RBI: ಮೇ 19 ರಂದು ಆರ್‌ಬಿಐ 2016 ರಲ್ಲಿ ಪರಿಚಯಿಸಲಾದ 2,000 ರೂಪಾಯಿ ನೋಟುಗಳನ್ನು ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿನ ಹಿಂದೆಯೇ ಹಿಂಪಡೆಯುವುದಾಗಿ ತಿಳಿಸಿತ್ತು. 2,000 ನೋಟುಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಅಥವಾ ಇತರ ಕರೆನ್ಸಿ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಆದೇಶ ಹೊರಡಿಸಲಾಗಿತ್ತು. ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅಲ್ಲದೇ ಮತ್ತೆ ಏಳು ದಿನಗಳ ಅವಕಾಶ ನೀಡಿ ಅಕ್ಟೋಬರ್ 2ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿತ್ತು. ಇದೀಗ ಆ ಅವಧಿಯೂ ಮುಕ್ತಾಯಗೊಂಡಿದೆ. 


COMMERCIAL BREAK
SCROLL TO CONTINUE READING

ಹೌದು ಕೇಂದ್ರ ಸರ್ಕಾರ 2 ಸಾವಿರ ರೂಪಾಯಿಗಳ ನೋಟುಗಳ ವಿನಿಮಯಕ್ಕೆ ನೀಡಿರುವ ಕಾಲಾವಕಾಶ ನಿನ್ನೆ ಪೂರ್ಣಗೊಂಡಿದೆ. ಇಷ್ಟಾದರೂ ನಿಮ್ಮ ಬಳಿ ಇನ್ನೂ 2 ಸಾವಿರ ರೂಪಾಯಿಗಳ ನೋಟುಗಳಿದ್ದರೆ ಏನು ಮಾಡಬೇಕು ಎನ್ನುವುದಕ್ಕೂ ಆರ್ ಬಿ ಐ ಹೊಸ ಮಾರ್ಗಸೂಚಿ ಹೊರಡಿಸಿದೆ. 


ಇದನ್ನೂ ಓದಿ-ಈ ಬ್ಯಾಂಕ್‌ನಲ್ಲಿ ನೀವು ಖಾತೆ ಹೊಂದಿದ್ದರೆ ಸಿಗಲಿದೆ ಮೂರು ಹೊಸ ಸೇವೆ


ಹೌದು ಉಳಿದುಕೊಂಡಿರುವ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ 19 ಆರ್‌ಬಿಐ ಕಚೇರಿಗಳಲ್ಲಿ ಪ್ರಸ್ತುತಪಡಿಸುವ ಮೂಲಕ ಇತರ ಕರೆನ್ಸಿ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ಮತ್ತು ಇನ್ನುಮುಂದೆ ಇತರೆ ಯಾವುದೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. 


ಗವರ್ನರ್ ಹೇಳಿದ್ದೇನು?
ಇನ್ನು ಕಳೆದ ಶುಕ್ರವಾರ ಮುಂಬೈನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಚಲಾವಣೆಯಲ್ಲಿರುವ 3,43,000 ಕೋಟಿ ಮೌಲ್ಯದ 2,000 ರೂಪಾಯಿ ನೋಟುಗಳಲ್ಲಿ ಶೇಕಡಾ 87 ರಷ್ಟು ವಾಪಸಾಗಿದೆ, ಆದರೆ 12,000 ಕೋಟಿ ಮೌಲ್ಯದ ನೋಟುಗಳು ಇನ್ನೂ ವಾಪಸಾಗಿಲ್ಲ. ಒಟ್ಟಿನಲ್ಲಿ ಇನ್ನೂ ನಿಮ್ಮ ಬಳಿ 2,000 ರೂ ನೋಟುಗಳು ಇದ್ದರೆ ಕೊನೆಯ ಅವಕಾಶ ಎನ್ನುವಂತೆ ಆರ್‌ಬಿಐ ಮೂಲಕವೇ ನೇರವಾಗಿ ವಿನಿಮಯ ಮಾಡಬಹುದು.


ಇದನ್ನೂ ಓದಿ-ಆಧಾರ್ ಸಹಾಯದಿಂದ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.