ನವದೆಹಲಿ: 5 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವವರು ಜಿಎಸ್‌ಟಿ ತೆರಿಗೆ ಪಾವತಿ ಮಾಡಲೇಬೇಕು. ಸರಕು ಮತ್ತು ಸೇವೆಗಳ ಪೂರೈಕೆಗಾಗಿ ನೀಡಲಾದ ಇನ್‌ವಾಯ್ಸ್‌ಗಳಲ್ಲಿ ಆರು ಅಂಕಿಯ ಎಚ್‌ಎಸ್‌ಎನ್(Harmonised System of Nomenclature Code) ಅಥವಾ ಟಾರಿಫ್ ಕೋಡ್ ನೀಡಲೇಬೇಕು ಎಂದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ನಿಯಮವು ಏಪ್ರಿಲ್ 1, 2021 ರಿಂದ ಜಾರಿಯಾಗಿದೆ.


COMMERCIAL BREAK
SCROLL TO CONTINUE READING

ಹಿಂದಿನ ಹಣಕಾಸು ವರ್ಷದಲ್ಲಿ 5 ಕೋಟಿ ರೂ.ಗಳ ವಹಿವಾಟು ಹೊಂದಿರುವ ತೆರಿಗೆದಾರ(GST Taxpayers)ನು ಬಿ 2 ಬಿ ಇನ್‌ವಾಯ್ಸ್‌ಗಳಲ್ಲಿ 4 ಅಂಕಿಗಳ ಎಚ್‌ಎಸ್‌ಎನ್ ಕೋಡ್ ಅನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ. ಈ ಮೊದಲು, ಅಗತ್ಯವು ಕ್ರಮವಾಗಿ 4 ಅಂಕಿಗಳ ಮತ್ತು 2 ಅಂಕೆಗಳಷ್ಟಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ : Systematic Way Of Profitable Investment: SIP, STP, SWP:ಮಾರುಕಟ್ಟೆಯ ಏರಿಳಿತದಿಂದ ಹೂಡಿಕೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ? ಇಲ್ಲಿವೆ ಉಪಾಯಗಳು


ಸರಕುಗಳಿಗಾಗಿ 6 ಅಂಕಿಗಳ ಎಚ್‌ಎಸ್‌ಎನ್ ಕೋಡ್ ಎಲ್ಲರಿಗೂ ಸಾಮಾನ್ಯವಾಗಿದೆ. ಆದ್ದರಿಂದ, ಸಾಮಾನ್ಯ ಎಚ್‌ಎಸ್‌ಎನ್ ಕೋಡ್(HSN Code) ಕಸ್ಟಮ್ಸ್ ಮತ್ತು ಜಿಎಸ್‌ಟಿಗೆ ಅನ್ವಯಿಸುತ್ತವೆ. ಹಾಗೆ, ಕಸ್ಟಮ್ಸ್ ಸುಂಕದಲ್ಲಿ ಸೂಚಿಸಲಾದ ಕೋಡ್‌ಗಳನ್ನು ಜಿಎಸ್‌ಟಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ (ಜಿಎಸ್‌ಟಿ ದರ ವೇಳಾಪಟ್ಟಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ). ಕಸ್ಟಮ್ಸ್ ಸುಂಕದಲ್ಲಿ, ಎಚ್ಎಸ್ ಕೋಡ್ ಅನ್ನು ಹೆಡ್ಡಿಂಗ್ (4 ಅಂಕಿಗಳ ಎಚ್ಎಸ್), ಉಪ-ಶೀರ್ಷಿಕೆ (6 ಅಂಕಿಗಳ ಎಚ್ಎಸ್) ಮತ್ತು ಸುಂಕದ ವಸ್ತುಗಳು (8 ಅಂಕಿಗಳ) ಎಂದು ಸೂಚಿಸಲಾಗುತ್ತದೆ.


ಇದನ್ನೂ ಓದಿ : Post Office Scheme: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100 ರೂ.ಗಿಂತ ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ 14 ಲಕ್ಷ ರೂ.


ಈ ದಾಖಲೆಗಳನ್ನು ಸಿಬಿಐಸಿ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು: 
 
-ಕಸ್ಟಮ್ಸ್ ಸುಂಕವನ್ನು HSN ಕೋಡ್‌ಗಳಿಗಾಗಿ https://www.cbic.gov.in/htdocs-cbec/customs/cst2021-020221/cst-idx ನಲ್ಲಿ ನೋಡಬಹುದು.
 
-ಸರಕು ಮತ್ತು ಸೇವೆಗಳ ಜಿಎಸ್‌ಟಿ ದರ ವೇಳಾಪಟ್ಟಿಯನ್ನು https://www.cbic.gov.in/htdocs-cbec/gst/index-english. ನಲ್ಲಿ ನೋಡಬಹುದು.


ಇದನ್ನೂ ಓದಿ : Gold-Silver Rate: ಚಿನ್ನ ಖರೀದಿದಾರರಿಗೆ ಬಿಗ್ ಶಾಕ್:  ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ!
 
-ಅಲ್ಲಿ ನೀಡಿರುವ ಜಿಎಸ್ ಟಿ ದರಗಳು / ಸಿದ್ಧ ಲೆಕ್ಕಾಚಾರ(Ready Reckoner)-ನವೀಕರಿಸಿದ ಅಧಿಸೂಚನೆಗಳು/ ಫೈಂಡರ್ ಮಾರ್ಗವನ್ನು ಅನುಸರಿಸಿ ಮುಂದುವರೆಯಬಹುದು. 


-ಜಿಎಸ್ಟಿ ದರಗಳು ರೆಡಿ ರೆಕಾನರ್ / ನವೀಕರಿಸಿದ ಅಧಿಸೂಚನೆಗಳು.


ಇದನ್ನೂ ಓದಿ : Post Office: ಪಿಪಿಎಫ್‌ನಲ್ಲಿ 500 ರೂ.ಗಳಿಂದ ಹೂಡಿಕೆ ಪ್ರಾರಂಭಿ ಈ ಲಾಭ ಪಡೆಯಿರಿ


ಇದಲ್ಲದೆ, ಜಿಎಸ್ಟಿ ಪೋರ್ಟಲ್(GST Portal) ನಲ್ಲಿ  HSN ನಂಬರ್ ಹುಡುಕಾಟ ಸೌಲಭ್ಯವೂ ಲಭ್ಯವಿದೆ. ಉತ್ಪಾದಕರು ಮತ್ತು ಆಮದುದಾರರು / ರಫ್ತುದಾರರು ಸಾಮಾನ್ಯವಾಗಿ HSN ಕೋಡ್‌ಗಳನ್ನು ಬಳಸುತ್ತಿದ್ದಾರೆ. ಜಿಎಸ್ ಟಿ ಬರುವ ಮೊದಲು ಇದನ್ನ ಉತ್ಪಾದಕರಿಗೆ ಈ ಕೋಡ್ ಗಳನ್ನ ಒದಗಿಸಲಾಗುತ್ತಿತ್ತು. ಆಮದುದಾರರು ಮತ್ತು ರಫ್ತುದಾರರು ಈ ಕೋಡ್ ಗಳನ್ನ ಆಮದು / ರಫ್ತು ದಾಖಲೆಗಳಲ್ಲಿ ನಮೂದಿಸುತ್ತಿದ್ದರು. ವ್ಯಾಪಾರಿಗಳು ಹೆಚ್ಚಾಗಿ ಉತ್ಪಾದಕರು ಅಥವಾ ಆಮದುದಾರ, ವಿತರಕರು ನೀಡಿದ ಇನ್‌ವಾಯ್ಸ್‌ಗಳಲ್ಲಿ ಒದಗಿಸಲಾದ ಎಚ್‌ಎಸ್‌ಎನ್ ಕೋಡ್‌ಗಳನ್ನು ಬಳಸುತ್ತಿದ್ದರು. ಅದರಂತೆ, ಹೆಚ್ಚಿನ ಸಂಖ್ಯೆಯ ಜಿಎಸ್ಟಿ ತೆರಿಗೆದಾರರು ಈಗಾಗಲೇ ಇನ್ವಾಯ್ಸ್, ಇ-ವೇ ಬಿಲ್‌ಗಳು ಮತ್ತು ಜಿಎಸ್‌ಟಿಆರ್ 1 ರಿಟರ್ನ್‌ಗಳ ಮೇಲೆ ಸ್ವಯಂಪ್ರೇರಿತ ಆಧಾರದ ಮೇಲೆ 6/8 ಅಂಕೆಗಳಲ್ಲಿ ಎಚ್‌ಎಸ್ ಕೋಡ್‌ಗಳನ್ನು / ಎಸ್‌ಎಸಿಯನ್ನು ನೀಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.