ಸಾಗರ: ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಹಳೆಯದು, ಆದರೆ ರಾಹುಲ್ ಗಾಂಧಿಗೆ ಭಾರತಕ್ಕಿಂತ ಇಟಲಿಯ ಜೊತೆ ಸಂಬಂಧ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಗರದಲ್ಲಿಂದು ಹೇಳಿದರು.


COMMERCIAL BREAK
SCROLL TO CONTINUE READING

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯ ಪ್ರವಾಸ ಕೈಗೊಂಡಿರುವ ಸಿಎಂ ಯೋಗಿ ಆದಿತ್ಯನಾಥ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಹಳೆಯದು. ಗೋರಕ್ ಮಂಜುನಾಥ್ ಹಾಗೂ ಧರ್ಮಸ್ಥಳ ಮಂಜುನಾಥ ಇಬ್ಬರು ಒಂದೇ. ಭಾರತದ ಪರಂಪರೆ ಗೊತ್ತಿದ್ದರೆ ಕಾಗೋಡು ತಿಮ್ಮಪ್ಪ ಗೋ ಮಾಂಸ ತಿನ್ನುತ್ತೇನೆ ಮತ್ತು ಬೇರೆ ಅವರಿಗೆ ತಿನ್ನುವಂತೆ ಪ್ರೇರಣೆ ನೀಡುತ್ತಿರಲಿಲ್ಲ. ಕರ್ನಾಟಕ ಭೂಮಿ ಇಷ್ಟು ಸಂಮೃದ್ಧಿಯಾಗಿರಲು ಇಲ್ಲಿನ ಜನ ಗೋ ರಕ್ಷಣೆ ಹಾಗೂ ಗೋ ಪೂಜೆ ಮಾಡುತ್ತಿರುವುದೇ ಕಾರಣ ಎಂದರು.


ಯಡಿಯೂರಪ್ಪ ಸರ್ಕಾರದಲ್ಲಿ ಅಭಿವೃದ್ಧಿಯಾಗಿತ್ತು, ಈಗ ಏಕಿಲ್ಲ?
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ಆದರೆ ಈಗ ಯಾಕೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ ಯೋಗಿ, ಕರ್ನಾಟಕದಲ್ಲಿ ಜನರು ಸುರಕ್ಷಿತವಾಗಿಲ್ಲ, ಕೇವಲ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಎಟಿಎಂ ಮಾಡಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.