ನವದೆಹಲಿ: 7th Pay Commission Latest News - ಹಬ್ಬದ ಸೀಸನ್ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೀಪಾವಳಿ  (Diwali 2021) ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ದೊಡ್ಡ ಉಡುಗೊರೆಗಳು  (7th Pay Commission) ಸಿಗಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.  ಇದರಲ್ಲಿ ಮೊದಲನೆಯದಾಗಿ ಸರ್ಕಾರಿ ನೌಕರರ (Central Government Employees) ತುಟ್ಟಿಭತ್ಯೆ (DA Hike)ಮತ್ತೆ ಶೇ.3 ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.  ಎರಡನೇ ಉಡುಗೊರೆ, ಡಿಎ ಅರಿಯರ್ (DR Hike) ಕುರಿತು ಸರ್ಕಾರದೊಂದಿಗೆ ನಡೆಯುತ್ತಿರುವ ಮಾತುಕತೆಯಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆ. ಮೂರನೇ ಉಡುಗೊರೆ ಭವಿಷ್ಯ ನಿಧಿ ಖಾತೆಗೆ ಸಂಬಂಧಿಸಿದೆ. ಅಂದರೆ, ದೀಪಾವಳಿ ಹಬ್ಬಕ್ಕೂ ಮುನ್ನವೇ ನೌಕರರ ಖಾತೆಗೆ ಪಿಎಫ್ ಬಡ್ಡಿದರ ಸೇರುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಮತ್ತೆ ಹೆಚ್ಚಾಗಲಿದೆ ತುಟ್ಟಿ ಭತ್ಯೆ
ಜುಲೈ 2021ರ ವರೆಗಿನ ತುಟ್ಟಿ ಭತ್ಯೆಯನ್ನು ಸರ್ಕಾರ ಇದುವರೆಗೆ ಪಾವತಿಸಿಲ್ಲ. ಆದರೆ ಜನವರಿಯಿಂದ ಮೇ 2021 ರವರೆಗಿನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICIP) ಅಂಕಿ ಅಂಶಗಳ ಪ್ರಕಾರ DA ಶೇ.3 ರಷ್ಟು ಏರಿಕೆಯಾಗಲಿದೆ ಎಂಬುದ ಸ್ಪಷ್ಟವಾಗುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.28ರಷ್ಟು ತುಟ್ಟಿಭತ್ಯೆ ಸಿಗುತ್ತಿದೆ. ಅಂದರೆ ಇದಕ್ಕೆ ಮತ್ತೆ ಶೇ.3 ರಷ್ಟು ಸೇರಿದರೆ, ನೌಕರರ ಒಟ್ಟು ತುಟ್ಟಿಭತ್ಯೆ ಶೇ.31ಕ್ಕೆ ಏರಿಕೆಯಾಗಲಿದೆ. ದೀಪಾವಳಿಯ ಆಸುಪಾಸಿನಲ್ಲಿ ಕೇಂದ್ರ ಸರ್ಕಾರ ಈ ತುಟ್ಟಿಭತ್ಯೆಯ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.


ಇದನ್ನೂ ಓದಿ-Great Destroyer Messile Test: ವಿನಾಶಕಾರಿ ಮಿಸೈಲ್ ತಯಾರಿಕೆಯಲ್ಲಿ ತೊಡಗಿರುವ ಚೀನಾದಿಂದ ಬಾಹ್ಯಾಕಾಶದಲ್ಲಿ ಮಹಾವಿನಾಶಕ ಮಿಸೈಲ್ ಪರೀಕ್ಷೆ!


DA ಬಾಕಿ ಚರ್ಚೆಯ ಕುರಿತು ನಿರ್ಧಾರ
ಕೊರೊನಾ ಕಾಲದಿಂದ ಬಾಕಿ ಉಳಿದಿರುವ 18 ತಿಂಗಳ ಅರಿಯರ್ ಪ್ರಕರಣ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತಲುಪಿದೆ. ಇದರ ಮೇಲೆ ಶೀಘ್ರದಲ್ಲಿಯೇ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ. ಇಂತಹುದರಲ್ಲಿ ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ತಮ್ಮ ಬಾಕಿ ಉಳಿದಿರುವ DA ಸಿಗುವ ನಿರೀಕ್ಷೆ ಇದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ಸಚಿವಾಲಯವು ಮೇ 2020 ರಲ್ಲಿ ಡಿಎ ಹೆಚ್ಚಳವನ್ನು 30 ಜೂನ್ 2021 ರವರೆಗೆ ನಿಲ್ಲಿಸಿತ್ತು ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Knowledge Story: ಎಲ್ಲಕ್ಕಿಂತ ಹೆಚ್ಚು ಕಾಲ ಬದುಕುತ್ತಾರಂತೆ ಈ ಪ್ರದೇಶದ ಜನರು, ನಮ್ಮ ರಾಜ್ಯ ಇದರಲ್ಲಿದೆಯಾ?


PF ಬಡ್ಡಿದರ ಸಿಗುವ ನಿರೀಕ್ಷೆ 
ನೌಕರರ ಭವಿಷ್ಯ ನಿಧಿ ಸಂಘಟನೆ ದೇಶಾದ್ಯಂತ ಇರುವ ತನ್ನ 6 ಕೋಟಿ ಚಂದಾದಾರರಿಗೆ ದೀಪಾವಳಿ ಹಬ್ಬಕ್ಕೂ ಮುನ್ನವೇ ಬಡ್ಡಿ ದರ ನೀಡುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರದಲ್ಲಿಯೇ ಪಿಎಫ್ ಖಾತೆದಾರರ ಬ್ಯಾಂಕ್ ಖಾತೆಗೆ ಬಡ್ಡಿ ದರ ಪಾವತಿಯಾಗಲಿದೆ ಎಂದು ನೀಕ್ಷಿಸಲಾಗಿದೆ. 


ಇದನ್ನೂ ಓದಿ-ದೇಶದ ಯಾವ ರಾಜ್ಯದ ಮುಖ್ಯಮಂತ್ರಿ ವೇತನ ಎಷ್ಟು? ಕರ್ನಾಟಕದ ಮುಖ್ಯಮಂತ್ರಿಗಳ ವೇತನ ಎಷ್ಟು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ