7th Pay Commission: ಜುಲೈ 1 ರಿಂದ ಸರ್ಕಾರಿ ನೌಕರರ ವೇತನದಲ್ಲಿ ರೂ.32,400 ಹೆಚ್ಚಳ! ಹೇಗೆ ಇಲ್ಲಿ ತಿಳಿಯಿರಿ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಎರಡು ವರ್ಷಗಳ DA ಲಾಭ ಏಕಕಾಲಕ್ಕೆ ಸಿಗುವ ಸಾಧ್ಯತೆ ಇದೆ. 2020 ರ ಜನವರಿಯಲ್ಲಿ ಕೇಂದ್ರ ನೌಕರರ DA ಅನ್ನು 4% ಹೆಚ್ಚಿಸಲಾಗಿದೆ. ಇದರ ನಂತರ, ದ್ವಿತೀಯಾರ್ಧದಲ್ಲಿ ಅಂದರೆ ಜೂನ್ 2020 ರಲ್ಲಿ 3% ರಷ್ಟು ಹೆಚ್ಚಿಸಲಾಗಿದೆ. 2021 ರ ಜನವರಿಯಲ್ಲಿ 4% ಹೆಚ್ಚಾಗಿದೆ. ಇದರೊಂದಿಗೆ ಇದು ಒಟ್ಟು 28% ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳನ್ನು ಪಾವತಿಸಲಾಗಿಲ್ಲ.
ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಂತಸದ ಸುದ್ದಿಯೊಂದು ಸಿಗುವ ಸಾದ್ಯತೆ ಇದೆ. ಜುಲೈ 1 ರಂದು ಕೇಂದ್ರ ಸರ್ಕಾರ, ಸರ್ಕಾರಿ ನೌಕರರ DA ಪಾವತಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ, ಸರ್ಕಾರಿ ನೌಕರರ ಖಾತೆಗೆ ಬಂಪರ್ ಹಣ ಹರಿದುಬರಲಿದೆ. ಜುಲೈ ತಿಂಗಳಿನಲ್ಲಿ ಸರ್ಕಾರ ಕಳೆದ ಮೂರು ಕಂತುಗಳ DA ಪಾವತಿಸುವ ಸಾಧ್ಯತೆ ಇದೆ. ಪ್ರಸ್ತುತ DA ಸುಮಾರು ಶೇ.17ರಷ್ಟಿದೆ. ಇದು ಶೇ. 28ಕ್ಕೆ ಏರಿಕೆಯಾಗಲಿದೆ. ತುಟ್ಟಿಭತ್ಯೆ ನೇರವಾಗಿ ಸರ್ಕಾರಿ ನೌಕರರ ವೇತನ ಹೆಚ್ಚಿಸುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಎರಡು ವರ್ಷಗಳ DA ಲಾಭ ಏಕಕಾಲಕ್ಕೆ ಸಿಗುವ ಸಾಧ್ಯತೆ ಇದೆ. 2020 ರ ಜನವರಿಯಲ್ಲಿ ಕೇಂದ್ರ ನೌಕರರ DA ಅನ್ನು 4% ಹೆಚ್ಚಿಸಲಾಗಿದೆ. ಇದರ ನಂತರ, ದ್ವಿತೀಯಾರ್ಧದಲ್ಲಿ ಅಂದರೆ ಜೂನ್ 2020 ರಲ್ಲಿ 3% ರಷ್ಟು ಹೆಚ್ಚಿಸಲಾಗಿದೆ. 2021 ರ ಜನವರಿಯಲ್ಲಿ 4% ಹೆಚ್ಚಾಗಿದೆ. ಇದರೊಂದಿಗೆ ಇದು ಒಟ್ಟು 28% ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳನ್ನು ಪಾವತಿಸಲಾಗಿಲ್ಲ.
ವೇತನದಲ್ಲಿ ನೇರವಾಗಿ 32 ಸಾವಿರ ಹೆಚ್ಚಾಗುವ ಸಾಧ್ಯತೆ
ಕೇಂದ್ರ ಸರ್ಕಾರದ ಪೆ ಮ್ಯಾಟ್ರಿಕ್ಸ್ (7th Pay Commission Matrix) ಕುರಿತು ಹೇಳುವುದಾದರೆ, ಕನಿಷ್ಠ ವೇತನ ರೂ.18 ಸಾವಿರಗಳಷ್ಟಿದೆ. ಇದರಲ್ಲಿ ಶೇ.15 ತುಟ್ಟಿ ಭತ್ಯೆ ಸೇರುವ ಸಾದ್ಯತೆ ಇದೆ. ಹೀಗಿರುವಾಗ ವೇತನದಲ್ಲಿ ಪ್ರತಿತಿಂಗಳು ರೂ.2700 ಸೇರುವ ನಿರೀಕ್ಷೆ ಇದೆ. ಇದರರ್ಥ ವಾರ್ಷಿಕವಾಗಿ ರೂ.32,400 ಗಳು DA ರೂಪದಲ್ಲಿ ನಿಮ್ಮ ವೇತನಕ್ಕೆ ಸೇರ್ಪಡೆಯಾಗಲಿವೆ.
ಇದನ್ನೂ ಓದಿ- ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ ? ಐದೇ ನಿಮಿಷದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು e-Pan
ತುಟ್ಟಿಭತ್ಯೆ ಘೋಷಣೆ ಸಾಧ್ಯತೆ
ಈ ಕುರಿತಾದ ವರದಿಗಳ ಬಗ್ಗೆ ಹೇಳುವುದಾದರೆ, ಜೂನ್ 2021ರ ತುಟ್ಟಿಭತ್ಯೆಯ ಘೋಷಣೆ ಕೂಡ ಶೀಘ್ರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಜೂನ್ 2021ರಲ್ಲಿ ತುಟ್ಟಿಭತ್ಯೆ ಶೇ.4 ರಷ್ಟು ಏರಿಕೆಯಾಗಿ, ಪಾವತಿ ಕೂಡ ಆಗಲಿದೆ ಎನ್ನಲಾಗಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.32 ರಷ್ಟಾಗಲಿದೆ.
ಇದನ್ನೂ ಓದಿ-SBI KAVACH Personal Loan : ಈ ಲೋನ್ ಗೆ ಯಾರು, ಹೇಗೆ ಅಪ್ಲೈ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
ಸದ್ಯದ ಪರಿಸ್ಥಿತಿ ಏನು?
ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರ್ಕಾರ ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ. ಮೂಲವೇತನವನ್ನು ಆಧಾರವಾಗಿಟ್ಟುಕೊಂಡು ಇದನ್ನು ಲೆಕ್ಕ ಹಾಕಲಾಗುತ್ತದೆ. 020 ರ ಜನವರಿಯಲ್ಲಿ ಕೇಂದ್ರ ನೌಕರರ DA ಅನ್ನು 4% ಹೆಚ್ಚಿಸಲಾಗಿದೆ. ಇದರ ನಂತರ, ದ್ವಿತೀಯಾರ್ಧದಲ್ಲಿ ಅಂದರೆ ಜೂನ್ 2020 ರಲ್ಲಿ 3% ರಷ್ಟು ಹೆಚ್ಚಿಸಲಾಗಿದೆ. 2021 ರ ಜನವರಿಯಲ್ಲಿ 4% ಹೆಚ್ಚಾಗಿದೆ. ಇದರೊಂದಿಗೆ ಇದು ಒಟ್ಟು 28% ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳನ್ನು ಪಾವತಿಸಲಾಗಿಲ್ಲ. ಸದ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು DA (Dearness Allowance) ಸಿಗುತ್ತಿದೆ. ಕೊವಿಡ್-19 ಪರಿಸ್ಥಿತಿಯ ಹಿನ್ನೆಲೆ ಸರ್ಕಾರ ಜನವರಿ 1, 2020 ರಿಂದ ಜುಲೈ 1,2021ರವರೆಗೆ ಸರ್ಕಾರಿ ನೌಕರರ DA ಫ್ರೀಜ್ ಮಾಡಿದೆ.
ಇದನ್ನೂ ಓದಿ-ITR: Form 16 ಇಲ್ಲದೆಯೂ ಕೂಡ IT Return ದಾಖಲಿಸಬಹುದು, ಇಲ್ಲಿದೆ ವಿಧಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.