ಬೆಂಗಳೂರು : ಮಕ್ಕಳಿಗಾಗಿ ‘ಆಸ್ತಿ’ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳು ಮನೆಯ ನಂದಾದೀಪ, ಮನೆ-ಮನ ಬೆಳಗುವ ಹೊಂಬೆಳಕು. ದೈನಂದಿನ ಬದುಕಿನ ನೋವು, ಸಂಕಟ ಮತ್ತು ದುಃಖಗಳನ್ನು ಮಣಿಸಿ ಸಾಮೀಪ್ಯದ ಪ್ರತಿಕ್ಷಣಗಳನ್ನು ಉಲ್ಲಾಸಮಯವಾಗಿಸಿ ಸಂತಸದ ಸವಿಭಾವ ಮೂಡಿಸುವ ಚೇತನ ಮಕ್ಕಳೆಂಬುದು ಅನುಭವದ ನುಡಿ, ನಿಜವಾದ ಮಾತು, ಮಕ್ಕಳ ನಗು, ಮುಗ್ಧ ನಡವಳಿಕೆ ಸೂಜಿಗಲ್ಲಿನಂತೆ, ಸರ್ವರನ್ನು ಸೆಳೆಯಬಲ್ಲುದ್ದು.
ಮಕ್ಕಳ ಲಾಲನೆ - ಪಾಲನೆ - ಪೋಷಣೆ ನೀಡುವಷ್ಟು ಮುದ ಮತ್ಯಾವುದರಿಂದಲೂ ಅಸಾಧ್ಯ. ಮಕ್ಕಳಿದ್ದರೆ ನಗು, ಸಡಗರ, ಜೀವಂತಿಕೆ ಕಟ್ಟಿಟ್ಟ ಬುತ್ತಿ, ಕಪಟ, ಸುಳ್ಳು, ತಟವಟಗಳಿರಯದ ಮಕ್ಕಳು ದೈವಸ್ವರೂಪಿ,
ಸಮಭಾವ-ಸಮಾನತೆ ಮಕ್ಕಳ ಮೂಲ ಗುಣ. ಪ್ರೇಮ-ಕಾಮದ ಬಗ್ಗೆ ಏನೊಂದೂ ಅರಿಯದ ಮುಗ್ಧ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಕ್ಕಳ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊAಡು ವಿವಿಧ ಬಗೆಯ ಆಸೆಗಳನ್ನು ತೋರಿಸಿ ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸಬೇಕಾದ ವಿಚಾರ. ಎಲ್ಲೋ ಒಂದೆಡೆ ಮಾತ್ರ ಕಂಡು ಬರುತ್ತಿದ್ದ ಇಂತಹ ಘಟನೆಗಳು ಇಂದು ಎಲ್ಲೆಡೆ ಹರವಿಕೊಂಡಿರುವುದು ಅಪಾಯದ ಮುನ್ಸೂಚನೆ. ಆತಂಕದ ವಿಚಾರ.
ಇದನ್ನೂ ಓದಿ:ಇ ಖಾತಾ ವ್ಯವಸ್ಥೆ ಸರಳೀಕರಣ ಅಗತ್ಯ, ಸರ್ಕಾರ ಕೂಡಲೇ ಕ್ರಮ ವಹಿಸಲಿ : ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಮಕ್ಕಳಿಗಾಗಿ ‘ಆಸ್ತಿ’ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳು ಮನೆಯ ನಂದಾದೀಪ, ಮನೆ-ಮನ ಬೆಳಗುವ ಹೊಂಬೆಳಕು. ದೈನಂದಿನ ಬದುಕಿನ ನೋವು, ಸಂಕಟ ಮತು ್ತ ದುಃಖಗಳನ್ನು ಮಣಿಸಿ ಸಾಮೀಪ್ಯದ ಪ್ರತಿಕ್ಷಣಗಳನ್ನು ಉಲ್ಲಾಸಮಯವಾಗಿಸಿ ಸಂತಸದ ಸವಿಭಾವ ಮೂಡಿಸುವ ಚೇತನ ಮಕ್ಕಳೆಂಬುದು ಅನುಭವದ ನುಡಿ, ನಿಜವಾದ ಮಾತು, ಮಕ್ಕಳ ನಗು, ಮುಗ್ಧ ನಡವಳಿಕೆ
ಸೂಜಿಗಲ್ಲಿನಂತೆ, ಸರ್ವರನ್ನು ಸೆಳೆಯಬಲ್ಲುದ್ದು. ಮಕ್ಕಳ ಲಾಲನೆ - ಪಾಲನೆ - ಪೋಷಣೆ ನೀಡುವಷು ್ಟ ಮುದ ಮತ್ಯಾವುದರಿಂದಲೂ ಅಸಾಧ್ಯ.
ಮಕ್ಕಳಿದ್ದರೆ ನಗು, ಸಡಗರ, ಜೀವಂತಿಕೆ ಕಟ್ಟಿಟ್ಟ ಬುತ್ತಿ, ಕಪಟ, ಸುಳ್ಳು, ತಟವಟಗಳಿರಯದ ಮಕ್ಕಳು ದೈವಸ್ವರೂಪಿ, ಸಮಭಾವ-ಸಮಾನತೆ ಮಕ್ಕಳ ಮೂಲ ಗುಣ. ಪ್ರೇಮ-ಕಾಮದ ಬಗ್ಗೆ ಏನೊಂದೂ ಅರಿಯದ ಮುಗ್ಧ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಕ್ಕಳ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡು ವಿವಿಧ ಬಗೆಯ ಆಸೆಗಳನ್ನು ತೋರಿಸಿ ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸಬೇಕಾದ ವಿಚಾರ. ಎಲ್ಲೋ ಒಂದೆಡೆ ಮಾತ್ರ ಕಂಡು ಬರುತ್ತಿದ್ದ ಇಂತಹ ಘಟನೆಗಳು ಇಂದು ಎಲ್ಲೆಡೆ ಹರವಿಕೊಂಡಿರುವುದು ಅಪಾಯದ ಮುನ್ಸೂಚನೆ. ಆತಂಕದ ವಿಚಾರ.
ಮಕ್ಕಳ ಮುಗ್ಧತೆಯ ದುರುಪಯೋಗ ಮಾಡಿಕೊಳ್ಳುವ ಕೃತ್ಯಕ್ಕೆ ದಿನಕ್ಕೊಂದು ಹೊಸ ಮಾರ್ಗಗಳು ತೆರೆದುಕೊಳ್ಳುವುದು ನಿಜ. ಆ ದುರಾತ್ಮರು ಎಲ್ಲೋ ದೂರದಲ್ಲಿಲ್ಲ. ನಮ್ಮೆಲ್ಲರ ನಡುವೆಯೇ ಮುಖವಾಡ ಹೊತ್ತು ಬದುಕುತ್ತಿದ್ದು, ನಿತ್ಯ ನಮ್ಮೊಂದಿಗೆ ವ್ಯವಹರಿಸುತ್ತಿರುತ್ತಾರೆ. ಸೂಕ್ಷö್ಮತೆಯ ಕೊರತೆಯೋ? ಸಂವೇದನಾಶೀಲತೆಯ ಅಭಾವವೋ? ಬದುಕಿನ ಧಾವಂತವೋ? ಒಟ್ಟಿನಲ್ಲಿ ಆ ದುರ್ಮಾರ್ಗಿಗಳನ್ನು ಗುರುತಿಸುವುದಿಲ್ಲ,
ಗುರುತಿಸಿದರೂ ಗದರಿಸುವಲ್ಲಿ ಸಮಾಜ ಮತ್ತು ನಾಗರೀಕರು ವಿಫಲರಾಗುತ್ತಿರುವುದು ಕಟು ವಾಸ್ತವ. ಮಕ್ಕಳ ಮನ ಮಂದಿರವನ್ನು ಹಾಳುಗೆಡುವಿ ತನ್ಮೂಲಕ ಭವಿಷ್ಯದ ಸಮಾಜವನ್ನು ಅನಾರೋಗ್ಯಪೀಡತ, ಅನಾಗರೀಕಗೊಳಿಸುವ ಇಂತಹ ಕೃತ್ಯಗಳಿಗೆ ಇನ್ನಾದರೂ ಕಡಿವಾಣ ಬೀಳಬೇಕು. ಪೋಷಕರು ಮತ್ತು ನಾಗರೀಕರಾದಿಯಾಗಿ ಸರ್ವರೂ ಮಕ್ಕಳ ಮುಗ್ಧ ಲೋಕಕ್ಕೆ ಕಲ್ಲು ಹಾಕುವವರ ವಿರುದ್ಧ ಕಟ್ಟೆಚ್ಚರವಾಗಿರಬೇಕು.
ಮಕ್ಕಳನ್ನು ಮಕ್ಕಳಂತೆ, ಕಲ್ಪನಾ-ಭಾವನಾ ಲೋಕದೊಳಗಿನ ವಿಹಾರಿಗಳಂತೆಯೇ ಇರಲು ಬಿಡಬೇಕು. ಆಗ ಮಾತ್ರ ಮಕ್ಕಳ ಮುಗ್ಧತೆಯ ದುರ್ಬಳಕೆಗೆ ಇತಿಶ್ರೀ ಹಾಡಲು ಸಾಧ್ಯ. ಇಲ್ಲವಾದಲಿ ್ಲ ಮಕ್ಕಳ ಬದುಕು ಮಾತ್ರವಲ್ಲ ಸಮಾಜದ ಭವಿಷ್ಯವೂ ಮಣ್ಣುಪಾಲಾಗುವುದು ನಿಶ್ಚಿತ.
ಇದನ್ನೂ ಓದಿ:ಇ ಖಾತಾ ವ್ಯವಸ್ಥೆ ಸರಳೀಕರಣ ಅಗತ್ಯ, ಸರ್ಕಾರ ಕೂಡಲೇ ಕ್ರಮ ವಹಿಸಲಿ : ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಪ್ಪಅಮ್ಮ, ಹೀಗೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಕೂಡಿ ಬಾಳಿದರೆ ಸ್ವರ್ಗಸುಖ ಎಂದು ನಂಬಿದ್ದರು. ಅಂತಹ ಕುಟುಂಬಗಳಲ್ಲಿ ಯಾರ ಮಕ್ಕಳು ತಪ್ಪು ಮಾಡಿದರೂ ಯಾರಾದರೊಬ್ಬರು ತಿಳಿ ಹೇಳುತ್ತಿದ್ದರು, ತಿದ್ದುತ್ತಿದ್ದರು. ಅಜ್ಜ-ಅಜ್ಜಿಯರು ತಮ್ಮ ಅನುಭವಗಳನ್ನು ಪುರಾಣದ ಕಥೆಗಳನ್ನೋ ಹೇಳುತ್ತಾ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾ ಅವರಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮನುಷ್ಯ ನವ ನಾಗರೀಕತೆಗೆ ಒಳಗಾದಂತೆಲ್ಲ ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರು ಹೋಗಿದ್ದಾನೆ. ಅದರ ಪರಿಣಾಮವಾಗಿ ಅವಿಭಕ್ತ ಕುಟುಂಬಗಳೆಲ್ಲ ಛಿದ್ರ ಛಿದ್ರವಾಗಿವೆ. ದಾರಿ ತಪ್ಪುವ ಮಕ್ಕಳನ್ನು ತಡೆಯುವವರಿಲ್ಲ, ದಂಪತಿಗಳಿಬ್ಬರೂ ನೌಕರಿ ಹಿಡಿಯುತ್ತಾರೆ. ಮಾರ್ಗದರ್ಶನ ಮಾಡಲು ಮನೆಯಲ್ಲಿ ಹಿರಿಯರೂ ಇಲ್ಲ. ತಪ್ಪು ಮಾಡಿದ್ದನ್ನು ಕೇಳುವವರೂ ಇಲ್ಲ ಎನ್ನುವಂತಾಗಿದೆ. ಮನೆಯೇ ಮೊದಲ ಪಾಠಶಾಲೆ ಎಂದರೆ ಅಲ್ಲಿಯೂ
ತಿದ್ದುವವರಿಲ್ಲ. ಶಾಲೆಗಳಲ್ಲಿಯೂ ಸ್ಥಿತಿ ಭಿನ್ನವಾಗಿಲ್ಲ ಎಂದ ಮೇಲೆ ಮಕ್ಕಳಲ್ಲಿ ಸನ್ನಡತೆ ಯನ್ನು ಬೆಳಸುವವರು ಯಾರು? ವ್ಯಕ್ತಿತ್ವವನ್ನು ರೂಪಿಸುವವರು ಯಾರು. ಮಕ್ಕಳು ಶಿಕ್ಷಕರ ನಡುವಿನ ಸಂಬAಧ ಹೇಗಿರಬೇಕು ಎನ್ನುವುದರ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಬಹುತೇಕ ಅಧ್ಯಯನಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿವೆ. ಅದೆಂದರೆ ‘ವಿದ್ಯಾರ್ಥಿ ಮತು ್ತ ಶಿಕ್ಷಕರ ನಡುವಿನ ಪ್ರಬಲ ಭಾವನಾತ್ಮಕ ಸಂಬAಧವು ಮನೆಯಿಂದ ಹೊರಗಿರುವ ಮತ್ತೊಂದು ಮನೆಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ. ಮಕ್ಕಳ ಏಳಿಗೆಯ ಕುರಿತ ಶಿಕ್ಷಕರ ಸಮರ್ಪಣಾಭಾವವು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ನಡವಳಿಕೆಯ ತಳಹದಿಯಲ್ಲಿ ಶಾಲೆಯ ಅವಶ್ಯಕತೆಯನ್ನು ಪೂರೈಸುವ ಮಟ್ಟಕ್ಕೆ ಬೆಳೆಯಲು ನೆರವು ನೀಡುತ್ತದೆ.
ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಕಾರಾತ್ಮಕ ಸಂಬAಧ, ಕಲಿಕೆಯ ವೈಫಲ್ಯದಿಂದ ಮಕ್ಕಳನ್ನು ಪಾರು ಮಾಡುತ್ತದೆ. ಅದೇ ರೀತಿ, ಸಂಬAಧ ಚೆನ್ನಾಗಿಲ್ಲದಿದ್ದರೆ ಮಗು ಎಲ್ಲಾ ವಿಧದಲ್ಲೂ ವೈಫಲ್ಯ ಅನುಭವಿಸಬೇಕಾಗುತ್ತದೆ. ಲಿಂಗ ಸೇರಿದಂತೆ ಹಲವಾರು ಅಂಶಗಳು ಈ ಸಂಬAಧದಿAದ ಪ್ರೇರಿತವಾಗಿರುತ್ತದೆ. ಜೊತೆಗೆ ಶಿಕ್ಷಣ ಮತು ್ತ ನಡವಳಿಕೆಯಲ್ಲೂ ಸುಧಾರಣೆಗೆ ಉತ್ತಮ ಸಂಬAಧ ಹಾದಿ ಮಾಡಿಕೊಡುತ್ತದೆ. ಮಕ್ಕಳು-ಶಿಕ್ಷಕರ ನಡುವಿನ ಸಂಬಂಧ ಭವಿಷ್ಯದಲ್ಲಿ ಮಗುವಿನ ವೈಯಕ್ತಿಕ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಸಂಬAಧದಿAದಲೇ ಮಗು ಜಗತ್ತನ್ನು ಸುತ್ತಲಿನ ಪರಿಸರವನ್ನು ಅರಿಯಲು ಆರಂಭಿಸುತ್ತದೆ. ಈ ಮೂಲಕ ಸಂವಹನ ಕೌಶಲ್ಯ ಬೆಳೆಯುತ್ತದೆ. ಸಂಬAಧ ಚೆನ್ನಾಗಿದ್ದರೆ ಶಾಲೆಗೆ ಹೋಗುವುದು ಗೋಳು ಎಂದೆನಿಸದೆ ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಹೀಗಾಗಿ ಕಲಿಕೆ ಮತ್ತು ಕಲಿಸುವಿಕೆ ಎರಡೂ ಕೂಡ ಈ ಸಂಬAಧದ ಮೇಲೆ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ:ಇ ಖಾತಾ ವ್ಯವಸ್ಥೆ ಸರಳೀಕರಣ ಅಗತ್ಯ, ಸರ್ಕಾರ ಕೂಡಲೇ ಕ್ರಮ ವಹಿಸಲಿ : ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಗಾಂಧೀಜಿಯವರ ಪ್ರಕಾರ ವಿದ್ಯೆಯೆಂದರೆ, ‘ಮಾನವೀಯತೆಯ ಗಳಿಕೆಯೇ ವಿದ್ಯೆಯ ಗುರಿ. ಸತ್ಯ, ಧರ್ಮದಿಂದ ನಡೆದುಕೊAಡು ಮನಃಶುದ್ಧಿ, ಕ್ರಿಯಾಶುದ್ಧಿ ಉಳಿಸುವುದು ವಿದ್ಯೆಯ ಫಲವಾಗಿರಬೇಕು. ನಾವು ಕಲಿತ ವಿದ್ಯೆಯಿಂದ ಜೀವನ ಸರಿಯಾಗಿ ನಿರ್ವಹಿಸಲು ಬೇಕಾದ ಚಿಂತನೆಗಳು ಹೊಳೆಯುವಂತಿರಬೇಕು. ಬದುಕಿನಲ್ಲಿ ಸೃಜನಶೀಲತೆ ಮಾಡುವಂತಿರಬೇಕು ಒಳಿತು, ಕೆಡಕುಗಳ ಬಗ್ಗೆ ಅರಿವು ವಿದ್ಯೆಯಿಂದ ದೂರಕಬೇಕು. ಪಡೆದ ವಿದ್ಯೆಯು ನಿಮ್ಮಲ್ಲಿ ಸದಾಚಾರ, ನ್ಯಾಯಪರತೆ, ಸಾಮಾಜಿಕ ಹೊಂದಾಣಿಕೆ, ಸ್ನೇಹ, ಕರುಣೆ ಮುಂತಾದ ಮೌಲ್ಯಗಳನ್ನು ವರ್ಧಿಸಿ. ರಾಷ್ಟçದ ಸರ್ವಾಂಗೀಣ ಉನ್ನತಿಗೆ ಅನುಕೂಲವಾಗುವಂತಿರಬೇಕು. ನಿಜವಾದ ವಿದ್ಯೆ ಮಾನವನ ವ್ಯಕ್ತಿತ್ವವನ್ನು ವಿಕಸಿತಗೊಳಿಸುವಂತಿರಬೇಕು. ಅನ್ಯಾಯ, ಮೋಸ, ವಂಚನೆ ಇತ್ಯಾದಿ ವೈರಗುಣಗಳನ್ನು ಮೆಟ್ಟಿ ಬಾಳ್ವೆ ಮಾಡುವಂತಿರಬೇಕು.
ಇತ್ತೀಚಿಗೆ ಪ್ರತಿ ದಿನವೂ ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ಅನೀತಿ, ಅನೈತಿಕ ಹಾಗೂ ಅನಾಚಾರಗಳ ಸುದ್ಧಿಗಳಿಂದಾಗಿ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಕೃತ್ಯಗಳಿಂದಾಗಿ. ಸತ್ಯ, ಅಹಿಂಸೆ, ದಯೆ, ಕರುಣೆ, ಭಕ್ತಿ, ವಿನಯ, ಪ್ರೀತಿ, ಭ್ರಾತೃತ್ವ, ವಿಶ್ವಾಸಕ್ಕೆ ಹೆಸರಾಗಿ ಸುಸಂಸ್ಕೃತರೆAದು ಹೆಮ್ಮೆಯಿಂದ ಬೀಗುತ್ತಿದ್ದ ನಾಡಿನ ಸಂಸ್ಕೃತಿಗೆ ಕಳಂಕ ತಗುಲಿದೆ. ಇದು ನವನಾಗರೀಕತೆಯ ಬೆನ್ನು ಹತ್ತಿ ಆಧುನಿಕನೆಂದು ಬೀಗುತ್ತಿರುವ ಮನುಷ್ಯ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಸುಶಿಕ್ಷಿತರೆನಿಸಿಕೊಂಡವರಿಂದಲೇ ಇದೆಲ್ಲಾ ನಡೆಯುತ್ತಿರುವುದು ನಮ್ಮ ಭವ್ಯ ಸಂಸ್ಕೃತಿಯ ಮೇಲಾಗುತ್ತಿರುವ ಘೋರ ಅನ್ಯಾಯ. ಅದರಲ್ಲೂ ಇತ್ತೀಚಿಗೆ ಇಡೀ ಸಮಾಜದಲ್ಲಿ ಅಶ್ಲೀಲತೆ, ಅನೈತಿಕತೆ, ಅತ್ಯಾಚಾರ ಹಾಗೂ ಅನಾಚಾರಗಳು ನಡೆಯುತ್ತಿವೆ.
ಯಾರೋ ತಿಳುವಳಿಕೆಯಿಲ್ಲದ ಮೂಢನಿಂದ ಇಂತಹ ಅಚಾತುರ್ಯಗಳು ನಡೆಯುತ್ತಿವೆ ಎಂದರೆ ಅಂತಹ ವ್ಯಕ್ತಿಗೆ ತಿಳುವಳಿಕೆ ನೀಡಬಹುದು. ಆದರೆ ಇಂದು ಎಲ್ಲ ಕೃತ್ಯಗಳು ಅತಿಹೆಚ್ಚು ವಿದ್ಯಾವಂತರೆನಿಸಿಕೊAಡವರಿAದಲೇ ವಯೋಮಾನ ಬೇದವಿಲ್ಲದೆ ನಡೆಯುತ್ತಿರುವುದು ನಿಜಕ್ಕೂ ಅಪರಾಧ. ಸರಸ್ವತಿಯ ದೇಗುಲಗಳೂ ಕೆಲವು ಮಂದಿ ನೀತಿಗೆಟ್ಟವರಿAದ ತಮ್ಮ ಪಾವಿತ್ರö್ಯತೆಯನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಡಿ.ಸಿ.ರಾಮಚAದ್ರ ಎಂ.ಎ (ಕನ್ನಡ, ರಾಜ್ಯಶಾಸ್ತç) ಗೌರವ ಕೋಶಾಧ್ಯಕ್ಷರು, ತಾಲ್ಲೂಕು ಕಸಾಪ, ಮಾಗಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ