Great Destroyer Messile Test: ವಿನಾಶಕಾರಿ ಮಿಸೈಲ್ ತಯಾರಿಕೆಯಲ್ಲಿ ತೊಡಗಿರುವ ಚೀನಾದಿಂದ ಬಾಹ್ಯಾಕಾಶದಲ್ಲಿ ಮಹಾವಿನಾಶಕ ಮಿಸೈಲ್ ಪರೀಕ್ಷೆ!

Great Destroyer Messile Test - ವಿಶ್ವದ ಮೇಲೆಯೇ ತನ್ನ ಪಾರುಪತ್ಯ ಮೆರೆಯುವ ದುರಾಸೆ ಹಿನ್ನೆಲೆ  ಕುರುಡಾಗಿರುವ ಚೀನಾ (China) ಇದೀಗ ತನ್ನ ಪಾದಗಳನ್ನು ಬಾಹ್ಯಾಕಾಶದ ಕಡೆಗೆ ಚಾಚಲು ಆರಂಭಿಸಿದೆ. ಬಾಹ್ಯಾಕಾಶದಿಂದ ಚೀನಾ ಹೊಸ ಹೈಪರ್ಸಾನಿಕ್ ಕ್ಷಿಪಣಿಯನ್ನು (Hypersonic Missile) ಪರೀಕ್ಷಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ. 

Written by - Nitin Tabib | Last Updated : Oct 17, 2021, 11:52 AM IST
  • ವಿಶ್ವದ ಮೇಲೆ ಪಾರುಪತ್ಯ ಮೆರೆಯುವ ದುರಾಸೆ
  • ಚೀನಾದಿಂದ ಬಾಹ್ಮಯಾಕಾಶದಲ್ಲಿ ಮಹಾ ವಿನಾಶಕ ಹೈಪರ್ ಸಾನಿಕ್ ಮಿಸೈಲ್ ಪರೀಕ್ಷೆ!
  • ಈ ಕ್ಷಿಪಣಿಯನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ವ್ಯವಸ್ಥೆ ಇದುವರೆಗೂ ಯಾವ ದೇಶದ ಬಳಿ ಇಲ್ಲ.
Great Destroyer Messile Test: ವಿನಾಶಕಾರಿ ಮಿಸೈಲ್ ತಯಾರಿಕೆಯಲ್ಲಿ ತೊಡಗಿರುವ ಚೀನಾದಿಂದ ಬಾಹ್ಯಾಕಾಶದಲ್ಲಿ ಮಹಾವಿನಾಶಕ ಮಿಸೈಲ್ ಪರೀಕ್ಷೆ! title=
Great Destroyer Messile Test (Representational Image)

Great Destroyer Messile Test - ವಿಶ್ವದ ಮೇಲೆಯೇ ತನ್ನ ಪಾರುಪತ್ಯ ಮೆರೆಯುವ ದುರಾಸೆ ಹಿನ್ನೆಲೆ  ಕುರುಡಾಗಿರುವ ಚೀನಾ (China) ಇದೀಗ ತನ್ನ ಪಾದಗಳನ್ನು ಬಾಹ್ಯಾಕಾಶದ ಕಡೆಗೆ ಚಾಚಲು ಆರಂಭಿಸಿದೆ. ಬಾಹ್ಯಾಕಾಶದಿಂದ ಚೀನಾ ಹೊಸ ಹೈಪರ್ಸಾನಿಕ್ ಕ್ಷಿಪಣಿಯನ್ನು (Hypersonic Missile) ಪರೀಕ್ಷಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ. ಈ ವರ್ಷದ ಆಗಸ್ಟ್‌ನಲ್ಲಿ ಚೀನಾ ಈ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ಹಲವು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ಪರಮಾಣು ಸಾಮರ್ಥ್ಯ ಹೊಂದಿರುವ (Nuclear Capabe Hypersonic Missile)  ಕ್ಷಿಪಣಿಯನ್ನು ಪರೀಕ್ಷಿಸಲಾಗಿದ್ದು. ಈ ಕ್ಷಿಪಣಿಯನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಪರಿಭ್ರಮಿಸಿದೆ. ಆದರೆ ಚೀನಾದ ಈ  ಪರೀಕ್ಷೆಯು ತನ್ನ ನಿಗದಿತ ಗುರಿಯನ್ನು ತಲುಪಲು 32 ಕಿ.ಮೀ ಅಂತರದಿಂದ ವಿಫಲವಾಗಿದೆ. 

ಹೈಪರ್ಸಾನಿಕ್ ಕ್ಷಿಪಣಿಗಳನ್ನು ತಯಾರಿಸುವಲ್ಲಿ ಚೀನಾದ ಪ್ರಗತಿಯು ಯುಎಸ್ ಗುಪ್ತಚರ ಸಂಸ್ಥೆಗಳನ್ನು (US Intellegence Agencies) ಅಚ್ಚರಿಗೊಳಿಸಿದೆ ಎಂದು ವರದಿ ಹೇಳಿದೆ. ಚೀನಾ ಹೊರತುಪಡಿಸಿ, ಅಮೆರಿಕ, ರಷ್ಯಾ ಮತ್ತು ಕನಿಷ್ಠ ಐದು ದೇಶಗಳು ಪ್ರಸ್ತುತ ಹೈಪರ್ಸಾನಿಕ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ.

ಹೈಪರ್ಸಾನಿಕ್ ಕ್ಷಿಪಣಿಗಳು ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ಪರಮಾಣು ಸಿಡಿತಲೆಗಳನ್ನು ಒಯ್ಯಬಲ್ಲವು. ಹೈಪರ್ಸಾನಿಕ್ ಕ್ಷಿಪಣಿಗಳು ಶಬ್ದದ ಐದು ಪಟ್ಟು ವೇಗದಲ್ಲಿ ಚಲಿಸುತ್ತವೆ. ಆದರೆ, ಇವೆರಡರ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು (Ballestic Missiles) ಬಾಹ್ಯಾಕಾಶದಲ್ಲಿ ಎತ್ತರಕ್ಕೆ ಹಾರಬಲ್ಲವು ಆದರೆ ಹೈಪರ್ಸಾನಿಕ್ ಕ್ಷಿಪಣಿಗಳು ವಾತಾವರಣದಲ್ಲಿ ತುಂಬಾ ಕಡಿಮೆ ಪ್ರಯಾಣಿಸಬಹುದು ಮತ್ತು ಅವುಗಳ ಉದ್ದೇಶಿತ ಗುರಿಗಳನ್ನು ಹೆಚ್ಚು ವೇಗವಾಗಿ ತಲುಪಬಲ್ಲವು. 

ಇದನ್ನೂ ಓದಿ-Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?

ಹೈಪರ್ಸಾನಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ಮತ್ತು ನಾಶಮಾಡಲು ಕಷ್ಟವಾಗುತ್ತದೆ. ಯುಎಸ್ ನಂತಹ ದೇಶಗಳು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರೂ, ಹೈಪರ್ಸಾನಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ವ್ಯವಸ್ಥೆಗಳನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ.

ಇದನ್ನೂ ಓದಿ-China Launched UUV: ಕೊರೊನಾ ಕಾಲದಲ್ಲಿಯೂ ಕೂಡ ಕರಾಮತ್ತು ಮೆರೆದ ಚೀನಾ, ಏನ್ ಮಾಡಿದೆ ಗೊತ್ತಾ?

ಚೀನಾದ ಈ ಪರೀಕ್ಷೆಯು ಅಮೆರಿಕದೊಂದಿಗಿನ ಉದ್ವಿಗ್ನ ಸಂಬಂಧಗಳ (China-US Relations) ಹಂತದಲ್ಲಿ ಸಾಗುತ್ತಿರುವುದು ಇಲ್ಲಿ ಗಮನಾರ್ಹ ಮತ್ತು ಬೀಜಿಂಗ್ ತೈವಾನ್ ಬಳಿ ಕೂಡ ತನ್ನ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದೆ.

ಇದನ್ನೂ ಓದಿ-India-China: ಚೀನಾಕ್ಕೆ ಪಾಠ ಕಲಿಸಲು ಹಸಿಮಾರಾ ಏರ್‌ಬೇಸ್‌ನಲ್ಲಿ ರಫೇಲ್ ನಿಯೋಜಿಸಿದ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News