Stock Market: ಸೆನ್ಸೆಕ್ಸ್ ಸೂಚ್ಯಂಕದಲ್ಲಿ 578 ಅಂಕಗಳ ಜಿಗಿತ, 17,800 ಗಡಿ ದಾಟಿದ ನಿಫ್ಟಿ, ಟಾಪ್ ಗೆನರ್ ಯಾರು?

Stock Market Closing: ಷೇರು ಮಾರುಕಟ್ಟೆ ಇಂದೂ ಕೂಡ ಉತ್ತಮ ವಹಿವಾಟಿಗೆ ಸಾಕ್ಷಿಯಾಗಿದೆ. ಇಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.  

Written by - Nitin Tabib | Last Updated : Sep 20, 2022, 05:22 PM IST
  • ಸೆನ್ಸೆಕ್ಸ್‌ನ ಟಾಪ್-30 ಪೈಕಿ 4 ಕಂಪನಿಗಳ ಷೇರುಗಳು ಕುಸಿತದೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ.
  • ಇಂದು ನೆಸ್ಲೆ ಇಂಡಿಯಾ, ಪವರ್ ಗ್ರಿಡ್, ಇನ್ಫೋಸಿಸ್ ಮತ್ತು ರಿಲಯನ್ಸ್ ಷೇರುಗಳು ಕುಸಿತವನ್ನು ಅನುಭವಿಸಿದ್ದು,
  • ಸನ್ ಫಾರ್ಮಾ ಟಾಪ್ ಗೆನರ್ ಆಗಿ ಹೊರಹೊಮ್ಮಿದೆ.
Stock Market: ಸೆನ್ಸೆಕ್ಸ್ ಸೂಚ್ಯಂಕದಲ್ಲಿ 578 ಅಂಕಗಳ ಜಿಗಿತ, 17,800 ಗಡಿ ದಾಟಿದ ನಿಫ್ಟಿ, ಟಾಪ್ ಗೆನರ್ ಯಾರು? title=
Stock Market Updates

Stock Market Closing on 20 September 2022: ಇಂದೂ ಕೂಡ ಷೇರು ಮಾರುಕಟ್ಟೆಯಲ್ಲಿ ಉತ್ತಮ ಖರೀದಿ ಪ್ರಕ್ರಿಯೆ ಕಂಡುಬಂದಿದೆ. ಪರಿಣಾಮವಶಾತ್ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ತಮ್ಮ ದಿನದ ವಹಿವಾಟುಗಳನ್ನು ಅಂತ್ಯಗೊಳಿಸಿವೆ. ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ಸೆನ್ಸೆಕ್ಸ್ 578.51 ಪಾಯಿಂಟ್ ಅಥವಾ ಶೇ.0.98 ರಷ್ಟು ಏರಿಕೆಯೊಂದಿಗೆ 59,719.74ಕ್ಕೆ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾಗಿರುವ ನಿಫ್ಟಿ 194.00 ಪಾಯಿಂಟ್ ಅಥವಾ ಶೇ.1.1 ಗಳಿಕೆಯೊಂದಿಗೆ 17,816.25 ಮಟ್ಟದಲ್ಲಿ ಮುಕ್ತಾಯ ಕಂಡಿದೆ.

ಯಾವ ಕಂಪನಿಯ ಷೇರುಗಳು ಹೆಚ್ಚು ಮಾರಾಟಗೊಂಡಿವೆ?
ಸೆನ್ಸೆಕ್ಸ್‌ನ ಟಾಪ್-30 ಪೈಕಿ 4 ಕಂಪನಿಗಳ ಷೇರುಗಳು ಕುಸಿತದೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಇಂದು ನೆಸ್ಲೆ ಇಂಡಿಯಾ, ಪವರ್ ಗ್ರಿಡ್, ಇನ್ಫೋಸಿಸ್ ಮತ್ತು ರಿಲಯನ್ಸ್ ಷೇರುಗಳು ಕುಸಿತವನ್ನು ಅನುಭವಿಸಿದ್ದು, ಸನ್ ಫಾರ್ಮಾ ಟಾಪ್ ಗೆನರ್ ಆಗಿ ಹೊರಹೊಮ್ಮಿದೆ.

ಉತ್ತಮ ಬೆಳವಣಿಗೆ ಕಂಡ ಸನ್ ಫಾರ್ಮಾ
ಇಂದು ಸನ್ ಫಾರ್ಮಾ ಷೇರುಗಳು ಶೇ.4.7 ರಷ್ಟು ಏರಿಕೆಯೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಅರ್ಥಾತ್ ಸನ್ ಫಾರ್ಮಾ ದಿನದ ಟಾಪ್ ಗೇನರ್ ಆಗಿ ಹೊರಹೊಮ್ಮಿದೆ. ಇದಲ್ಲದೆ, ಇಂಡಸ್‌ಇಂಡ್ ಬ್ಯಾಂಕ್, ಡಾ ರೆಡ್ಡಿ, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎಲ್‌ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಎನ್‌ಟಿಪಿಸಿ ಸೇರಿದಂತೆ ಎಸ್.ಬಿ.ಐ.ಷೇರುಗಳಲ್ಲಿ ಉತ್ತಮ ಖರೀದಿ ಕಂಡುಬಂದಿದೆ.

ಇದನ್ನೂ ಓದಿ- Illegal Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಕಡಿವಾಣಕ್ಕೆ ಸಿದ್ಧತೆ, ಸರ್ಕಾರ ಗೂಗಲ್ ಗೆ ಹೇಳಿದ್ದೇನು?

ಯಾವ ವಲಯಗಳಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿದೆ?
ವಲಯ ಸೂಚ್ಯಂಕದ ಬಗ್ಗೆ ಹೇಳುವುದಾದರೆ, ಇಂದು ಎಲ್ಲಾ ವಲಯಗಳು ಹಸಿರು ನಿಶಾನೆಯಲ್ಲಿ ಅಂತ್ಯ ಕಂಡಿವೆ ಬ್ಯಾಂಕ್ ನಿಫ್ಟಿ, ಆಟೋ, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಮೀಡಿಯಾ, ಮೆಟಲ್, ಪಿಎಸ್‌ಯು ಬ್ಯಾಂಕ್, ಖಾಸಗಿ ಬ್ಯಾಂಕ್, ರಿಯಾಲ್ಟಿ, ಹೆಲ್ತ್‌ಕೇರ್, ಕನ್ಸ್ಯೂಮರ್ ಗೂಡ್ಸ್ ಮತ್ತು ತೈಲ ಹಾಗೂ ಅನಿಲ ವಲಯಗಳಲ್ಲಿ ಉತ್ತಮ ಖರೀದಿ ಕಂಡುಬಂದಿದೆ.

ಇದನ್ನೂ ಓದಿ-RBI Repo Rate! ದುಬಾರಿಯಾಗಲಿದೆಯಾ ಸಾಲ? ಮೋರ್ಗಾನ್ ಸ್ಟಾನ್ಲಿ ಭವಿಷ್ಯವಾಣಿ

ಜಾಗತಿಕ ಮಾರುಕಟ್ಟೆಯ ಸ್ಥಿತಿ ಹೇಗಿತ್ತು?
ಫೆಡರಲ್ ರಿಸರ್ವ್‌ನ ಸಭೆಗೂ ಮುನ್ನ, ಯುಎಸ್ ಮಾರುಕಟ್ಟೆಯಲ್ಲಿ ಎರಡು ದಿನಗಳವರೆಗೆ ಮುಂದುವರೆದಿದ್ದ ಕುಸಿತಕ್ಕೆ ಇಂದು ಬ್ರೇಕ್ ಬಿದ್ದಿದ್ದು, ಅದು ದಿನದ ಗರಿಷ್ಠ ಮಟ್ಟದಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಡೌ ಜೋನ್ಸ್ 197 ಪಾಯಿಂಟ್‌ಗಳ ಏರಿಕೆ ಕಂಡು 31,020 ಕ್ಕೆ ತಲುಪಿದರೆ, ನಾಸ್ಡಾಕ್ 87 ಪಾಯಿಂಟ್‌ಗಳ ಗಳಿಕೆ ಮಾಡಿ 11,535 ಮಟ್ಟವನ್ನು ತಲುಪಿದೆ. ಅಮೇರಿಕಾದ ಮಾರುಕಟ್ಟೆ ಹಸಿರು ನಿಶಾನೆಯಲ್ಲಿ ತನ್ನ ವಹಿವಾಟು ಮಾಡಿದ ಕಾರಣ ಅದರ ಪರಿಣಾಮ ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಗೋಚರಿಸಿದೆ. ಎಸ್‌ಜಿಎಕ್ಸ್ ನಿಫ್ಟಿ 130 ಅಂಕಗಳ ಏರಿಕೆಯೊಂದಿಗೆ 17,750 ಸಮೀಪಕ್ಕೆ ತನ್ನ ವಹಿವಾಟು ನಡೆಸುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News