HSRP Number Plat Deadline Extension: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಬದಲಾವಣೆಗಾಗಿ ಈ ಮೊದಲು ನಿಗದಿಯಾಗಿದ್ದ 31 ಮೇ 2024ರವರೆಗಿನ ಗಡುವನ್ನು ರಾಜ್ಯ ಸರ್ಕಾರವು ಜೂನ್ 12 ರವರೆಗೆ ವಿಸ್ತರಿಸಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಸವಾರರ ಹಿಂದೇಟಿನ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಾಸ್ತವವಾಗಿ, ರಾಜ್ಯದಲ್ಲಿ 2019ರ ಏಪ್ರಿಲ್ 01ಕ್ಕೂ ಮುನ್ನ ನೋಂದಣಿ ಮಾಡಿಕೊಂಡ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 2ಕೋಟಿಗೂ ಹೆಚ್ಚು ಅಂತಹ ವಾಹನಗಳಿವೆ. ಅದರಲ್ಲಿ, ಶೇ 70ರಷ್ಟು ದ್ವಿಚಕ್ರ ವಾಹನಗಳು,20% ನಷ್ಟು ಲಘು ವಾಹಗಳು 10% ನಷ್ಟು ಸಾರಿಗೆ ವಾಹನಗಳು ಇವೆ.
19% ವಾಹನಗಳಿಗಷ್ಟೇ ಎಚ್ಎಸ್ಆರ್ಪಿ ಅಳವಡಿಕೆ:
ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಎಚ್ಎಸ್ಆರ್ಪಿ (HSRP) ಕಡ್ಡಾಯಗೊಳಿಸಿದ ಬಳಿಕ ಈವರೆಗೂ ಕೇವಲ 38 ಲಕ್ಷ ವಾಹನಗಳಿಗಷ್ಟೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ ಶೇ. 81ರಷ್ಟು ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕಿದೆ.
ಇದನ್ನೂ ಓದಿ- Railway Station Shop Tender: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು?
ಏನಿದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್:
ಎಚ್ಎಸ್ಆರ್ಪಿ ಎಂಬುದು ವಾಹನ ನೋಂದಣಿ ಫಲಕಗಳಿಗೆ (Vehicle registration plate) ಭಾರತ ಸರ್ಕಾರವು ನಿಗದಿಪಡಿಸಿರುವ ಮಾನದಂಡವಾಗಿದೆ. ಎಚ್ಎಸ್ಆರ್ಪಿ ಸಂಖ್ಯೆಯೂ ಅಂತರಾಷ್ಟ್ರೀಯ ನೋಂದಣಿ ಕೋಡ್ ಮತ್ತು ಲೇಸರ್-ಕೆಚ್ಚಲಾದ ಅನನ್ಯ ಸರಣಿ ಸಂಖ್ಯೆಯಂತಹ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ನಾಮಫಲಕಗಳನ್ನು ಟ್ಯಾಂಪರಿಂಗ್ ಮಾಡುವುದು ಅಸಾಧ್ಯವಾಗಿದ್ದು, ಪೊಲೀಸರಿಗೂ ಈ ಫಲಕಗಳನ್ನು ಗುರುತಿಸುವುದು ಸುಲಭವಾಗಿದೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಭಾರತೀಯ ಆಟೋಮೊಬೈಲ್ ಉದ್ಯಮವನ್ನು ಪ್ರತಿನಿಧಿಸುವ ಅತ್ಯುನ್ನತ ರಾಷ್ಟ್ರೀಯ ಸಂಸ್ಥೆಯಾಗಿರುವ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ನ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆಯಬಹುದು. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆಯಲು ಇದು ಏಕೈಕ ಮಾರ್ಗವಾಗಿದೆ.
ಇದನ್ನೂ ಓದಿ- ಬದಲಾಗಿದೆ EPFO ನಿಯಮ : ಖಾತೆದಾರನ ಮರಣದ ನಂತರ ಆಧಾರ್ ಇಲ್ಲದಿದ್ದರೂ ಹಣ ಪಡೆಯಬಹುದು ನಾಮಿನಿ
ಅಗತ್ಯ ದಾಖಲೆಗಳು:
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗೆ ಅರ್ಜಿ ಸಲ್ಲಿಸಲು, ನಿಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯಂತಹ ವಿವರಗಳ ಅಗತ್ಯವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.