ಮೇ ತಿಂಗಳಲ್ಲಿ 14 ಬ್ಯಾಂಕ್ ರಜೆ ! ರಜಾದಿನಗಳ ಪೂರ್ಣ ಪಟ್ಟಿ ಇಲ್ಲಿದೆ
Bank Holidays May 2023: ಈ ತಿಂಗಳ ಮೊದಲ ದಿನದಿಂದಲೇ ಬ್ಯಾಂಕ್ ರಜೆ ಆರಂಭವಾಗಿದೆ. ಈ ತಿಂಗಳಲ್ಲಿ ಬ್ಯಾಂಕ್ ಒಟ್ಟು 14 ದಿನಗಳವರೆಗೆ ಮುಚ್ಚಿರಲಿದೆ.
Bank Holidays May 2023 : ಮೇ ತಿಂಗಳು ಪ್ರಾರಂಭವಾಗಿದೆ. ಈ ತಿಂಗಳ ಮೊದಲ ದಿನವೇ ಬ್ಯಾಂಕ್ ರಜೆ. ಪ್ರತಿ ತಿಂಗಳಂತೆ ಈ ಬಾರಿಯೂ ಬ್ಯಾಂಕ್‌ಗಳಿಗೆ ಭರ್ಜರಿ ರಜೆ ಇರಲಿದೆ. ಈ ತಿಂಗಳಲ್ಲಿ 14 ದಿನಗಳ ಕಾಲ ವಿವಿಧ ಪ್ರದೇಶಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಈ ಬಾರಿ ಮೇ 1ರಿಂದಲೇ ಬ್ಯಾಂಕ್ ರಜೆ ಆರಂಭವಾಗಿದೆ. ಕಾರ್ಮಿಕರ ದಿಂದ ಅಂಗವಾಗಿ ಮೇ 1 ರಂದು ಬ್ಯಾಂಕ್‌ಗಳಿಗೆ ರಜೆ. ಈ ತಿಂಗಳು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳಿದ್ದರೆ, ರಜಾ ದಿನಗಳ ಪಟ್ಟಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲವಾದರೆ ಹೋದ ಕೆಲಸ ಆಗದೆ ಸುಮ್ಮನೆ ವಾಪಾಸಾಗಬೇಕಾದೀತು.
ರಾಜ್ಯಗಳು ಮತ್ತು ನಗರಗಳಿಗನುಗುಣವಾಗಿ ಬ್ಯಾಂಕ್ ರಜಾದಿನಗಳು :
ಮೇ ದಿನದ ಕಾರಣ ಬ್ಯಾಂಕ್‌ಗಳಿಗೆ ಮೇ 1 ರಂದು ರಜೆ ಇದೆ. ಇದರ ಹೊರತಾಗಿ ಬುದ್ಧ ಪೂರ್ಣಿಮೆ, ರವೀಂದ್ರನಾಥ ಠಾಗೋರ್ ಜನ್ಮದಿನ, ಸಿಕ್ಕಿಂ ಸಂಸ್ಥಾಪನಾ ದಿನ ಮತ್ತು ಮಹಾರಾಣಾ ಪ್ರತಾಪ್ ಜಯಂತಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ. ದೇಶದ ವಿವಿಧ ರಾಜ್ಯಗಳು ಮತ್ತು ನಗರಗಳ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ಭಿನ್ನವಾಗಿರುತ್ತವೆ.
ಇದನ್ನೂ ಓದಿ : Business Idea: ಈ ಬಿಸ್ನೆಸ್ ಆರಂಭಿಸಿದರೆ ಹಣದ ಸುರಿಮಳೆಯಾಗುತ್ತದೆ, ಸರ್ಕಾರ ನೀಡುತ್ತೇ 7.35 ಲಕ್ಷ!
ಬ್ಯಾಂಕ್ ಆನ್‌ಲೈನ್ ಸೇವೆಗಳು ಮುಂದುವರಿಯುತ್ತದೆ :
ಬ್ಯಾಂಕ್ ರಜಾದಿನಗಳಲ್ಲಿ ಬ್ಯಾಂಕ್ ನ ಎಲ್ಲಾ ರೀತಿಯ ಕೆಲಸಗಳಿಗೆ ಸಂಪೂರ್ಣವಾಗಿ ಅಡ್ಡಿಯಾಗುವುದಿಲ್ಲ. ಈ ಸಮಯದಲ್ಲಿ, ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ತಮ್ಮ ಪ್ರಮುಖ ಕೆಲಸವನ್ನು ಮಾಡಬಹುದಾಗಿದೆ. ಯಾವುದೇ ಕೆಲಸಕ್ಕಾಗಿ ಬ್ಯಾಂಕ್‌ಗೆ ಹೋಗಬೇಕಾದರೆ, ಮೊದಲು ರಜೆಯ ಲಿಸ್ಟ್ ನೋಡಿಕೊಂಡು ನಂತರ ಹೋಗುವುದು ಸೂಕ್ತ. ಇಲ್ಲವಾದರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಹುದು. ಈ ಸೇವೆಯು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ರಾಜ್ಯಗಳು ಮತ್ತು ರಾಜ್ಯಕ್ಕೆ ಸಂಬಂಧ ಪಟ್ಟ ವಿಶೇಷ ದಿನಗಳು, ಹಬ್ಬ ಹರಿದಿನಗಳು ಮುಂತಾದ ಘಟನೆಗಳ ಆಧಾರದ ಮೇಲೆ ಆರ್‌ಬಿಐ ಬ್ಯಾಂಕ್ ರಜೆ ಪಟ್ಟಿಯನ್ನು ಸಿದ್ಧಪಡಿಸಿದೆ. ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು RBI ವೆಬ್‌ಸೈಟ್‌ನಲ್ಲಿ ನೋಡಬಹುದು.
ಇದನ್ನೂ ಓದಿ : Business Idea: ಈ ಉದ್ಯಮ ಪ್ರಾರಂಭಿಸುವ ಮೂಲಕ ನೀವು ಶ್ರೀಮಂತರಾಗುತ್ತೀರಿ!
ಮೇ 2023 ರಲ್ಲಿ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ :
1 ಮೇ (ಸೋಮವಾರ) - ಮಹಾರಾಷ್ಟ್ರ ದಿನ / ಮೇ ದಿನ: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಬಂಗಾಳ, ಗೋವಾ ಮತ್ತು ಬಿಹಾರದಲ್ಲಿ ಬ್ಯಾಂಕ್ ರಜೆ.
ಮೇ 2: ಮಂಗಳವಾರ - ಶಿಮ್ಲಾ ಮುನ್ಸಿಪಲ್ ಚುನಾವಣೆ,
ಮೇ 4: ಯುಪಿಯಲ್ಲಿ ಪುರಸಭೆ ಚುನಾವಣೆಯ ಮೊದಲ ಹಂತ.
ಮೇ 5 (ಶುಕ್ರವಾರ) - ಬುದ್ಧ ಪೂರ್ಣಿಮಾ: ತ್ರಿಪುರಾ, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಚಂಡೀಗಢ, ಉತ್ತರಾಖಂಡ, ಜಮ್ಮು, ಉತ್ತರ ಪ್ರದೇಶ, ಬಂಗಾಳ, ನವದೆಹಲಿ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ.
ಮೇ 7: ಭಾನುವಾರದ ಕಾರಣ ಬ್ಯಾಂಕ್ ರಜೆ.
ಮೇ 9 (ಮಂಗಳವಾರ) - ರವೀಂದ್ರನಾಥ ಟ್ಯಾಗೋರ್ ಜನ್ಮದಿನ: ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ.
ಮೇ 11 - ಯುಪಿಯಲ್ಲಿ ಪುರಸಭೆ ಚುನಾವಣೆಯ ಎರಡನೇ ಹಂತ.
ಮೇ 13: ತಿಂಗಳ ಎರಡನೇ ಶನಿವಾರದ ಕಾರಣ ವಾರದ ರಜೆ.
ಮೇ 14: ಭಾನುವಾರದ ಕಾರಣ ಬ್ಯಾಂಕ್ ರಜೆ.
16 ಮೇ (ಮಂಗಳವಾರ) - ಸಿಕ್ಕಿಂ ರಾಜ್ಯ ದಿನ
ಮೇ 21: ಭಾನುವಾರದ ಕಾರಣ ಬ್ಯಾಂಕ್ ರಜೆ.
22 ಮೇ (ಸೋಮವಾರ) - ಮಹಾರಾಣಾ ಪ್ರತಾಪ್ ಜಯಂತಿ ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ .
ಮೇ 27: ತಿಂಗಳ ನಾಲ್ಕನೇ ಶನಿವಾರದ ಕಾರಣ ವಾರದ ರಜೆ.
ಮೇ 28: ಭಾನುವಾರದ ಕಾರಣ ಬ್ಯಾಂಕ್ ರಜೆ.
ಇದನ್ನೂ ಓದಿ : Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ