ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಶುಭ ಸುದ್ದಿಗಾಗಿ ಕಾಯುತ್ತಿದ್ದಾರೆ. ಸರ್ಕಾರಿ ನೌಕರರು ನೀರೀಕ್ಷಿಸುತ್ತಿರುವ ಸಿಹಿ ಸುದ್ದಿ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ.


COMMERCIAL BREAK
SCROLL TO CONTINUE READING

ಶೇ. 50 ತಲುಪುವುದು ಡಿಎ :
ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಜುಲೈ ತುಟ್ಟಿ ಭತ್ಯೆ ಶೇ 4 ರಷ್ಟು ಏರಿಕೆಯಾಗಿದೆ. ಹೀಗಾಗಿ ಸರ್ಕಾರಿ ನೌಕರರು ಪ್ರಸ್ತುತ ಶೇ 46 ರಷ್ಟು ಡಿಎ ಪಡೆಯುತ್ತಿದ್ದಾರೆ.  ಮತ್ತೆ ಜನವರಿಯಲ್ಲಿ ಶೇ. 4 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೆ ಸರ್ಕಾರಿ ನೌಕರರ ಡಿಎ ಶೇ. 50 ಕ್ಕೆ ತಲುಪುತ್ತದೆ. ಇದರ ಜೊತೆಗೆ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಬದಲಾವಣೆಯಾಗುವುದು ಖಚಿತ.


ಇದನ್ನೂ ಓದಿ : ಡಿಸೆಂಬರ್‌ 11 ರಂದು 10 ಗ್ರಾಂ ಚಿನ್ನದ ದರ ಕುಸಿತ: ನಿಮ್ಮ ನಗರದಲ್ಲಿನ ಬೆಲೆಯನ್ನು ಪರಿಶೀಲಿಸಿ!


ಡಿಎ ಹೆಚ್ಚಳ ಹೊಸ ವರ್ಷದಿಂದಲೇ ಜಾರಿಗೆ ಬರಲಿದೆ :
ಹೊಸ ವರ್ಷ 2024 ರ ಪ್ರಾರಂಭದೊಂದಿಗೆ, ಮಾಸಿಕ ವೇತನದ ಆಧಾರದ ಮೇಲೆ  ಇನ್‌ಕ್ರಿಮೆಂಟ್ ಲಭ್ಯವಿರುತ್ತದೆ. ಈ ತುಟ್ಟಿಭತ್ಯೆ ಹೆಚ್ಚಳದ ಲಾಭವನ್ನು 7ನೇ ವೇತನ ಶ್ರೇಣಿಯಡಿ ವೇತನ ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವುದು. ವರದಿಗಳ ಪ್ರಕಾರ, ಒಟ್ಟು 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಈ ಹೆಚ್ಚಳದಿಂದ ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ.


ಮೂಲ ವೇತನದಲ್ಲಿ ಬದಲಾವಣೆ :
ಒಮ್ಮೆ ಡಿಎ ಶೇ 50 ನ್ನು ತಲುಪಿದರೆ ನಂತರ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.  ತುಟ್ಟಿಭತ್ಯೆ ಶೂನ್ಯವಾದ ನಂತರ, ಮತ್ತೆ ಆ ದರ ಶೇಕಡಾವಾರು 1, 2 ರಂತೆ ಪ್ರಾರಂಭವಾಗುತ್ತದೆ. ತುಟ್ಟಿಭತ್ಯೆಯು ಶೇಕಡಾ 50 ಕ್ಕೆ ತಲುಪಿದ ನಂತರ, ಅದನ್ನು ಮೂಲ ವೇತನಕ್ಕೆ ಲಿಂಕ್ ಮಾಡಲಾಗುತ್ತದೆ.


ಇದನ್ನೂ ಓದಿ : ಪ್ರತಿ ರಿಚಾರ್ಜ್ ಮೇಲೆ Google Pay ತೆಗೆದುಕೊಳ್ಳುತ್ತಿದೆ ಕನ್ವಿನಿಯೆನ್ಸ್ ಫೀಸ್ ! ನಿಮ್ಮ ಖಾತೆಯಿಂದ ಕಡಿತವಾಗುವ ಮೊತ್ತ ಎಷ್ಟು ?


ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಳ? :
ಪ್ರಸ್ತುತ, ಪೇ-ಬ್ಯಾಂಡ್ ಲೆವೆಲ್-1 ಸರ್ಕಾರಿ ನೌಕರರ ಮೂಲ ವೇತನ  18,000 ರೂ. ಇದು ಕನಿಷ್ಠ ಮೂಲ ವೇತನವಾಗಿದೆ. ಆದರೆ, ಇದೇ ಲೆಕ್ಕಾಚಾರದಲ್ಲಿ ತುಟ್ಟಿಭತ್ಯೆ ಶೇ.50 ರಂತೆ ಲೆಕ್ಕ ಹಾಕಿದಾಗ ಅದು ಸಾವಿರ ರೂ.ಆಗುತ್ತದೆ.  ಮೊದಲೇ ಹೇಳಿದ ಹಾಗೆ ತುಟ್ಟಿಭತ್ಯೆ  ಶೇಕಡಾ 50 ಕ್ಕೆ ತಲುಪಿದ ನಂತರ ಅದನ್ನು ಶೂನ್ಯಕ್ಕೆ ಇಳಿಸಿ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ 18,000 ರೂಪಾಯಿ ಇದ್ದ ಮೂಲ ವೇತನಕ್ಕೆ 9,000 ಸೇರಿದಾಗ ಅದು 27,000 ರುಪಾಯಿಗೆ ಏರಿಕೆಯಾಗುತ್ತದೆ. ಇದರ ನಂತರ, ತುಟ್ಟಿಭತ್ಯೆಯನ್ನು 27,000 ರೂ. ಮೇಲೆ  ಲೆಕ್ಕಹಾಕಲಾಗುತ್ತದೆ.


ಮನೆ ಬಾಡಿಗೆ ಭತ್ಯೆಯಲ್ಲಿಯೂ ಹೆಚ್ಚಳ :
DoPT ಯ ಜ್ಞಾಪಕ ಪತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ತುಟ್ಟಿಭತ್ಯೆ ಹೆಚ್ಚಳದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ನಗರದ ಪ್ರಕಾರದ ಪ್ರಕಾರ, ಶೇಕಡಾ 27, ಶೇಕಡಾ 18 ಮತ್ತು ಶೇಕಡಾ 9 ರ ದರದಲ್ಲಿ HRA ಅನ್ನು ನೀಡಲಾಗುತ್ತದೆ. 2015 ರಲ್ಲಿ ನೀಡಲಾದ ಜ್ಞಾಪಕ ಪತ್ರದ ಪ್ರಕಾರ, HRA ಅನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು.  ತುಟ್ಟಿಭತ್ಯೆ  50% ದಾಟಿದಾಗ  HRA ಕೂಡಾ ಬದಲಾಗುತ್ತದೆ.


HRA 3% ರಷ್ಟು ಹೆಚ್ಚಾಗುತ್ತದೆ :
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು 7 ನೇ ವೇತನ ಆಯೋಗದ ಅಡಿಯಲ್ಲಿ 3% ಆಗಿರುತ್ತದೆ. ಈಗಿರುವ ಗರಿಷ್ಠ ದರವಾದ ಶೇ.27ರಿಂದ ಎಚ್‌ಆರ್‌ಎ ಶೇ.30ಕ್ಕೆ ಏರಿಕೆಯಾಗಲಿದೆ. DA 50% ಮೀರಿದಾಗ, HRA 30%, 20% ಮತ್ತು 10% ಕ್ಕೆ ಏರುತ್ತದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ