2023ರಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ! 3 ಪ್ರಮುಖ ಬೇಡಿಕೆಗಳಿಗೆ ಬೀಳಲಿದೆ ಮುದ್ರೆ .! ವೇತನವಾಗುವುದು ಡಬಲ್

7th Pay Commission Latest News: 2023ರಲ್ಲಿ, ಸರ್ಕಾರವು ಅನೇಕ ದೊಡ್ಡ  ಬೇಡಿಕೆಗಳಿಗೆ ಒಪ್ಪಿಗೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿಯೇ ಉದ್ಯೋಗಿಗಳಿಗೆ  ಭರ್ಜರಿ ಲಾಭವಾಗುವ ನಿರೀಕ್ಷೆ ಇದೆ.  

Written by - Ranjitha R K | Last Updated : Nov 21, 2022, 09:25 AM IST
  • ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ
  • ಈಡೇರಲಿದೆ ಬಹು ದಿನಗಳ ಬೇಡಿಕೆ
  • ವೇತನದಲ್ಲಿ ಆಗುವುದು ಭಾರೀ ಬದಲಾವಣೆ
2023ರಲ್ಲಿ  ಸರ್ಕಾರಿ ನೌಕರರಿಗೆ ಬಂಪರ್ ! 3 ಪ್ರಮುಖ ಬೇಡಿಕೆಗಳಿಗೆ ಬೀಳಲಿದೆ ಮುದ್ರೆ .! ವೇತನವಾಗುವುದು  ಡಬಲ್  title=
7th pay Commission

7th Pay Commission Latest News : ಹೊಸ ವರ್ಷವು ಕೇಂದ್ರ ನೌಕರರಿಗೆ ಅನೇಕ  ಸಿಹಿ ಸುದ್ದಿಗಳನ್ನು ಹೊತ್ತು ತರುತ್ತಿದೆ. 2023ರಲ್ಲಿ, ಸರ್ಕಾರವು ಅನೇಕ ದೊಡ್ಡ  ಬೇಡಿಕೆಗಳಿಗೆ ಒಪ್ಪಿಗೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿಯೇ ಉದ್ಯೋಗಿಗಳಿಗೆ  ಭರ್ಜರಿ ಲಾಭವಾಗುವ ನಿರೀಕ್ಷೆ ಇದೆ.  

ಫಿಟ್‌ಮೆಂಟ್ ಅಂಶಕ್ಕೆ ಬಹುಕಾಲದಿಂದ ಬೇಡಿಕೆ ಇಡಲಾಗಿದೆ. 2023ರಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಫಿಟ್‌ಮೆಂಟ್  ಫ್ಯಾಕ್ಟರ್ ನ ಬೇಡಿಕೆಯನ್ನು ಈಡೇರಿಸುವ ನಿರೀಕ್ಷೆ ಇದೆ. ಇದಲ್ಲದೇ ತುಟ್ಟಿ ಭತ್ಯೆ ಮತ್ತು ಹಳೆಯ ಪಿಂಚಣಿ ಯೋಜನೆ ಬಗ್ಗೆಯೂ ನಿರ್ಧಾರ ಕೈಗೊಳ್ಳಬಹುದು.

ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದಿರಲಿ ಇಂದಿನ ಬೆಲೆ

ಫಿಟ್ಮೆಂಟ್ ಅಂಶವು ಯಾವಾಗ ಹೆಚ್ಚಾಗುತ್ತದೆ? :
ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಇದುವರೆಗೆ ಸಿಗದ ದೊಡ್ಡ ಉಡುಗೊರೆ ಸಿಗಲಿದೆ ಎನ್ನಲಾಗಿದೆ. ತುಟ್ಟಿಭತ್ಯೆ, ಎಚ್‌ಆರ್‌ಎ, ಟಿಎ, ಬಡ್ತಿ ನಂತರ, ಫಿಟ್‌ಮೆಂಟ್  ಫಾಕ್ಟರ್  ಬಗ್ಗೆಯೂ ನಿರ್ಧಾರ ಕೈಗೊಳ್ಳಬಹುದು.  ಮೂಲಗಳ ಪ್ರಕಾರ, ನೌಕರರ ವೇತನವನ್ನು 8000 ರೂ.ಗಳಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. ಫಿಟ್‌ಮೆಂಟ್ ಅಂಶ ಹೆಚ್ಚಳವಾದರೆ,  ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳವಾಗುತ್ತದೆ.  ಪ್ರಸ್ತುತ 7ನೇ ವೇತನ ಆಯೋಗದ ಅಡಿಯಲ್ಲಿ ನೌಕರರು ಕನಿಷ್ಠ ವೇತನವಾಗಿ 18000 ರೂ. ಪಡೆಯುತ್ತಾರೆ.

ಹೊಸ ವರ್ಷದಲ್ಲಿ ಮತ್ತೆ ಹೆಚ್ಚಾಗುವುದು ತುಟ್ಟಿಭತ್ಯೆ :
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. AICPI ಡೇಟಾದ ಆಧಾರದ ಮೇಲೆ, ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುತ್ತದೆ.  ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ 2023ರಲ್ಲೂ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ. ಜನವರಿ 2023 ರ  ಡಿಎಯನ್ನು  ಮಾರ್ಚ್ ತಿಂಗಳ ಮೊದಲು ಘೋಷಿಸಲಾಗುತ್ತದೆ. ಇದುವರೆಗಿನ  ಲೆಕ್ಕಾಚಾರದ ಪ್ರಕಾರ, ಮುಂದಿನ ವರ್ಷವೂ ಶೇ.4ರಷ್ಟು ಡಿಎ ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : NPS: 150 ರೂ. ಹೂಡಿಕೆ ಮಾಡಿ ನಿವೃತ್ತಿ ವೇಳೆಗೆ 27 ಸಾವಿರ ರೂ. ಪಿಂಚಣಿ ಜೊತೆಗೆ ಪಡೆಯಿರಿ 1 ಕೋಟಿ ರೂ.

ಸಿಗಲಿದೆ ಹಳೆ ಪಿಂಚಣಿ ಯೋಜನೆಯ ಲಾಭ :
ಮುಂದಿನ ವರ್ಷ ಕೇಂದ್ರ ನೌಕರರಿಗೆ ಹಳೆಯ ಪಿಂಚಣಿಯ  ಲಾಭ ಸಿಗಲಿದೆ.  2023ರಲ್ಲಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ಬರಲಿದೆ. ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕು ಎಂಬುದು ನೌಕರರ ಬಹುದಿನಗಳ ಬೇಡಿಕೆ. ಕೆಲವು ರಾಜ್ಯಗಳು ಚುನಾವಣಾ ಭರವಸೆಗಳನ್ನು ಇಟ್ಟುಕೊಂಡು ಹಳೆಯ ಪಿಂಚಣಿಯನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಸಚಿವಾಲಯದ ಅಭಿಪ್ರಾಯ ಕೇಳಿತ್ತು. ಮೂಲಗಳ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ, ಮೋದಿ ಸರ್ಕಾರವು 2024 ರ ಮೊದಲು   ಹಳೆ ಪಿಂಚಣಿ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News