ಬೆಂಗಳೂರು: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 125 ರಿಂದ 130 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತ ಪಡೆಯುತ್ತದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಬಿಜೆಪಿಯ ಪರ ಅಲೆ ಇದೆ ಎಂದು ತಿಳಿಸಿದ ಯಡಿಯೂರಪ್ಪ  ತಾವು ದೀರ್ಘಕಾಲ ರಾಜಕೀಯದಲ್ಲಿರುವುದರಿಂದ  ಬಿಜೆಪಿ ಪೂರ್ಣ ಬಹುಮತ ಗಳಿಸುವುದನ್ನು  ಲಿಖಿತವಾಗಿ ಬರೆದು ಕೊಡುತ್ತೇನೆ ಬೇಕಾದರೆ ಫಲಿತಾಂಶ ಬಂದ ನಂತರ ತಾವು ಪರಿಶೀಲಿಸಬಹುದು ಎಂದು  ತಿಳಿಸಿದರು. ಅಲ್ಲದೆ ತಮ್ಮ ರಾಜಕೀಯ ಜೀವನದಲ್ಲಿನ ಲೆಕ್ಕಾಚಾರವು ಎಂದು ಹುಸಿಯಾಗಿಲ್ಲವೆಂದು ತಿಳಿಸಿದ ಅವರು ಬಿಜೆಪಿ 125 ರಿಂದ 130 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದರು. 


"ನಾವು 125-130 ಸೀಟುಗಳನ್ನು ಗೆಲ್ಲುವುದಾಗಿ ನಿರೀಕ್ಷಿಸುತ್ತೇವೆ, ಕಾಂಗ್ರೆಸ್ ಪಕ್ಷ  70 ಸೀಟ್  ದಾಟಲು ಸಾಧ್ಯವಿಲ್ಲ ಮತ್ತು ಜೆಡಿಎಸ್ 24-25 ದಾಟುವುದಿಲ್ಲ , ಇದು ನನ್ನ ಅಂಕಿ ಅಂಶ ನನ್ನ ರಾಜಕೀಯ ಜೀವನದಲ್ಲಿ ನನ್ನ ಲೆಕ್ಕಾಚಾರಗಳು ತಪ್ಪಾಗಿಲ್ಲ" ಎಂದು ಯಡಿಯೂರಪ್ಪ ತಿಳಿಸಿದರು .