Need A Bride: ವಧು ಬೇಕು! 'ಇ-ರಿಕ್ಷಾ ಚಾಲಕ ತನಗಾಗಿ ವಧು ಹುಡುಕುತ್ತಿರುವ ಪರಿ ಇದು'

Need A Bride: ಮೊದಲೆಲ್ಲಾ ಸಂಬಂಧದಲ್ಲೇ ವಧು-ವರರನ್ನು ಹುಡುಕಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆನ್‌ಲೈನ್ ಮೂಲಕವೂ ವಧು-ವರರನ್ನು ಹುಡುಕಲಾಗುತ್ತಿದೆ. ಈ ಮಧ್ಯೆ, ವ್ಯಕ್ತಿಯೊಬ್ಬ ಇ-ರಿಕ್ಷಾದಲ್ಲಿ ವಿಶೇಷ ರೀತಿಯಲ್ಲಿ ವಧುವಿಗಾಗಿ ಹುಡುಕಾಟ ನಡೆಸಿದ್ದಾನೆ. ಹೇಗೆ ಅಂತೀರಾ... ಇಲ್ಲಿದೆ ವಿಶೇಷ ವರದಿ. 

Written by - Yashaswini V | Last Updated : Feb 19, 2024, 01:26 PM IST
  • ಚಿತ್ರದಲ್ಲಿ ಕಾಣಿಸುತ್ತಿರುವ ಯುವಕನ ಹೆಸರು ದೀಪೇಂದ್ರ ರಾಥೋಡ್.
  • 29 ವರ್ಷದ ದೀಪೇಂದ್ರ ರಾಥೋಡ್ ತನಗಾಗಿ ವಧುವನ್ನು ಹುಡುಕಲು ವಿಶಿಷ್ಟವಾದ ವಿಧಾನವನ್ನು ಅನುಸರಿಸಿದ್ದಾರೆ.
  • ಇ-ರಿಕ್ಷಾ ಚಾಲನೆ ಮಾಡಿ ಬದುಕಿನ ಬಂಡಿ ದೂಡುತ್ತಿರುವ ಈತ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿರುವ ಬಗ್ಗೆ ಹೇಳಿರುವುದೇನು ಗೊತ್ತಾ?
Need A Bride: ವಧು ಬೇಕು! 'ಇ-ರಿಕ್ಷಾ ಚಾಲಕ ತನಗಾಗಿ ವಧು ಹುಡುಕುತ್ತಿರುವ ಪರಿ ಇದು'  title=

Need A Bride: 'ಮದುವೆ'... ಭಾರತದಲ್ಲಿ ಮದುವೆ ಎಂದರೆ ಒಂದು ಪವಿತ್ರ ಬಂಧನ. ಹಿಂದೆಲ್ಲಾ ಸಂಬಂಧದಲ್ಲೇ ಮದುವೆ ಮಾಡಲಾಗುತ್ತಿತ್ತು. ಅದರಲ್ಲೂ ಕೆಲವರಂತೂ ಸೋದರ ಸಂಬಂಧವನ್ನು ಬಿಟ್ಟು ಬೇರೆಡೆಯಿಂದ ವಧುವನ್ನು ತರುವುದಾಗಲಿ, ಇಲ್ಲವೇ ಹುಡುಗಿಯನ್ನು ಬೇರೆ ಕಡೆಗೆ ಮದುವೆ ಮಾಡಿಕೊಡುವುದನ್ನಾಗಲಿ ಮಾಡುತ್ತಿರಲಿಲ್ಲ. ಆದರೀಗ ಕಾಲಕ್ಕೆ ತಕ್ಕಂತೆ ಜನರು ಕೂಡ ಬದಲಾಗುತ್ತಿದ್ದಾರೆ. ಒಳ್ಳೆಯ ಸಂಬಂಧ ಎಂದರೆ ಕೊಂಚ ದೂರದ ಸಂಬಂಧವಾದರೂ ಪರಸ್ಪರ ಸಂಬಂಧ ಬೆಳೆಸುತ್ತಿದ್ದಾರೆ. ಇದರ ಹೊರತಾಗಿ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ನಲ್ಲಿಯೂ ವಧು-ವರರ ವೇದಿಕೆಗಳು ತಲೆಯೆತ್ತತೊಡಗಿದ್ದು, ಮ್ಯಾಟ್ರಿಮೋನಿ ಮೂಲಕವೂ ವಧು-ವರರನ್ನು ಹುಡುಕಲಾಗುತ್ತಿದೆ. ಆದರಿಲ್ಲೊಬ್ಬ ಯುವಕ ಇ-ರಿಕ್ಷಾದಲ್ಲಿ ವಿಶೇಷವಾಗಿ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಈ ಮೇಲ್ಕಂಡ ಚಿತ್ರದಲ್ಲಿ ಕಾಣಿಸುತ್ತಿರುವ ಯುವಕನ ಹೆಸರು ದೀಪೇಂದ್ರ ರಾಥೋಡ್. 29 ವರ್ಷದ ದೀಪೇಂದ್ರ ರಾಥೋಡ್ ತನಗಾಗಿ ವಧುವನ್ನು ಹುಡುಕಲು ವಿಶಿಷ್ಟವಾದ ವಿಧಾನವನ್ನು ಅನುಸರಿಸಿದ್ದಾರೆ. ಇ-ರಿಕ್ಷಾ ಚಾಲನೆ ಮಾಡಿ ಬದುಕಿನ ಬಂಡಿ ದೂಡುತ್ತಿರುವ ಈತ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದು, ತನ್ನ ಇ-ರಿಕ್ಷಾದಲ್ಲಿಯೇ ತನ್ನ ಬಗೆಗಿನ ವೈಯಕ್ತಿಕ (ಎತ್ತರ, ಜನ್ಮ ದಿನಾಂಕ ಮತ್ತು ಗೋತ್ರದಂತಹ ) ಮಾಹಿತಿಗಳನ್ನು ಪ್ರದರ್ಶಿಸುತ್ತಿದ್ದಾನೆ. 

ಇದನ್ನೂ ಓದಿ- 103ನೇ ವಯಸ್ಸಿನಲ್ಲಿ 3ನೇ ಮದುವೆಯಾದ ತಾತ..! ವಧುವಿನ ವಯಸ್ಸು ಎಷ್ಟು ಗೊತ್ತೆ?

ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪೇಂದ್ರ ರಾಥೋಡ್, ನನ್ನ ಮದುವೆಯ ವಯಸ್ಸು ಮೀರುತ್ತಿದೆ. ಆದರೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಕೊರತೆಯಿಂದಾಗಿ ನನಗೆ ಸಂಗಾತಿ ಸಿಗುತ್ತಿಲ್ಲ. ಹಾಗಾಗಿ, ಈ ಉಪಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೆ, ತನಗೆ ಮದುವೆಯಾಗಲು ಯಾವುದೇ ಜಾತಿ, ಧರ್ಮದ ಭೇದವಿಲ್ಲ. ನನ್ನ (ದೀಪೇಂದ್ರ ರಾಥೋಡ್)  ವೈಯಕ್ತಿಕ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಲಾಗಿದ್ದು ನನ್ನ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಯಾವುದೇ ಮಹಿಳೆ ತನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. 

ಇದನ್ನೂ ಓದಿ- Viral News: ಮದುವೆ ಹೆಸರಲ್ಲಿ ಅನೇಕರಿಗೆ ಟೋಪಿ ಹಾಕಿದ ವಂಚಕಿ, ಎಷ್ಟು ಮದುವೆಯಾಗಿದ್ಲು ಗೊತ್ತಾ?

ದೀಪೇಂದ್ರ ರಾಥೋಡ್ ಅವರ ಈ ನಡೆಯನ್ನು ಅವರ ಪೋಷಕರೂ ಕೂಡ ಬೆಂಬಲಿಸಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಬೇಗ ವಧು ದೊರೆಯುವಂತಾಗಲಿ ಎಂದು ಅವರು ವ್ರತ ಪೂಜೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News