ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ದೇವರ ಮೋರೆ ಹೋದ ಮೋದಿ ಬೆಂಬಲಿಗರು !
ಉಡುಪಿ: ಕರ್ನಾಟಕದಲ್ಲಿ ಮೋದಿಯವರ ಬೆಂಬಲಿಗರು ಈಗ ಕರ್ನಾಟಕದಲ್ಲಿ ದೇವರ ಮೋರೆ ಹೋಗಿದ್ದಾರೆ.ಶತಾಯಗತಾಯವಾಗಿ ಬಿಜೆಪಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬೆಂಬಲಿಗರು ಈಗ ರಾಜ್ಯದಲ್ಲಿ ದೇವರ ಶ್ರೀ ರಕ್ಷೆ ಪಡೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ.
ಅದರಲ್ಲಿ ನಲವತ್ತೈದು ವರ್ಷ ವಯಸ್ಸಿನ ಭಕ್ತ ಕೇಶವಚಾರ್ಯ ಅವರು ಉಡುಪಿಯಿಂದ ಸುಮಾರು 22 ಕಿ.ಮೀ. ದೂರದಲ್ಲಿರುವ ಶಿರೂರು ಗ್ರಾಮದಿಂದ ಪ್ರಯಾಣ ಬೆಳೆಸಿ ಮೋದಿಯ ಪರವಾಗಿ 800 ವರ್ಷ ವಯಸ್ಸಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದೇ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿಗೆ ಅವರು ಪ್ರಾರ್ಥಿಸಿದರು.
ಭಕ್ತರ ಇಚ್ಛೆಯನ್ನು ಪೂರೈಸಲು ಕನಿಷ್ಠ 1 ಲಕ್ಷ ತುಳಸಿ ಗಿಡಗಳನ್ನು ಮಠಕ್ಕೆ ನಿಡುವ ಪರಂಪರೆಗೆ ಶ್ರೀ ಮಠದ ವಿಧ್ಯಾದೀಶ ತೀರ್ಥ ಸ್ವಾಮಿ ಅವರು ಚಾಲನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಯನ್ನು ಪೂರೈಸಿಕೊಳ್ಳುವ ಸಲುವಾಗಿ ಕೇಶವಾಚಾರ್ಯ ಇಗ ತುಳಸಿ ಗಿಡಗಳನ್ನು ನೀಡಲು ನಿರ್ಧರಿಸಿದ್ದಾರೆ.