ಆಧಾರ್ ಸಹಾಯದಿಂದ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ

PAN Card: ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ನೀವು ಸುಲಭವಾಗಿ ಇ-ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು. ವೈಯಕ್ತಿಕ ತೆರಿಗೆದಾರರಿಗೆ ಇ-ಪ್ಯಾನ್ ಸೌಲಭ್ಯ ಲಭ್ಯವಾಗಲಿದ್ದು, ಇದನ್ನು ಪಡೆಯುವ ಸುಲಭ ಮಾರ್ಗದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 

Written by - Yashaswini V | Last Updated : Sep 21, 2023, 12:07 PM IST
  • ನಿಯಮಿತ ತೆರಿಗೆ ಪಾವತಿಸುವ ಉದ್ಯೋಗಿಗಳು ಮಾತ್ರವಲ್ಲದೆ, 50,000 ರೂ.ಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವವರು ಕೂಡ ಪ್ಯಾನ್ ಕಾರ್ಡ್ ಹೊಂದಿರುವುದು ಅತ್ಯಗತ್ಯವಾಗಿದೆ.
  • ಈ ಕಾರ್ಡ್ ಪ್ರತಿ ತೆರಿಗೆದಾರರಿಗೆ ವಿಶಿಷ್ಟವಾದ ಗುರುತಿನ ಸಂಖ್ಯೆಯಾಗಿದ್ದು ಅವರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಉಪಯುಕ್ತವಾಗಿದೆ.
  • ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ನೀವು ತ್ವರಿತವಾಗಿ ಪ್ಯಾನ್ ಕಾರ್ಡ್ ಬಳಸಲು ಅದಕ್ಕಾಗಿ ಸುಲಭವಾದ ಮಾರ್ಗದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.
ಆಧಾರ್ ಸಹಾಯದಿಂದ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ  title=

Easy Way To Get E-Pan: ಇತ್ತೀಚಿನ ದಿನಗಳಲ್ಲಿ ಪ್ರತಿ ಭಾರತೀಯ ನಾಗರೀಕರಿಗೆ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಅದೇ ರೀತಿ ಹಣಕಾಸಿನ ವಹಿವಾಟು ನಡೆಸಲು ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕೂಡ ಅಗತ್ಯವಾಗಿದೆ. ಪ್ಯಾನ್ ನಂಬರ್ ಹತ್ತು ಅಂಕಿಗಳ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು ಆದಾಯ ತೆರಿಗೆ ಇಲಾಖೆಯಿಂದ ಲಭ್ಯವಾಗಲಿದೆ. 

ನಿಯಮಿತ ತೆರಿಗೆ ಪಾವತಿಸುವ ಉದ್ಯೋಗಿಗಳು ಮಾತ್ರವಲ್ಲದೆ, 50,000 ರೂ.ಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವವರು ಕೂಡ ಪ್ಯಾನ್ ಕಾರ್ಡ್ ಹೊಂದಿರುವುದು ಅತ್ಯಗತ್ಯವಾಗಿದೆ. ಈ ಕಾರ್ಡ್ ಪ್ರತಿ ತೆರಿಗೆದಾರರಿಗೆ ವಿಶಿಷ್ಟವಾದ ಗುರುತಿನ ಸಂಖ್ಯೆಯಾಗಿದ್ದು ಅವರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಉಪಯುಕ್ತವಾಗಿದೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ನೀವು ತ್ವರಿತವಾಗಿ ಪ್ಯಾನ್ ಕಾರ್ಡ್ ಬಳಸಲು ಅದಕ್ಕಾಗಿ ಸುಲಭವಾದ ಮಾರ್ಗದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. 

ಇದನ್ನೂ ಓದಿ- ದಾಖಲೆಯ ಮಟ್ಟಕ್ಕೆ ಕಚ್ಚಾತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..?

ವಾಸ್ತವವಾಗಿ, ಭೌತಿಕ ಪ್ಯಾನ್ ಕಾರ್ಡ್ ಪಡೆಯುವ ಸಾಂಪ್ರದಾಯಿಕ ವಿಧಾನವು ಮುದ್ರಣ, ಅಂಚೆ ಮತ್ತು ಹಸ್ತಚಾಲಿತ ನಿರ್ವಹಣೆಯಿಂದಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಲು  ಇ-ಪ್ಯಾನ್‌ಗಳನ್ನು ವಿದ್ಯುನ್ಮಾನವಾಗಿ ಉತ್ಪಾದಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ. ನೀವು ಇರುವಲ್ಲಿಯೇ ಸುಲಭವಾಗಿ ಇ-ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. 

ಆಧಾರ್ ಸಂಖ್ಯೆ ಬಳಸಿ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹಂತ-ಹಂತದ ಪ್ರಕ್ರಿಯೆ: 
>> ಇ-ಪ್ಯಾನ್ ಪಡೆಯಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕು: https://www.incometax.gov.in/iec/foportal 
>> ಇ-ಫೈಲಿಂಗ್ ಪೋರ್ಟಲ್ ಮುಖಪುಟದ ಮೇಲೆ ಕ್ಲಿಕ್ ಮಾಡಿ, ತ್ವರಿತ ಇ-ಪ್ಯಾನ್ ಆಯ್ಕೆಯನ್ನು ಕ್ಲಿಕ್ ಮಾಡಿ.
>> ಇ-ಪ್ಯಾನ್ ಪುಟದಲ್ಲಿ, ಹೊಸ ಇ-ಪ್ಯಾನ್ ಅನ್ನು ಕ್ಲಿಕ್ ಮಾಡಿ.
>> ನಿಮ್ಮ ಮುಂದೆ ಹೊಸ ಇ-ಪ್ಯಾನ್ ಪುಟ ತೆರೆಯುತ್ತದೆ. ಇಲ್ಲಿ ನಿಗದಿತ ಜಾಗದಲ್ಲಿ  12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಬಳಿಕ, ದೃಢೀಕರಣ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಮುಂದುವರೆಯಿರಿ. 
>> ನಂತರ OTP ಊರ್ಜಿತಗೊಳಿಸುವಿಕೆಯ ಪುಟದಲ್ಲಿ ನಿಯಮಗಳು ಮತ್ತು ಶರತ್ತುಗಳನ್ನು ಓದಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. 
>> OTP ಮೌಲ್ಯೀಕರಣ ಪುಟದಲ್ಲಿ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ
>> ಬಳಿಕ ಯುಐಡಿಎಐ ಜೊತೆಗೆ ಆಧಾರ್ ವಿವರಗಳನ್ನು ಮೌಲ್ಯೀಕರಿಸಲು ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
>> ಆಧಾರ್ ವಿವರಗಳನ್ನು ಮೌಲ್ಯೀಕರಿಸಿ ಪುಟದ ಮೇಲೆ ಕ್ಲಿಕ್ ಮಾಡಿ. 
>> ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ನೀವು ಒಂದು ಸ್ವೀಕೃತಿ ಸಂಖ್ಯೆಯೊಂದಿಗೆ ಸಂದೇಶವನ್ನು ಪಡೆಯುತ್ತೀರಿ. 

ಇದನ್ನೂ ಓದಿ- ಸರ್ಕಾರದ ಗ್ಯಾರಂಟಿ ಮೇಲೆ ಹೂಡಿಕೆ ಮಾಡಿದರೆ ಈ ಯೋಜನೆಯಲ್ಲಿ ಸಿಗುತ್ತೆ ಎಫ್ ಡಿಗಿಂತ ಹೆಚ್ಚು ಬಡ್ಡಿಯ ಲಾಭ!

ಇ-ಪ್ಯಾನ್‌ನ ಪ್ರಯೋಜನಗಳೇನು? 
* ಸುಲಭ ಮತ್ತು ಕಾಗದರಹಿತ ಪ್ರಕ್ರಿಯೆ
* ನಿಮಗೆ ಬೇಕಾಗಿರುವುದು ಆಧಾರ್ ಮತ್ತು ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ
* e-PAN ಗಳು ಮಾನ್ಯವಾಗಿರುತ್ತವೆ ಮತ್ತು ಎಲ್ಲಾ ಉದ್ದೇಶಗಳಿಗಾಗಿ ಸ್ವೀಕರಿಸಲ್ಪಡುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News