ಹುಂಡೈ ಕ್ರೆಟಾ ಮಾರಾಟದ ದಾಖಲೆ: ಹ್ಯುಂಡೈ ಕ್ರೆಟಾವನ್ನು ಭಾರತದಲ್ಲಿ ಮೊದಲ ಬಾರಿಗೆ 2015ರಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದಾಗಿನಿಂದ ಇದು ಭಾರತೀಯ ಖರೀದಿದಾರರಲ್ಲಿ ಜನಪ್ರಿಯವಾಗಿದೆ. ಇದರ ಮಾರಾಟವು ಪ್ರಾರಂಭದಿಂದಲೇ ವೇಗವನ್ನು ಪಡೆದುಕೊಂಡಿದ್ದು, ಅದು ಸ್ಥಿರವಾಗಿ ಉಳಿದಿದೆ. ಈಗ ಹ್ಯುಂಡೈನಿಂದ ʼಒಟ್ಟು 10 ಲಕ್ಷಕ್ಕೂ ಹೆಚ್ಚು ಕ್ರೆಟಾ ಯುನಿಟ್‌ಗಳು ಮಾರಾಟವಾಗಿವೆ' ಎಂದು ಕಂಪನಿ ಮಾಹಿತಿ ನೀಡಿದೆ. ಅಂದರೆ ಕಳೆದ 9 ವರ್ಷಗಳಲ್ಲಿ ಪ್ರತಿ 5 ನಿಮಿಷಗಳಿಗೊಮ್ಮೆ ಒಂದು ಹುಂಡೈ ಕ್ರೆಟಾ ಮಾರಾಟವಾಗುತ್ತಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಹ್ಯುಂಡೈ ಕ್ರೆಟಾ ತನ್ನ 2ನೇ ಪೀಳಿಗೆಯಲ್ಲಿದ್ದು, ಇಲ್ಲಿಯವರೆಗೆ ಹಲವಾರು ಬಾರಿ ನವೀಕರಿಸಲಾಗಿದೆ. ಜುಲೈ 2015ರಲ್ಲಿ ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಆಗಸ್ಟ್ 2018ರವರೆಗೆ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ. ಒಟ್ಟು 2.7 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಇದರ ನವೀಕರಿಸಿದ ಆವೃತ್ತಿಯನ್ನು ಮೇ 2018ರಲ್ಲಿ ಬಿಡುಗಡೆ ಮಾಡಲಾಯಿತು, ಇದನ್ನು ಫೆಬ್ರವರಿ 2020ರವರೆಗೆ ಮಾರಾಟ ಮಾಡಲಾಯಿತು. ಒಟ್ಟು 1.9 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. 


ಇದನ್ನೂ ಓದಿ: Need A Bride: ವಧು ಬೇಕು! 'ಇ-ರಿಕ್ಷಾ ಚಾಲಕ ತನಗಾಗಿ ವಧು ಹುಡುಕುತ್ತಿರುವ ಪರಿ ಇದು'


ಇದರ ನಂತರ ಹೊಸ ಮಾದರಿಯು ಮಾರ್ಚ್ 2020ರಲ್ಲಿ ಬಿಡುಗಡೆಯಾಯಿತು. ಇದು ಡಿಸೆಂಬರ್ 2023ರವರೆಗೆ ಮಾರಾಟಕ್ಕೆ ಲಭ್ಯವಿತ್ತು. ಇದರ ಒಟ್ಟು ಮಾರಾಟ 5.1 ಲಕ್ಷ ಯೂನಿಟ್‌ಗಳು. ಈಗ ಕ್ರೆಟಾದ ಪ್ರಸ್ತುತ ಮಾದರಿಯು ಮಾರಾಟಕ್ಕೆ ಲಭ್ಯವಿದ್ದು, ಇದನ್ನು ಜನವರಿ 2024ರಲ್ಲಿ ಪ್ರಾರಂಭಿಸಲಾಗಿದೆ. ಇದು ಇದುವರೆಗೆ 60,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ.


ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಮಾತನಾಡಿ, “ಹ್ಯುಂಡೈ ಕ್ರೆಟಾ ಭಾರತೀಯ ಗ್ರಾಹಕರ ಹೃದಯವನ್ನು ಗೆದ್ದಿರುವ ಬ್ರ್ಯಾಂಡ್ ಆಗಿದೆ. ಭಾರತೀಯ ರಸ್ತೆಗಳಲ್ಲಿ 1 ಮಿಲಿಯನ್ CRETA ಗಳೊಂದಿಗೆ, 'CRETA' ಬ್ರ್ಯಾಂಡ್ ನಿರ್ವಿವಾದ SUV ಎಂಬ ತನ್ನ ಪರಂಪರೆಯನ್ನು ಪುನರುಚ್ಚರಿಸಿದೆʼ ಎಂದು ಹೇಳಿದ್ದಾರೆ. 


ಇದನ್ನೂ ಓದಿ: Google Jobs: ಗೂಗಲ್‌ನಲ್ಲಿ ಉದ್ಯೋಗವನ್ನು ಪಡೆಯುವುದು ಹೇಗೆ..? ನಿಮಗೆ ತಿಳಿದಿದೆಯೇ..


"ಇತ್ತೀಚೆಗೆ ಬಿಡುಗಡೆಯಾದ ಹೊಸ ಹ್ಯುಂಡೈ CRETA ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರ ಬಿಡುಗಡೆ ದಿನಾಂಕದ ಘೋಷಣೆಯ ನಂತರ 60,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ. ನಮ್ಮ ಗ್ರಾಹಕರು ಕ್ರೆಟಾದ ಕಡೆಗೆ ತೋರಿಸಿರುವ ಪ್ರೀತಿ ಮತ್ತು ನಂಬಿಕೆಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆʼ ಎಂದು ಹೇಳಿದ್ದಾರೆ. ಕ್ರೆಟಾ ಶ್ರೇಣಿಯು 1.5L ಟರ್ಬೊ ಪೆಟ್ರೋಲ್ (160bhp), 1.5L ಪೆಟ್ರೋಲ್ NA (115bhp) ಮತ್ತು 1.5L ಡೀಸೆಲ್ (116bhp) ಎಂಬ ೩ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.