Train ticket booking : ರೈಲು ಪ್ರಯಾಣವನ್ನು ಸುಲಭಗೊಳಿಸಲು, MakeMyTrip ಅನೇಕ ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಪರಿಚಯಿಸಿದೆ.ಇದೀಗ ಟಿಕೆಟ್ ಬುಕ್ಕಿಂಗ್‌ನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಮೇಕ್‌ಮೈಟ್ರಿಪ್ ಹಲವು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಇಲ್ಲಿ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ.ಈ ವಿಶೇಷತೆಗಳಲ್ಲಿ ಒಂದು 'ಸೀಟ್ ಲಾಕ್'.ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ  ಸಂಪೂರ್ಣ ಟಿಕೆಟ್ ದರದ 25%ವನ್ನು  ಪಾವತಿಸುವ ಮೂಲಕ  ಸೀಟ್ ಬುಕ್ ಮಾಡಿಕೊಳ್ಳಬಹುದು. ಪ್ರಯಾಣದ 24 ಗಂಟೆಗಳ ಮೊದಲು ಉಳಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

MakeMyTrip ನ 'connected Travel' ವೈಶಿಷ್ಟ್ಯ : 
ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಮತ್ತೊಂದು ಸಮಸ್ಯೆ ಎಂದರೆ ನಿಮ್ಮ ಆಯ್ಕೆಯ ದಿನಾಂಕ ಮತ್ತು ನೇರ ರೈಲಿನಲ್ಲಿ ದೃಢೀಕೃತ ಟಿಕೆಟ್ ಅನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಇದೀಗ  MakeMyTrip ನ 'ಕನೆಕ್ಟೆಡ್ ಟ್ರಾವೆಲ್' ವೈಶಿಷ್ಟ್ಯದೊಂದಿಗೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗಿದೆ. ಈ ವೈಶಿಷ್ಟ್ಯವು ಬಸ್ ಮತ್ತು ರೈಲು ಪ್ರಯಾಣವನ್ನು ಸಂಯೋಜಿಸುವ ಹಲವು ಮಾರ್ಗಗಳನ್ನು ಸೂಚಿಸುತ್ತದೆ.ಇಲ್ಲಿ ಲೇಓವರ್ ಸಮಯ ಮತ್ತು ಸಂಪೂರ್ಣ ಪ್ರಯಾಣದ ಸಮಯವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 


ಇದನ್ನೂ ಓದಿ : ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !


ಮೇಕ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಹೇಳುವುದೇನು ? : 
ರೈಲು ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಪ್ರತಿ ಪ್ರಯಾಣವನ್ನು ಸ್ಮರಣೀಯವಾಗಿಸಲು ಬದ್ಧರಾಗಿದ್ದೇವೆ ಎಂದು ಮೇಕ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವನ್ ತಿಳಿಸಿದ್ದಾರೆ. ಸರಿಯಾದ ರೈಲು ಯೋಜನೆ ಮತ್ತು ಆಯ್ಕೆಯಿಂದ ಹಿಡಿದು ಟಿಕೆಟ್‌ಗಳನ್ನು ಖರೀದಿಸುವವರೆಗೆ ಮತ್ತು ಪ್ರಯಾಣಕ್ಕೂ ಮೊದಲು ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.ರೈಲು ಬುಕಿಂಗ್ ಮತ್ತು ಪ್ರಯಾಣದ ಪ್ರತಿಯೊಂದು ಹಂತದಲ್ಲೂ  ನವೀನ ವೈಶಿಷ್ಟ್ಯಗಳೊಂದಿಗೆ, ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ, ಅನುಕೂಲತೆ ಮತ್ತು ಸೌಕರ್ಯವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. . 


'ರೂಟ್ ಎಕ್ಸ್‌ಟೆನ್ಶನ್ ಅಸಿಸ್ಟೆನ್ಸ್ :
ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ 'ರೂಟ್ ಎಕ್ಸ್‌ಟೆನ್ಶನ್ ಅಸಿಸ್ಟೆನ್ಸ್'. ಇದನ್ನು MakeMyTrip ನ ಸ್ವಂತ ತಂತ್ರಜ್ಞಾನದಿಂದ ಮಾಡಲಾಗಿದೆ.ನಿಮ್ಮ ಆಯ್ಕೆಯ ರೈಲಿನಲ್ಲಿ ನಿಮಗೆ ಸೀಟು ಸಿಗದಿದ್ದರೆ ಪರ್ಯಾಯ ಮಾರ್ಗಗಳನ್ನು ಈ ವೈಶಿಷ್ಟ್ಯವು ಸೂಚಿಸುತ್ತದೆ.ಉದಾಹರಣೆಗೆ, A ನಿಂದ B ಗೆ ದೃಢೀಕೃತ ಟಿಕೆಟ್ ಲಭ್ಯವಿಲ್ಲದಿದ್ದರೆ,ಈ ವೈಶಿಷ್ಟ್ಯವು ಅದೇ ರೈಲಿನಲ್ಲಿ A ನಿಂದ C ವರೆಗಿನ ಟಿಕೆಟ್‌ಗಳನ್ನು ತೋರಿಸಬಹುದು.ಬಿ ಸ್ಟೇಷನ್ ದಾರಿಯಲ್ಲಿ ಇರುವುದರಿಂದ ನೀವು ಕೆಳಗೆ ಇಳಿಯಬಹುದು.ಸಾಮಾನ್ಯವಾಗಿ ಬಳಕೆದಾರರಿಗೆ ಅಂತಹ ಮಾರ್ಗಗಳನ್ನು ಸ್ವತಃವಾಗಿ ಕಂಡುಹಿಡಿಯುವುದು ಕಷ್ಟವಾಗುತ್ತದೆ. 


ಇದನ್ನೂ ಓದಿ : 43 ಇಂಚಿನ 4K Ultra HD Smart TV ಮೇಲೆ ಭರ್ಜರಿ ರಿಯಾಯಿತಿ! ಇಂದೇ ಖರೀದಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.