ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ಸಿದ್ಧತೆ ಹಿನ್ನೆಲೆಯಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ


ಸದಾ ಹುಲಿಯಂತೆ ಗತ್ತು ಗೈರತ್ತಿನಿಂದ ಆಡಳಿತ ನಡೆಸಿದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾದಾಗಲೇ ಕುಗ್ಗಿಹೋಗಿದ್ದರು. ಮಂಗಳವಾರ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಯಾವುದೋ ತಪ್ಪು ಮಾಡಿದವರಂತೆ ಮಾಧ್ಯಮಗಳ ಮುಂದೆ ಕೈಕಟ್ಟಿ ನಿಂತಿದ್ದ ಸಿದ್ದರಾಮಯ್ಯ ಅವರು, ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ತಾವೇ ನೇರ ಹೊಣೆ ಹೊತ್ತು ಭಾವುಕರಾಗಿ ಕಣ್ಣೀರಿಟ್ಟರು. ಇದನ್ನು ಕಂಡು ಸಿದ್ಧರಾಮಯ್ಯ ಆಪ್ತರೂ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.


ಸಿದ್ದರಾಮಯ್ಯ ಪಕ್ಷದಲ್ಲಿದ್ದರೆ ಕಾಂಗ್ರೆಸ್ಗೆ ಗೆಲುವಿಲ್ಲ: ಕೆ.ಬಿ.ಕೋಳಿವಾಡ


ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರಲಾಗಲಿಲ್ಲ. ಅಲ್ಲದೆ, ಚಾಮುಂಡೇಶ್ವರಿಯಲ್ಲೂ ಸೋಲುಂಟಾಯಿತು. ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ನನ್ನ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು. ಸ್ಥಿರ ಸರ್ಕಾರ, ಜನಪರ ಆಡಳಿತ ನೀಡಿದ ಹೊರತಾಗಿಯೂ ಬಹುಮತ ಪಡೆಯಲು ವಿಫ‌ಲವಾಗಿರುವ ಬಗ್ಗೆ ನನಗೆ ನೋವಿದೆ. ಈಗ ನನ್ನ ಪಕ್ಷದವರೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಸಿದ್ದರಾಮಯ್ಯ ಭಾವುಕರಾದರು ಎನ್ನಲಾಗಿದೆ.