Driving License ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಸರ್ಕಾರದ ನೂತನ ಮಾರ್ಗಸೂಚಿಗಳು ಇಲ್ಲಿವೆ

Driving License New Rules: ಒಂದು ವೇಳೆ ನೀವೂ ಕೂಡ ಡ್ರೈವಿಂಗ್ ಲೈಸನ್ಸ್ ಪಡೆಯಲು ಯೋಚಿಸುತ್ತಿದ್ದರೆ, ಈ ಮಹತ್ವದ ಸುದ್ದಿ ನಿಮಗಾಗಿ. ಹೌದು, ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಇದರಿಂದ ನಿಮ್ಮ ತಾಪತ್ರಯ ತಪ್ಪಲಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : May 29, 2022, 05:02 PM IST
  • ಒಂದು ವೇಳೆ ನೀವೂ ಕೂಡ ಡ್ರೈವಿಂಗ್ ಲೈಸನ್ಸ್ ಪಡೆಯಲು ಯೋಚಿಸಿತ್ತಿದ್ದೀರಾ?
  • ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ.
  • ಇದರಿಂದ ನಿಮ್ಮ ತಾಪತ್ರಯ ತಪ್ಪಲಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
Driving License ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಸರ್ಕಾರದ ನೂತನ ಮಾರ್ಗಸೂಚಿಗಳು ಇಲ್ಲಿವೆ title=
Driving License New Rules

Driving License New Rules: ವಾಹನ ಚಾಲಕರಿಗೊಂದು ಮಹತ್ವದ ಸುದ್ದಿ. ಸರ್ಕಾರ ನಿಮಗೆ ನಿಯಮಗಳಲ್ಲಿ ಸಡಿಲಿಕೆಯನ್ನು ನೀಡಲಿದ್ದು, ನಿಮ್ಮ ದೊಡ್ಡ ತಾಪತ್ರಯ ತಪ್ಪಲಿದೆ. ಹೌದು, ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ಮುಂದೆ ನೀವು ರಿಜಿನಲ್ ಟ್ರಾನ್ಸ್ಪೋರ್ಟ್ ಆಫೀಸ್ ಅಥವಾ ಆರ್.ಟಿ. ಓ ಕಚೇರಿಗೆ ಪದೇ ಪದೇ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸನ್ಸ್ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಿದೆ. ಹಾಗಾದರೆ ಬನ್ನಿ ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳೋಣ. 

ಡ್ರೈವಿಂಗ್ ಟೆಸ್ಟ್ ನೀಡುವ ಅವಶ್ಯಕತೆ ಇಲ್ಲ
ಕೇಂದ್ರ ಸರ್ಕಾರದ
ವತಿಯಿಂದ ಡ್ರೈವಿಂಗ್ ಲೈಸನ್ಸ್ ಗಳ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ, ಇನ್ಮುಂದೆ ನಿಮಗೆ ಡಿಎಲ್ ಗಾಗಿ ಆರ್.ಟಿ.ಓ ಕಚೇರಿಯಲ್ಲಿ ಡ್ರೈವಿಂಗ್ ಟೆಸ್ಟ್ ನೀಡುವ ಅವಶ್ಯಕತೆ ಇಲ್ಲ. ಈ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕುರಿತು ಅಧಿಸೂಚನೆ ಜಾರಿಗೊಳಿಸಿದ್ದು, ಈ ನಿಯಮಗಳು ಜಾರಿಗೆ ಕೂಡ ಬಂದಿವೆ.  ಅಷ್ಟೇ ಅಲ್ಲ, ಇದರಿಂದ ಡ್ರೈವಿಂಗ್ ಲೈಸನ್ಸ್ ಪಡೆಯಲು ಆರ್‌ಟಿಒ ವೇಟಿಂಗ್ ಲಿಸ್ಟ್‌ನಲ್ಲಿ ಕಾಯುತ್ತಿರುವವರಿಗೂ  ಕೂಡ ಇದರಿಂದ ಭಾರಿ ನೆಮ್ಮದಿ ದೊರೆತಂತಾಗಿದೆ. 

ಡ್ರೈವಿಂಗ್ ಸ್ಕೂಲ್ ನಿಂದ ತರಬೇತಿ ಪಡೆಯಬೇಕು
ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಇನ್ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ನಲ್ಲಿ ಪರೀಕ್ಷೆಗಾಗಿ ಕಾಯಬೇಕಾಗಿಲ್ಲ. ನೀವು ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಯಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಡ್ರೈವಿಂಗ್ ಸ್ಕೂಲ್ ನಲ್ಲಿ ತರಬೇತಿ ಪಡೆದ ನಂತರ ಅಲ್ಲಿ ತೆಗೆದುಕೊಳ್ಳಲಾಗುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಬಳಿಕ ಅರ್ಜಿದಾರರಿಗೆ ಶಾಲೆಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ, ಅರ್ಜಿದಾರರ ಚಾಲನಾ ಪರವಾನಗಿಯನ್ನು ನೀಡಲಾಗುವುದು ಎನ್ನಲಾಗಿದೆ. 

ಹೊಸ ನಿಯಮಗಳು ಕೆಳಗಿನಂತಿವೆ
ಟ್ರೇನಿಂಗ್ ಸೆಂಟರ್ ಗಳಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ನೂತನ ಮಾರ್ಗಸೂಚಿಗಳು ಹಾಗೂ ಷರತ್ತುಗಳನ್ನು ಬಿಡುಗಡೆ ಮಾಡಿದೆ.. ಇವುಗಳಲ್ಲಿ ಟ್ರೇನಿಂಗ್ ಸೆಂಟರ್ ಗಳ ಕ್ಷೇತ್ರಫಲದಿಂದ ಹಿಡಿದು ತರಬೇತಿ ನೀಡುವವರ ವಿದ್ಯಾರ್ಹತೆ ಕುರಿತಾದ ನಿಯಮಗಳಿವೆ. ಹಾಗಾದರೆ ಬನ್ನಿ ಅವುಗಳನ್ನು ಒಂದೊಂದಾಗಿ ಅರ್ಥೈಸಿಕೊಳ್ಳೋಣ 

>> ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು.

>> ಮಧ್ಯಮ ಮತ್ತು ಭಾರೀ ಪ್ರಯಾಣಿಕ ಸರಕುಗಳ ವಾಹನಗಳು ಅಥವಾ ತರಬೇತಿ ಕೇಂದ್ರಗಳಿಗೆ ಎರಡು ಎಕರೆ ಭೂಮಿ ಅಗತ್ಯವಿರುತ್ತದೆ.

>> ತರಬೇತುದಾರರು ಕನಿಷ್ಠ 12 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು, ಸಂಚಾರ ನಿಯಮಗಳನ್ನು ಚೆನ್ನಾಗಿ ಅರಿತಿರಬೇಕು.

>> ಸಚಿವಾಲಯವು ಇದಕ್ಕಾಗಿ ಬೋಧನಾ ಪಠ್ಯಕ್ರಮವನ್ನು ಸಹ ನಿಗದಿಪಡಿಸಿದೆ. ಇದರ ಅಡಿಯಲ್ಲಿ, ಲಘು ಮೋಟಾರು ವಾಹನಗಳನ್ನು ಚಾಲನೆ ಮಾಡಲು, ಕೋರ್ಸ್‌ನ ಅವಧಿಯು ಗರಿಷ್ಠ 4 ವಾರಗಳದ್ದಾಗಿದ್ದು ಮತ್ತು ಇದು ಒಟ್ಟು 29 ಗಂಟೆಗಳ ತರಬೇತಿ ಅವಧಿ ಒಳಗೊಂಡಿರಬೇಕು.

>> ಚಾಲನಾ ಕೇಂದ್ರಗಳ ಪಠ್ಯಕ್ರಮವನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ. ಸಿದ್ಧಾಂತ (ಥಿಯರಿ) ಮತ್ತು ಪ್ರಾಯೋಗಿಕ (ಪ್ರಾಕ್ಟಿಕಲ್).

ಇದನ್ನೂ ಓದಿ-Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ, ಈಗಲೇ ತಿಳಿದುಕೊಳ್ಳಿ

>> ಜನರು ಮೂಲಭೂತ ರಸ್ತೆಗಳು, ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ನಗರದ ರಸ್ತೆಗಳು, ಹಿಮ್ಮುಖ ಮತ್ತು ಪಾರ್ಕಿಂಗ್, ಹತ್ತುವಿಕೆ ಮತ್ತು ಇಳಿಜಾರಿನ ಚಾಲನೆ ಮತ್ತು ಮುಂತಾದವುಗಳಲ್ಲಿ ಚಾಲನೆ ಮಾಡಲು ಕಲಿಯಲು 21 ಗಂಟೆಗಳ ಕಾಲ ತರಬೇತಿ ಪಡೆಯಬೇಕು.

ಇದನ್ನೂ ಓದಿ-JSSC 2022: ಪಿಯುಸಿ ತೇರ್ಗಡೆ ಹೊಂದಿದ ಯುವಕರಿಗೆ ಉದ್ಯೋಗ ಪಡೆಯಲು ಇದೇ ಸುವರ್ಣಾವಕಾಶ!

>> ಥಿಯರಿ ಭಾಗವು ಸಂಪೂರ್ಣ ಕೋರ್ಸ್‌ನ 8 ಗಂಟೆಗಳ ಅವಧಿಯನ್ನು ಒಳಗೊಂಡಿರುತ್ತದೆ, ಇದು ರಸ್ತೆ ಶಿಷ್ಟಾಚಾರ, ರಸ್ತೆ ಕ್ರೋಧ, ಸಂಚಾರ ಶಿಕ್ಷಣ, ಅಪಘಾತಗಳ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಪ್ರಥಮ ಚಿಕಿತ್ಸೆ ಮತ್ತು ಚಾಲನೆ ಇಂಧನ ದಕ್ಷತೆಯನ್ನು ಒಳಗೊಂಡಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News