ಸೆಪ್ಟೆಂಬರ್ ತಿಂಗಳಲ್ಲಿ 16 ದಿನ ಬ್ಯಾಂಕ್ ಕ್ಲೋಸ್..! ರಾಜ್ಯವಾರು ರಜೆ ಪಟ್ಟಿ ಇಲ್ಲಿದೆ
September bank holidays 2023 : ಸೆಪ್ಟೆಂಬರ್ ತಿಂಗಳಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬರುವ ಬ್ಯಾಂಕ್ ರಜೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ...
Bank holidays in September 2023 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದು ಸ್ಥಳೀಯ ಹಾಗೂ ರಾಷ್ಟ್ರೀಯ ರಜಾದಿನಗಳಿನ್ನು ಒಳಗೊಂಡಿದೆ. ಜನರು ರಜಾದಿನಗಳ ಬಗ್ಗೆ ಗಮನ ಹರಿಸಬೇಕು. ಅದಕ್ಕೂ ಮುನ್ನ ಬ್ಯಾಂಕ್‌ಗೆ ತೆರಳಿ ತಮ್ಮ ವ್ಯವಹಾರ ಮುಗಿಸಿಕೊಳ್ಳುವುದು ಉತ್ತಮ.
ರಜಾ ದಿನಗಳಲ್ಲಿಯೂ ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಬಹುದು. ಡೆಬಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಬಹುದು. ಸೆಪ್ಟೆಂಬರ್ ತಿಂಗಳಲ್ಲಿ ಬರುವ ಬ್ಯಾಂಕ್ ರಜೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ...
ಇದನ್ನೂ ಓದಿ : ಭಾರತೀಯ ರೈಲ್ವೆಯ ಪ್ರಮುಖ ಅಪ್‌ಡೇಟ್ : ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಈ ಅಂಶಗಳು ನೆನಪಿರಲೇಬೇಕು !
ಸೆಪ್ಟೆಂಬರ್ 3, 2023: ಭಾನುವಾರ- ಭಾರತದಾದ್ಯಂತ
ಸೆಪ್ಟೆಂಬರ್ 6, 2023: ಶ್ರೀ ಕೃಷ್ಣ ಜನ್ಮಾಷ್ಟಮಿ- ಭುವನೇಶ್ವರ, ಚೆನ್ನೈ, ಹೈದರಾಬಾದ್ - ಆಂಧ್ರ ಪ್ರದೇಶ, ಪಾಟ್ನಾ
ಸೆಪ್ಟೆಂಬರ್ 7, 2023: ಜನ್ಮಾಷ್ಟಮಿ (ಶ್ರಾವಣ Vd- 8) ಮತ್ತು ಶ್ರೀ ಕೃಷ್ಣ ಅಷ್ಟಮಿ- ಅಹಮದಾಬಾದ್, ಚಂಡೀಗಢ, ಗ್ಯಾಂಗ್ಟಾಕ್, ಹೈದರಾಬಾದ್ - ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ
ಸೆಪ್ಟೆಂಬರ್ 9, 2023 : ಎರಡನೇ ಶನಿವಾರ- ಭಾರತದಾದ್ಯಂತ
ಸೆಪ್ಟೆಂಬರ್ 10, 2023 : ಭಾನುವಾರ- ಭಾರತದಾದ್ಯಂತ
ಸೆಪ್ಟೆಂಬರ್ 17, 2023 : ಭಾನುವಾರ- ಭಾರತದಾದ್ಯಂತ
ಸೆಪ್ಟೆಂಬರ್ 18, 2023 : ವರ್ಷಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ- ಬೆಂಗಳೂರು, ಹೈದರಾಬಾದ್ - ತೆಲಂಗಾಣ
ಸೆಪ್ಟೆಂಬರ್ 19, 2023 : ಗಣೇಶ ಚತುರ್ಥಿ- ಅಹಮದಾಬಾದ್, ಬೇಲಾಪುರ್, ಭುವನೇಶ್ವರ, ನಾಗ್ಪುರ, ಮುಂಬೈ, ಪಣಜಿ
ಸೆಪ್ಟೆಂಬರ್ 20, 2023 : ಗಣೇಶ ಚತುರ್ಥಿ (2ನೇ ದಿನ) ಮತ್ತು ನುವಾಖೈ (ಒಡಿಶಾ)- ಭುವನೇಶ್ವರ್ ಮತ್ತು ಪಣಜಿ
ಸೆಪ್ಟೆಂಬರ್ 22, 2023 : ಶ್ರೀ ನಾರಾಯಣ ಗುರು ಸಮಾಧಿ ದಿನ- ಕೊಚ್ಚಿ ಮತ್ತು ತಿರುವನಂತಪುರಂ
ಸೆಪ್ಟೆಂಬರ್ 23, 2023 : ನಾಲ್ಕನೇ ಶನಿವಾರ ಮತ್ತು ಮಹಾರಾಜ ಹರಿ ಸಿಂಗ್ ಅವರ ಜನ್ಮದಿನ (ಜಮ್ಮು ಮತ್ತು ಕಾಶ್ಮೀರ)- ಭಾರತದಾದ್ಯಂತ
ಸೆಪ್ಟೆಂಬರ್ 24, 2023 : ಭಾನುವಾರ- ಭಾರತದಾದ್ಯಂತ
ಸೆಪ್ಟೆಂಬರ್ 25, 2023 : ಶ್ರೀಮಂತ ಶಂಕರದೇವರ ಜನ್ಮದಿನ - ಗುವಾಹಟಿ
ಸೆಪ್ಟೆಂಬರ್ 27, 2023 : ಮಿಲಾದ್-ಎ-ಶೆರೀಫ್ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ)- ಜಮ್ಮು, ಶ್ರೀನಗರ, ಕೊಚ್ಚಿ ಮತ್ತು ತಿರುವನಂತಪುರಂ
ಸೆಪ್ಟೆಂಬರ್ 28, 2023 : ಈದ್-ಎ-ಮಿಲಾದ್ ಅಥವಾ ಈದ್-ಎ-ಮಿಲಾದುನ್ನಬಿ (ಬಾರಾ ವಫತ್)- ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್ - ತೆಲಂಗಾಣ, ಇಂಫಾಲ್, ಕಾನ್ಪುರ್, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಚಿ, ರಾಯ್ಪುರ್
ಸೆಪ್ಟೆಂಬರ್ 29, 2023: ಇಂದ್ರಜಾತ್ರಾ ಮತ್ತು ಶುಕ್ರವಾರ ಈದ್-ಎ-ಮಿಲಾದ್-ಉಲ್-ನಬಿ (ಜಮ್ಮು ಮತ್ತು ಕಾಶ್ಮೀರ) ನಂತರ- ಗ್ಯಾಂಗ್ಟಾಕ್, ಜಮ್ಮು ಮತ್ತು ಶ್ರೀನಗರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.