DA Hike Update News: ಬರುವ ಶುಕ್ರವಾರ ಅಂದರೆ ಕೇವಲ ಎರಡೇ ದಿನಗಳ ಬಳಿಕ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಹೆಚ್ಚಳವನ್ನು ಜುಲೈ 1, 2022 ರಿಂದ ಘೋಷಿಸುವ ನಿರೀಕ್ಷೆ ಇದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ,  ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಇಎಂಐಗಳ ಹಿನ್ನೆಲೆ ಮೋದಿ ಸರ್ಕಾರ ಕೇಂದ್ರ ನೌಕರರ ತುಟ್ಟಿ ಭತ್ಯೆಯಲ್ಲಿ ಭಾರಿ ಏರಿಕೆ ಮಾಡಲು ಹೊರಟಿದೆ. ಈ ಮೊದಲು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕೈಗಾರಿಕಾ ಕಾರ್ಮಿಕರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ತುಟ್ಟಿಭತ್ಯೆಯನ್ನು ಶೇಕಡಾ 5 ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ನೌಕರರು ಪ್ರಸ್ತುತ ಶೇ. 34 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ ಮತ್ತು ಇದಕ್ಕೂ ಮೊದಲು ಅದು ಶೇ.38 ಕ್ಕೆ ಏರಿಕೆಯಾಗುವ ನಿರೀಕ್ಷೆ ವ್ಯಕ್ತಪಡಿಸಲಾಗಿತ್ತು. ಆದರೆ ಇದೀಗ ತುಟ್ಟಿಭತ್ಯೆ ಶೇ.5ರಷ್ಟು ಹೆಚ್ಚಾಗುವುದು ಬಹುತೇಕ ನಿಚ್ಚಳಗಾಗಿದೆ, ಅದನ್ನು ಶೇ.39ಕ್ಕೆ ಹೆಚ್ಚಿಸಲಾಗುವುದು ಎಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಏಪ್ರಿಲ್ ತಿಂಗಳ ಅಖಿಲ-ಭಾರತದ ಗ್ರಾಹಕ ಬೆಲೆ ಸೂಚ್ಯಂಕದ ಅಂಕಿ-ಅಂಶಗಾನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಂದಾಜನ್ನು ವ್ಯಕ್ತಪಡಿಸಲಾಗುತ್ತಿದೆ.


ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಜುಲೈ ತಿಂಗಳಲ್ಲಿ, ಸರ್ಕಾರವು ತುಟ್ಟಿಭತ್ಯೆ (ಡಿಎ) ಯಲ್ಲಿ ಭಾರಿ ಹೆಚ್ಚಳ ಮಾಡಬಹುದು ಎಂದು ಊಹಿಸಲಾಗಿದೆ. ಇದು ಸಂಭವಿಸಿದಲ್ಲಿ, ಕೇಂದ್ರ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.34ರಿಂದ ಶೇ.39ಕ್ಕೆ ಹೆಚ್ಚಿಸಿದರೆ, ಕೇಂದ್ರ ನೌಕರರ ವೇತನವನ್ನು 8,000 ರೂ.ನಿಂದ 27,000 ರೂ.ಹೆಚ್ಚಾಗಲಿದೆ.


ಇದನ್ನೂ ಓದಿ-PM Kisan: ಪಿಎಂ ಕಿಸಾನ್ ಫಲಾನುಭಾವಿಗಳಿಗೆ ಬಿಗ್ ಶಾಕ್, ಇನ್ಮುಂದೆ ಈ ಮಹತ್ವದ ಸೌಕರ್ಯ ರೈತರಿಗೆ ಸಿಗಲ್ಲ


ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 47 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರಿಗೆ ಭಾರಿ ಲಾಭ ತರಲಿದೆ. ಸಾಮಾನ್ಯವಾಗಿ, ಜನವರಿ 1 ಮತ್ತು ಜುಲೈ 1 ರಿಂದ ತುಟ್ಟಿಭತ್ಯೆ ಹೆಚ್ಚಿಸುವ ಪ್ರವೃತ್ತಿ ಕಂಡುಬಂದಿದೆ, ಇಂತಹ ಪರಿಸ್ಥಿತಿಯಲ್ಲಿ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಈ ಭಾರಿ ಉಡುಗೊರೆ ಸಿಗಲಿದೆ.


ಇದನ್ನೂ ಓದಿ-Reliance Jio ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ, ಮುಂದಿನ ನಿರ್ದೇಶಕ ಯಾರು?


ಚಿಲ್ಲರೆ ಹಣದುಬ್ಬರ ದತ್ತಾಂಶದ ಆಧಾರದ ಮೇಲೆ ಕೇಂದ್ರ ಸರ್ಕಾರವು ಜನವರಿ ಮತ್ತು ಜುಲೈ ತಿಂಗಳಲ್ಲಿ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಪರಿಷ್ಕರಿಸುತ್ತದೆ. ದೇಶದಲ್ಲಿ ಹಣದುಬ್ಬರವು ಆರ್‌ಬಿಐ ಅಂದಾಜಿನ ಗಡಿಯನ್ನು ತಲುಪಿದೆ ಎಂಬುದು ಇಲ್ಲಿ ಉಲ್ಲೇಖನೀಯ . ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆಯ ಮಟ್ಟವಾದ ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಚಿಲ್ಲರೆ ಹಣದುಬ್ಬರದ ದರವು ಮೇ ತಿಂಗಳಲ್ಲಿ ಶೇ. 7.04 ಪ್ರತಿಶತದಷ್ಟಿದೆ, ಇದು ಸಗಟು ಬೆಲೆ ಹಣದುಬ್ಬರದ ಆಧಾರದ ಮೇಲೆ ಇದೀಗ ಶೇ.1ಕ್ಕೆ ತಲುಪಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.