7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಪುನಃ ಸಿಗಲಿದೆ ಹಳೆ ಪೆನ್ಷನ್ ಲಾಭ, ಸರ್ಕಾರದ ಅದ್ಭುತ ಪ್ಲಾನ್ ಇಲ್ಲಿದೆ
7th Pay Commission Latest News - ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. ಹೌದು, ಕೇಂದ್ರ ಸರ್ಕಾರಿ ನೌಕರರಿಗೆ ಪುನಃ ಹಳೆ ಪಿಂಚಣಿ ಯೋಜನೆಯ ಲಾಭ ಸಿಗುವ ನಿರೀಕ್ಷೆ ಇದ್ದು, ಸರ್ಕಾರ ಇದಕ್ಕಾಗಿ ಯೋಜನೆ ರೂಪಿಸುತ್ತಿದೆ. ಹಾಗಾದರೆ ಬನ್ನಿ ಹಳೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಏನು ಸಿದ್ಧತೆ ನಡೆಸುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.
7th Pay Commission: ಸರ್ಕಾರಿ ನೌಕರರ ಪಾಲಿಗೆ ಮತ್ತೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೌಕರರಿಗೆ ಮತ್ತೆ ಸಂತಸದ ಸುದ್ದಿ ಸಿಗುವ ನಿರೀಕ್ಷೆ ಇದೆ. ಹೌದು, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಓಲ್ಡ್ ಪೆನ್ಷನ್ ಸ್ಕೀಮ್ (ಹಳೆ ಪಿಂಚಣಿ ಯೋಜನೆ) ನ ಲಾಭ ನೀಡಬಹುದು ಎನ್ನಲಾಗಿದೆ. ದೀರ್ಘ ಕಾಲದಿಂದ ಸರ್ಕಾರಿ ನೌಕರರೂ ಕೂಡ ಹಳೆ ಪೆನ್ಷನ್ ಯೋಜನೆಯನ್ನು ಪುನಃ ಜಾರಿಗೊಳಿಸುವಂತೆ ಬೇಡಿಕೆಯನ್ನು ಇಡುತ್ತಿದ್ದಾರೆ. ಹೊಸ ಪೆನ್ಷನ್ ಯೋಜನೆಯಲ್ಲಿ ಲಾಭಗಳು ಕಡಿಮೆ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಿರುವಾಗ ನೌಕರರು ಹಳೆ ಪೆನ್ಷನ್ ಯೋಜನೆಯ ಪುನಃ ಜಾರಿಗಾಗಿ ಕಾಯುತ್ತಿದ್ದಾರೆ.
ನಿರ್ಧಾರ ಯಾವಾಗ?
ಕೇಂದ್ರ ಸರ್ಕಾರ ಪುನಃ ಹಳೆ ಪೆನ್ಷನ್ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಯಾವ ಸರ್ಕಾರಿ ನೌಕರರ ಭರ್ತಿ ಪ್ರಕ್ರಿಯೆಗಾಗಿ ಡಿಸೆಂಬರ್ 31, 2003ಕ್ಕೆ ಅಥವಾ ಅದಕ್ಕಿಂತಲೂ ಮುಂಚೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆಯೋ, ಆ ನೌಕರರಿಗೆ ಇದರ ಲಾಭ ಸಿಗಲಿದೆ ಎನ್ನಲಾಗಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವರು ಮತ್ತು ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರ ಪ್ರಕಾರ, ಕಾನೂನು ಸಚಿವಾಲಯದ ಪ್ರತಿಕ್ರಿಯೆಯ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-PM Kisan 11ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ
ಯಾವ ನೌಕರರಿಗೆ ಇದರ ಲಾಭ ಸಿಗಲಿದೆ?
ಈ ಕುರಿತು ಮಾತನಾಡಿರುವ ಕೇಂದ್ರ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್, 'ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ, ಕೇಂದ್ರ ಸರ್ಕಾರವು ಈ ವಿಷಯವನ್ನು ಕಾನೂನು ಸಚಿವಾಲಯದ ಮುಂದೆ ಇರಿಸಿದೆ. ಹಣಕಾಸು ಸೇವೆಗಳ ಇಲಾಖೆ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoP&PW) ಜನವರಿ 01, 2004 ರಂದು ಅಥವಾ ಮೊದಲು ಯಾರ ನೇಮಕಾತಿಗಾಗಿ ಜಾಹೀರಾತನ್ನು ಹೊರಡಿಸಲಾಗಿದೆಯೋ ಆ ಉದ್ಯೋಗಿಗಳನ್ನು NPS ವ್ಯಾಪ್ತಿಯಿಂದ ಹೊರಗಿಡುವ ಕುರಿತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲ ಒಂದು ವೇಳೆ ಅವರು ಅರ್ಹರಾಗಿದ್ದಾರೆ ಅವರನ್ನು ಹಳೆಯ ಪಿಂಚಣಿ ಅಡಿಯಲ್ಲಿ ಕವರ್ ಮಾಡಲಾಗುವುದು. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಪಿಂಚಣಿಯಲ್ಲಿ ದೊಡ್ಡ ಲಾಭ ಕಾಣಲು ಸಿಗಲಿದೆ' ಎಂದಿದ್ದಾರೆ.
ಇದನ್ನೂ ಓದಿ-Business Idea: SBI ಜೊತೆ ಕೈಜೋಡಿಸಿ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ
ಹಳೆ ಪಿಂಚಣಿ ಯೋಜನೆಯ ಲಾಭ ಯಾರಿಗೆ ಸಿಗುವುದಿಲ್ಲ?
ಈ ಕುರಿತು ಸಂಸತ್ತಿಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರಾಯ್, ಸೆಂಟ್ರಲ್ ಆರ್ಮ್ದ್ ಫೋರ್ಸಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹಳೆ ಪೆನ್ಷನ್ ಯೋಜನೆಯ ಲಾಭ ಸಿಗುವುದಿಲ್ಲ ಎಂದಿದ್ದಾರೆ. ಏಕೆಂದರೆ ಸೆಂಟ್ರಲ್ ಸಿವಿಲ್ ಸರ್ವಿಸೆಸ್ ಪೆನ್ಷನ್ ನಿಯಮಗಳು 1972ರ ಅಡಿ ಪ್ಯಾರಾಮಿಲಿಟರಿ ಸಿಬ್ಬಂದಿಗಳಿಗೆ ಪೆನ್ಷನ್ ಹಾಗೂ ಇತರ ಲಾಭಗಳು ಲಭಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.