ITR: Form 16 ಇಲ್ಲದೆಯೂ ಕೂಡ IT Return ದಾಖಲಿಸಬಹುದು, ಇಲ್ಲಿದೆ ವಿಧಾನITR: Form 16 ಇಲ್ಲದೆಯೂ ಕೂಡ IT Return ದಾಖಲಿಸಬಹುದು, ಇಲ್ಲಿದೆ ವಿಧಾನ

Income Tax Return: ನೌಕರವರ್ಗದ ಜನರು ಪ್ರತಿವರ್ಷ IT ರಿಟರ್ನ್ ದಾಖಲಿಸಬೇಕು. ರಿಟರ್ನ್ ದಾಖಲಿಸಲು ಫಾರ್ಮ್ 16 ಅತ್ಯಾವಶ್ಯಕ. ಯಾವುದೇ ಒಂದು ಕಾರಣದಿಂದ ಒಂದು ವೇಳೆ ನಿಮಗೆ ಫಾರ್ಮ್ 16 ಇನ್ನೂ ಸಿಕ್ಕಿಲ್ಲ ಎಂದಾದರೂ ಕೂಡ ನೀವು IT Return ದಾಖಲಿಸಬಹುದು. 

Written by - Nitin Tabib | Last Updated : Jun 16, 2021, 06:22 PM IST
  • ನೌಕರವರ್ಗದ ಜನರು ಪ್ರತಿವರ್ಷ IT ರಿಟರ್ನ್ ದಾಖಲಿಸಬೇಕು.
  • ರಿಟರ್ನ್ ದಾಖಲಿಸಲು ಫಾರ್ಮ್ 16 ಅತ್ಯಾವಶ್ಯಕ.
  • ಒಂದು ವೇಳೆ ನಿಮಗೆ ಫಾರ್ಮ್ 16 ಇನ್ನೂ ಸಿಕ್ಕಿಲ್ಲ ಎಂದಾದರೂ ಕೂಡ ನೀವು IT Return ದಾಖಲಿಸಬಹುದು.
ITR: Form 16 ಇಲ್ಲದೆಯೂ ಕೂಡ IT Return ದಾಖಲಿಸಬಹುದು, ಇಲ್ಲಿದೆ ವಿಧಾನITR: Form 16 ಇಲ್ಲದೆಯೂ ಕೂಡ IT Return ದಾಖಲಿಸಬಹುದು, ಇಲ್ಲಿದೆ ವಿಧಾನ title=
How To File ITR without Form 16 (Representational Image)

ನವದೆಹಲಿ: ITR - ನಿಮ್ಮ ಫಾರ್ಮ್ 16 ನಿಮ್ಮ ತೆರಿಗೆಯ ದಾಖಲೆಯಾಗಿದೆ, ಕಂಪನಿ ನಿಮ್ಮ ಸಂಬಳದಿಂದ ಕಡಿತಗೊಳಿಸಿದ ತೆರಿಗೆಯ ದಾಖಲೆ ಅದಾಗಿರುತ್ತದೆ. ಇದನ್ನು ನಿಮ್ಮ ಸಂಬಳದ ಸಂಪೂರ್ಣ ವಿವರಗಳನ್ನು ಒಳಗೊಂಡಿರುವ ಕಾರಣ ಇದನ್ನು ಸಂಬಳ ಪ್ರಮಾಣಪತ್ರ ಅಥವಾ ಸಂಬಳ ಸ್ಲಿಪ್ ಎಂದೂ ಕರೆಯಲಾಗುತ್ತದೆ. ಯಾವುದೇ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಂಬಳ ಸ್ಲಿಪ್ ನೀಡುವುದು ಅವಶ್ಯಕ. ಫಾರ್ಮ್ 16 ಸಹ ನಿಮಗೆ ಮುಖ್ಯವಾಗಿದೆ ಏಕೆಂದರೆ ಇದು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಉಪಯುಕ್ತವಾದ ಪ್ರತಿಯೊಂದು ಅಗತ್ಯ ವಿವರಗಳನ್ನು ಒಳಗೊಂಡಿದೆ. ಆದರೆ, ಫಾರ್ಮ್ 16 ಇಲ್ಲದೆ ನೀವು ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಕೆಲವು ದಾಖಲೆಗಳನ್ನು ಸಿದ್ಧವಾಗಿಡಬೇಕು.

ಒಂದು ವೇಳೆ ನೀವು ಫಾರ್ಮ್ 16 ಇಲ್ಲದೆಯೇ ಸುಲಭವಾಗಿ ಟ್ಯಾಕ್ಸ್ ಪಾವತಿಸಬೇಕು ಎಂದಾದರೆ ನಿಮ್ಮ ಬಳಿ ಕೆಲ ದಾಖಲೆಗಳು ಇರಬೇಕು. ಉದಾಹರಣೆಗೆ ನಿಮ್ಮ ಪ್ರತಿ ತಿಂಗಳ ಸ್ಯಾಲರಿ ಸ್ಲಿಪ್, ಫಾರ್ಮ್ 26ಎಎಸ್ ಅಥವಾ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ (ಇದು ನಿಮಗೆ TRACES ನ ವೆಬ್ ಸೈಟ್ ನಲ್ಲಿ ಸಿಗಲಿದೆ) ಇದಲ್ಲದೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ನಿಮಗೆ ನಿಮ್ಮ ರೆಂಟಲ್ ಅಗ್ರಿಮೆಂಟ್ ಹಾಗೂ ಅನ್ಯ ದಾಖಲೆಗಳು ಕೂಡ ಬೇಕಾಗಲಿವೆ. ಇದರಿಂದ ನೀವು ಎಲ್ಲೆಲ್ಲಿ ಹೂಡಿಕೆ ಮಾಡಿರುವಿರಿ ಎಂಬುದನ್ನು ಹೇಳುವಿರಿ.

ಈ ಪ್ರಾಸೆಸ್ ಅನುಸರಿಸಿ
ಪೆ ಸ್ಲಿಪ್ ನಿಂದ ಗ್ರಾಸ್ ಸ್ಯಾಲರಿ ಕ್ಯಾಲ್ಕುಲೆಟ್ ಮಾಡಿ 

ಆರ್ಥಿಕ ವರ್ಷದಲ್ಲಿ ನಿಮಗೆ ದೊರೆತ ಇಲ್ಲಾ ಸ್ಯಾಲರಿ ಸ್ಲಿಪ್ ಗಳನ್ನು ಸಂಗ್ರಹಿಸಿ, ಏಕೆಂದರೆ ನಿಮ್ಮ ಸ್ಯಾಲರಿ ಸ್ಲಿಪ್ ನಲ್ಲಿ ನಿಮ್ಮ ವೇತನಕ್ಕೆ ಸಂಬಂಧಿಸಿದ ಅತ್ಯಾವಶ್ಯಕ ಮಾಹಿತಿ ಇರುತ್ತದೆ. ಒಂದು ವೇಳೆ ಮಧ್ಯದಲ್ಲಿಯೇ ನೀವು ಕಂಪನಿಯನ್ನು ಬದಲಾಯಿಸಿದ್ದರೆ, ಎರಡೂ ಕಂಪನಿಗಳ ಪೆ ಸ್ಲಿಪ್ ಮಾಹಿತಿ ಭರ್ತಿ ಮಾಡಿ. ಈ ಮಾಹಿತಿ ಭರ್ತಿ ಮಾಡುವಾಗ ನಿಮಗೆ ಸಿಗುವ ಸ್ಯಾಲರಿ ಪಿಎಫ್, ಟಿಡಿಎಸ್, ಪ್ರೊಫೆಷನಲ್ ಟ್ಯಾಕ್ಸ್ ಕಡಿತ ಒಳಗೊಂಡಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ತೆರಿಗೆ ಕಡಿತದ ಲೆಕ್ಕ ಹಾಕಿ
ತೆರಿಗೆ ಕಡಿತದ ಮಾಹಿತಿಗಾಗಿ ನೀವು ಫಾರ್ಮ್ 26 AS ಗಮನಿಸಿ. ಇದರಲ್ಲಿ ನಿಮ್ಮ ಕಂಪನಿಯ ಮೂಲಕ ನಿಮ್ಮ ವೇತನದಿಂದ ಕಡಿತಗೊಳಿಸಲಾಗಿರುವ ಸಂಪೂರ್ಣ ಮಾಹಿತಿ ಇರುತ್ತದೆ. ಒಂದು ವೇಳೆ ಕಡಿತಗೊಳಿಸಳಾಗಿರುವ ತೆರಿಗೆ ನಿಮ್ಮ ಸ್ಯಾಲರಿ ಸ್ಲಿಪ್ ನಲ್ಲಿ ಕಂಡರೆ, ನೀವು ಮುಂದಕ್ಕೆ ಪ್ರೋಸೀಡ್ ಮಾಡಬಹುದು. 

ಭತ್ಯೆಯ ಮೇಲೆ ಕ್ಲೇಮ್ ಮಾಡಿ
ಒಂದು ವೇಳೆ ನೀವೂ ಕೂಡ ನೌಕರ ವರ್ಗಕ್ಕೆ ಸೇರಿದವರಾಗಿದ್ದರೆ, ನಿಮಗೆ ಹಲವು ರೀತಿಯ ಅಲೌನ್ಸ್ ಗಳನ್ನು ನೀಡಲಾಗುತ್ತದೆ. ಅವುಗಳನ್ನು ಕ್ಲೇಮ್ ಮಾಡಿ ನೀವು ತೆರಿಗೆ ಉಳಿತಾಯ ಮಾಡಬಹುದು. ಉದಾಹರಣೆಗೆ HRA,LTA, ಶಿಕ್ಷಣ ಭತ್ಯೆ. ITR ಪಾವತಿಸುವಾಗ ಇವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಳಕೆ ಮಾಡಿ.

ಚಾಪ್ಟರ್ 6-A ಕಡಿತಗಳನ್ನು ಲೆಕ್ಕಹಾಕಿ 
ಸೆಕ್ಷನ್ 80 ಅಡಿ ಬರುವ ಹಲವು ಹೂಡಿಕೆಗಳಿವೆ. ಈ ಯೋಜನೆಗಳ ಪ್ರಕಾರ, ನೀವು ಮಾಡಿರುವ ಹೂಡಿಕೆಗಳ ಮೇಲೆ 1,50, 000 ವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು.

ತೆರಿಗೆ ಪಾವತಿಸಬೇಕಾದ ಒಟ್ಟು ಆದಾಯವನ್ನು ಲೆಕ್ಕ ಹಾಕಿ
ಮೇಲೆ ನೀಡಲಾಗಿರುವ ಎಲ್ಲ ಪ್ರೋಸೆಸ್ ಅನ್ನು ಪೂರ್ಣಗೊಳಿಸಿದ ಬಳಿಕ ನೀವು ತೆರಿಗೆ ಪಾವತಿಸಬೇಕಾದ ಒಟ್ಟು ಆದಾಯವನ್ನು ಲೆಕ್ಕಹಾಕಿ. ಇದಕ್ಕಾಗಿ ನೀವು ನಿಮ್ಮ ಒಟ್ಟು ಆದಾಯವನ್ನು ಒಟ್ಟು ಕಡಿತಗೊಳಿಸಲಾಗಿರುವ ಹಣದಿಂದ ಕಡಿತಗೊಳಿಸಿ. ಕೊನೆಗೆ ನಿಮ್ಮ ಮುಂದೆ ಬರುವ ಅಂಕಿ ಅಂದರೆ ನಿಮ್ಮ ತೆರಿಗೆ ಪಾವತಿಸಬೇಕಾದ ಒಟ್ಟು ಆದಾಯ ಇರಲಿದೆ.

ಈಗ ಎಷ್ಟು ತೆರಿಗೆ ಬೀಳಲಿದೆ ಲೆಕ್ಕ ಹಾಕಿ
ಇದೀಗ ನಿಮ್ಮ ಮುಂದೆ ನಿಮ್ಮ ಟ್ಯಾಕ್ಸೇಬಲ್ ವೇತನ ಇರಲಿದೆ. ಈಗ ನೀವು ಇನ್ಕಮ್ ಟ್ಯಾಕ್ಸ್ ಸ್ಲಾಬ್ ರೇಟ್ ಗಳ ಪ್ರಕಾರ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ಆದಾಯಕ್ಕೆ ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಲೆಕ್ಕಹಾಕಬಹುದು.

ಇದನ್ನೂ ಓದಿ - Gold-Silver Rate : ಚಿನ್ನದ ಬೆಲೆಯಲ್ಲಿ ಇಳಿಕೆ : ಒಂದು ತಿಂಗಳ ಕನಿಷ್ಠ ಮಟ್ಟದ ಸಮೀಪ ಬಂಗಾರದ ಬೆಲೆ!

ಅಗತ್ಯ ಬಿದ್ದರೆ ಮಾತ್ರ ಹೆಚ್ಚುವರಿ ಟ್ಯಾಕ್ಸ್ ಪಾವತಿಸಿ
ಒಂದು ವೇಳೆ ಲೆಕ್ಕಾಚಾರದಲ್ಲಿ ನಿಮ್ಮ ಮೂಲಕ ಪಾವತಿಸಲಾದ ತೆರಿಗೆ ನಿಮ್ಮ ತೆರಿಗೆ ಹೊಣೆಗಾರಿಕೆಗಿಂತ ಕಡಿಮೆ ಇದ್ದರೆ, (ಫಾರ್ಮ್ 26 AS ಪ್ರಕಾರ) ಆಗ ಮಾತ್ರ ನೀವು ಆದಾಯ ತೆರಿಗೆ ಇಲಾಖೆಗೆ ಉಳಿದ ಟ್ಯಾಕ್ಸ್ ಹಣವನ್ನು ಪಾವತಿಸಬೇಕು.

ಇದನ್ನೂ ಓದಿ-SBI ALERT! ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ ಈ Online ಬ್ಯಾಂಕಿಂಗ್ ಸೇವೆಗಳು!

ಫಾರ್ಮ್ 16 ಇಲ್ಲದೆಯೇ ITR ಇ-ಫೈಲಿಂಗ್ ಮಾಡಿ
ನಿಮ್ಮ ತೆರಿಗೆ ಪಾವತಿಯನ್ನು ಪೂರ್ಣಗೊಳಿಸಿದ ಬಳಿಕ, ಅದು ಫಾರ್ಮ್ 26 ASಗೆ (Form 26AS) ಬರುವ ವರೆಗೆ ನಿರೀಕ್ಷಿಸಿ. ಒಂದು ವೇಳೆ ನಿಮ್ಮ ತೆರಿಗೆ ಹೊಣೆಗಾರಿಕೆ ನಿಮ್ಮ ಮೂಲಕ ಪಾವತಿಸಲಾದ ತೆರಿಗೆಯೊಂದಿಗೆ ಮ್ಯಾಚ್ ಆದರೆ, ನೀವು ಫಾರ್ಮ್ 16 ಹೊರತುಪಡಿಸಿಯೂ ಕೂಡ ITR ಇ-ಫೈಲಿಂಗ್ (ITR e-Filing)ಮಾಡಬಹುದು.

ಇದನ್ನೂ ಓದಿ-Corona Impact: ನಗದು ಬಳಕೆಯಲ್ಲಿ ವಿಚಿತ್ರ ಬದಲಾವಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News