ನೂತನ ನಾಡಧ್ವಜಕ್ಕೆ ಸದ್ಯಕ್ಕಿಲ್ಲ ಮಾನ್ಯತೆ!
`ಅಧಿಕೃತ ನಾಡಧ್ವಜ` ಹೊಂದಲು ನೀತಿ ಸಂಹಿತೆ ಅಡ್ಡಿ.
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 'ಅಧಿಕೃತ ನಾಡಧ್ವಜ' ಹೊಂದಲು ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ನಾಡಧ್ವಜವನ್ನು ಅನುಮೋದಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
''ತಮ್ಮನ್ನು ಕನ್ನಡಿಗನೆಂದು ಘೋಷಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಕನ್ನಡಿಗನಾಗುವುದೆಂದರೆ; ಕನ್ನಡ ಭಾಷೆ, ನಾಡಗೀತೆ (ರಾಜ್ಯ ಗೀತೆ), ನಾಡಧ್ವಜ(ರಾಜ್ಯ ಧ್ವಜ)ಗಳನ್ನು ಒಪ್ಪಿಕೊಳ್ಳುವುದೆಂದರ್ಥ,'' ಎಂದು ಪ್ರಧಾನಿಗೆ ‘#AnswerMadiModi’ ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಿದ್ದರು.