7th Pay Commission: ಕೇವಲ 7 ದಿನಗಳಲ್ಲಿ ಲಕ್ಷಾಂತರ ಉದ್ಯೋಗಿಗಳಿಗೆ ಸಿಗಲಿದೆ ಬಂಪರ್ ಗಿಫ್ಟ್: ಹೆಚ್ಚಾಗಲಿದೆ ಸಂಬಳ!
ಇನ್ನು ಕೆಲವೇ ದಿನಗಳು ಕಾಯಬೇಕಿದ್ದು, ಆ ಬಳಿಕ ಶೀಘ್ರವೇ ಉದ್ಯೋಗಿಗಳ ಖಾತೆಗೆ ದೊಡ್ಡ ಮೊತ್ತ ಬರಬಹುದು. ಮೂಲಗಳು ತಿಳಿಸುವ ಪ್ರಕಾರ, ಸೆಪ್ಟೆಂಬರ್ 28 ರಂದು ಸರ್ಕಾರವು ಔಪಚಾರಿಕ ಘೋಷಣೆ ಮಾಡಬಹುದು. ಅಂದರೆ ನವರಾತ್ರಿಯಲ್ಲಿ ನಿಮಗೆ ಈ ಉಡುಗೊರೆ ಸಿಗುತ್ತದೆ. ಮುಂದಿನ ತಿಂಗಳು ಉದ್ಯೋಗಿಗಳಿಗೆ ಶೇ.38 ದರದಲ್ಲಿ ಡಿಎ ಸಿಗಲಿದೆ.
7th Pay Commission: ಈ ಬಾರಿ ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಗಿಫ್ಟ್ ಸಿಗಬಹುದು. ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಬಹುದು. ಸೆಪ್ಟೆಂಬರ್ ಅಂತ್ಯದ ವೇಳೆಗೆ, ಉದ್ಯೋಗಿಗಳು ಹೆಚ್ಚಿದ ಡಿಎ ಉಡುಗೊರೆಯನ್ನು ಪಡೆಯಬಹುದು. ಇದರೊಂದಿಗೆ 2 ತಿಂಗಳ ಡಿಎ ಹಣವನ್ನು ಕೂಡ ಅವರ ಖಾತೆಗೆ ವರ್ಗಾಯಿಸಬಹುದು. ನಿಮ್ಮ ಖಾತೆಗೆ ಸರ್ಕಾರವು ಯಾವ ದಿನ ಹಣವನ್ನು ವರ್ಗಾಯಿಸುವ ಸಾಧ್ಯತೆಯಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇದನ್ನೂ ಓದಿ:Stock Market: ಸೆನ್ಸೆಕ್ಸ್ ಸೂಚ್ಯಂಕದಲ್ಲಿ 578 ಅಂಕಗಳ ಜಿಗಿತ, 17,800 ಗಡಿ ದಾಟಿದ ನಿಫ್ಟಿ, ಟಾಪ್ ಗೆನರ್ ಯಾರು?
ಇನ್ನು ಕೆಲವೇ ದಿನಗಳು ಕಾಯಬೇಕಿದ್ದು, ಆ ಬಳಿಕ ಶೀಘ್ರವೇ ಉದ್ಯೋಗಿಗಳ ಖಾತೆಗೆ ದೊಡ್ಡ ಮೊತ್ತ ಬರಬಹುದು. ಮೂಲಗಳು ತಿಳಿಸುವ ಪ್ರಕಾರ, ಸೆಪ್ಟೆಂಬರ್ 28 ರಂದು ಸರ್ಕಾರವು ಔಪಚಾರಿಕ ಘೋಷಣೆ ಮಾಡಬಹುದು. ಅಂದರೆ ನವರಾತ್ರಿಯಲ್ಲಿ ನಿಮಗೆ ಈ ಉಡುಗೊರೆ ಸಿಗುತ್ತದೆ. ಮುಂದಿನ ತಿಂಗಳು ಉದ್ಯೋಗಿಗಳಿಗೆ ಶೇ.38 ದರದಲ್ಲಿ ಡಿಎ ಸಿಗಲಿದೆ.
ಉದ್ಯೋಗಿಗಳ ಹೊಸ ತುಟ್ಟಿಭತ್ಯೆ ಜುಲೈ 1, 2022 ರಿಂದ ಅನ್ವಯವಾಗುತ್ತದೆ. ಅಂದರೆ ನೀವು ಕಳೆದ 3 ತಿಂಗಳ ಹಣವನ್ನು ಬಾಕಿಯಾಗಿ ಪಡೆಯುತ್ತೀರಿ. ಹೆಚ್ಚಿದ ಡಿಎ ಜೊತೆಗೆ ಈ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. ಉದ್ಯೋಗಿಗಳ ಡಿಎ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಅವಲಂಬಿಸಿರುತ್ತದೆ. ಅದರಂತೆ, ನೌಕರರ ಸಂಬಳ ಹೆಚ್ಚಾಗುತ್ತದೆ.
ಇದನ್ನೂ ಓದಿ: Indian Economy: ಪ್ರಸಕ್ತ ದಶಕದಲ್ಲಿ ಭಾರತದ ಅಭಿವೃದ್ಧಿ ದರ ಶೇ.7 ರಷ್ಟು ಮುಂದುವರೆಯಲಿದೆ
ಸಂಬಳ ಎಷ್ಟು ಹೆಚ್ಚಾಗುತ್ತದೆ?
ವೇತನ ಹೆಚ್ಚಳದ ಕುರಿತು ಮಾತನಾಡುವುದಾದರೆ, ಉದ್ಯೋಗಿಯ ಕನಿಷ್ಠ ವೇತನವು 18000 ರೂ ಆಗಿದ್ದರೆ,ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದಲ್ಲಿ 56,900 ರೂ ಆಗಿದ್ದರೆ ಮತ್ತು ಡಿಎಯನ್ನು ಶೇಕಡಾ 38 ರ ದರದಲ್ಲಿ ನೀಡಿದರೆ, ಮೂಲ ವೇತನದ ಮೇಲಿನ ವಾರ್ಷಿಕ ಡಿಎಯಲ್ಲಿ ಒಟ್ಟು ಹೆಚ್ಚಳ 6840 ರೂ ಏರಿಕೆಯಾಗಿದೆ. ಅಂದರೆ, ಮಾಸಿಕ ಡಿಎಯಲ್ಲಿ 720 ರೂಪಾಯಿ ಹೆಚ್ಚಳವಾಗಲಿದೆ. ಇದರ ಹೊರತಾಗಿ, ನಿಮ್ಮ ಮೂಲ ವೇತನ 56900 ರೂ ಆಗಿದ್ದರೆ, ನೀವು 27312 ರೂಗಳ ತುಟ್ಟಿಭತ್ಯೆಯನ್ನು ಪಡೆಯುತ್ತೀರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.