರತಾಗಿಲ್ಲ. ರಾಜ್ಯಪಾಲರ ಮೇಲೆಯೂ ಒತ್ತಡ ವಿದೆಪ್ರಭಾವವಿದೆ. ಅವರು  ತಮ್ಮ ಅಧಿಕಾರ ಮತ್ತು ಕಾರ್ಯಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾರಣವಿಷ್ಟೇ ಎಲ್ಲ ಕಡೆಯೂ ಆರ್‌ಎಸ್‌ಎಸ್‌ ಅಧಿಕಾರ ನಡೆಸುತ್ತಿದೆ ಎಂದರು .


ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದ ರಾಹುಲ್ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಬಿಜೆಪಿಯು ಕುದುರೆ ವ್ಯಾಪಾರದ ಕೊಂಡುಕೊಳ್ಳಲುಪ್ರಯತ್ನಿಸಿತು ಆದರೆ  ಅವರ ಯಾವ ತಂತ್ರವು ಫಲ ನೀಡಲಿಲ್ಲ ಎಂದರು .ಇದೇ ವೇಳೆ  ರಾಹುಲ್ ಗಾಂಧಿ ಕರ್ನಾಟಕ ಜನತೆ, ಕಾಂಗ್ರೆಸ್‌  ನಾಯಕರು , ಜೆಡಿಎಸ್‌ನ  ಹಿರಿಯ ನಾಯಕ  ದೇವೇಗೌಡ ಅವರಿಗೆ ಧನ್ಯವಾದ ತಿಳಿಸಿದರು.