Free Gas Cylinder Scheme : ದೇಶಾದ್ಯಂತ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಜನತೆ ತತ್ತರಿಸಿ ಹೋಗಿದೆ.  ಆದರೆ ಈ ಬಾರಿ ಹೋಳಿ ಹಬ್ಬದ ಸಲುವಾಗಿ ಜನತೆಗೆ ಈ ಬೆಲೆ ಏರಿಕೆ ಹೊರೆಯಿಂದ ಮುಕ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ  2 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸರ್ಕಾರ  ತೀರ್ಮಾನಿಸಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಜ್ವಲ ಯೋಜನೆಯನ್ನು ನಡೆಸುತ್ತಿದೆ.  ಇದರ ಅಡಿಯಲ್ಲಿ ಸರ್ಕಾರವು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಅದರ ಮೇಲೆ ಸಬ್ಸಿಡಿಯನ್ನು ನೀಡಲಾಗುತ್ತದೆ.


COMMERCIAL BREAK
SCROLL TO CONTINUE READING

ಆಹಾರ ಇಲಾಖೆ ನೀಡಿರುವ ಮಾಹಿತಿ ಇದು : 
 ಉತ್ತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ರಾಜ್ಯ ಸರ್ಕಾರ ಈ ಉಡುಗೊರೆ ನೀಡುತ್ತಿದೆ. ಉತ್ತರ ಪ್ರದೇಶದ ಆಹಾರ ಮತ್ತು ಸರಬರಾಜು ಇಲಾಖೆಯು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದೆ. ಈ ಕುರಿತು ಸರಕಾರದಿಂದ ಬಜೆಟ್‌ ಬಂದ ನಂತರ ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ ಆರಂಭವಾಗಲಿದೆ. 
 
 ಇದನ್ನೂ ಓದಿ :
 2023ರಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ! 3 ಪ್ರಮುಖ ಬೇಡಿಕೆಗಳಿಗೆ ಬೀಳಲಿದೆ ಮುದ್ರೆ .! ವೇತನವಾಗುವುದು ಡಬಲ್


ಹೋಳಿ ಹಬ್ಬದಂದು ಮೊದಲ ಉಚಿತ ಸಿಲಿಂಡರ್  : 
ಚುನಾವಣಾ ಸಮಯದಲ್ಲಿ ರಾಜ್ಯದ ಜನತೆಗೆ ನೀಡಿರುವ ಭರವಸೆಯನ್ನು ಈಡೇರಿಸಲು ಯುಪಿ ಸರ್ಕಾರ ಸಜ್ಜಾಗಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಉಜ್ವಲ ಯೋಜನೆಯಡಿ ಈ ಬಾರಿ ಹೋಳಿ ಹಬ್ಬದ ವೇಳೆ ಮೊದಲ ಉಚಿತ ಸಿಲಿಂಡರ್ ನೀಡಲಾಗುವುದು. ಇದಾದ ನಂತರ ಮುಂದಿನ  ದೀಪಾವಳಿಯಂದು ಎರಡನೇ ಉಚಿತ ಸಿಲಿಂಡರ್ ಸಿಗಲಿದೆ. 


1.65 ಕೋಟಿ ಫಲಾನುಭವಿಗಳಿಗೆ ಲಾಭ :
ರಾಜ್ಯ ಸರ್ಕಾರದ ಈ ಉಚಿತ ಸಿಲಿಂಡರ್ ಸೌಲಭ್ಯದ ಪ್ರಯೋಜನವನ್ನು  ಸುಮಾರು 1.65 ಕೋಟಿ ಫಲಾನುಭವಿಗಳು ಪಡೆಯಲಿದ್ದಾರೆ. ಈ ಉಚಿತ ಸಿಲಿಂಡರ್‌ ವಿತರಣೆ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಸುಮಾರು 3000 ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ. 


ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದಿರಲಿ ಇಂದಿನ ಬೆಲೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.