ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಟಿಪ್ಪು ಸುಲ್ತಾನ್ ರವರ ವಿಷಯವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ನವರ ಮೇಲೆ ಟೀಕಾ ಪ್ರಹಾರ ನಡೆಸುತ್ತಾ ಸಿದ್ದರಾಮಯ್ಯನವರೆ ನೀವು ಯಾಕೆ ಪಾಕಿಸ್ತಾನ ರೀತಿಯಲ್ಲಿಯೇ ವರ್ತಿಸುತ್ತಿರಿ ಎಂದು ಕಿಡಿ ಕಾರಿದ್ದರು.



COMMERCIAL BREAK
SCROLL TO CONTINUE READING

ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯನವರು " ಪೂರ್ ಅಮಿತ್ ಶಾ ನೀವು ನಿಜಕ್ಕೂ ತುಂಬಾ ಹತಾಶರಾಗಿದ್ದೀರಿ ನಿಮಗೆ ಇಲ್ಲಿ ಯಾವುದು ವರ್ಕ್ ಆಗುತ್ತಿಲ್ಲ ,ಟಿಪ್ಪು ಸುಲ್ತಾನ್ ಪಾಕಿಸ್ತಾನದಂತಹ ಸಂಗತಿಗಳು ಕೂಡ ಸಹಾಯಕ್ಕೆ ಬರುವುತ್ತಿಲ್ಲ, ನೀವು ಉತ್ತರ ಕರ್ನಾಟಕದ ಜನರಿಗೆ ಮಹಾದಾಯಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಹೇಳಿ ನೀವು ದ್ರೋಹ ಬಗೆದಿದ್ದೀರಿ ಅದರ ಬಗ್ಗೆ ಹೇಳಿ.
 
ಬಸವಣ್ಣನವರು ಸುಳ್ಳನ್ನು ಹೇಳಬೇಡ ಎಂದಿದ್ದಾರೆ. ಆದರೆ ಸುಳ್ಳಿನ ಶಾ ರವರಿಗೆ ಇದು ಉಪಯೋಗಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ.